Travel 2021: ತಂತ್ರಜ್ಞಾನದ ಈ ಯುಗದಲ್ಲಿ ಮಹಿಳೆಯರು ಬಾಹ್ಯಾಕಾಶವನ್ನು ತಲುಪಿದ್ದರೂ ಕೂಡ ಇಂದಿಗೂ ಭೂಮಿಯ ಮೇಲೆ ಮಹಿಳೆಯರಿಗೆ ಹೋಗಲು ಅವಕಾಶವಿಲ್ಲದ ಅನೇಕ ಸ್ಥಳಗಳಿವೆ. ಈ ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ನವದೆಹಲಿ: Travel 2021 - ಜಗತ್ತು ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ, ಡಿಜಿಟಲೀಕರಣದ ಈ ಕಾಲದಲ್ಲೂ ಕೂಡ ಮಹಿಳೆಯರ ವಿಷಯದಲ್ಲಿ ತಾರತಮ್ಯವನ್ನು ಕೆಲವೆಡೆ ಸ್ಪಷ್ಟವಾಗಿ ಕಾಣಬಹುದು. ವಿಶ್ವಾದ್ಯಂತ ಬಾಹ್ಯಾಕಾಶಕ್ಕೆ ಭೇಟಿ ನೀಡಿದ ಅನೇಕ ಮಹಿಳೆಯರು ಇದ್ದಾರೆ. ಆದರೆ ಕೆಲವು ಸ್ಥಳಗಳಲ್ಲಿ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ (women not allowed). ಈ ನಿಷೇಧವು ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತದ ಕೆಲ ವಿಶೇಷ ಸ್ಥಳಗಳಲ್ಲಿ ನೀವು ನೋಡಬಹುದು. ಇಂದು ನಾವು ಮಹಿಳೆಯರಿಗೆ ಹೋಗಲು (World Travel) ಅನುಮತಿಸದ ಕೆಲವು ಆಯ್ದ ಸ್ಥಳಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
1. ರಾಜಸ್ಥಾನದ ಕಾರ್ತಿಕೇಯ ದೇವಸ್ಥಾನ (Kartikeya Temple) - ರಾಜಸ್ಥಾನ ರಾಜ್ಯದ ಪುಷ್ಕರ್ ನಗರದಲ್ಲಿ ಕಾರ್ತಿಕೇಯನ ದೇವಾಲಯವಿದೆ. ಈ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶಕ್ಕೆ ನಿಷೇಧವಿದೆ. ವಾಸ್ತವವಾಗಿ, ಈ ದೇವಾಲಯದಲ್ಲಿ ಕಾರ್ತಿಕೇಯ ಬ್ರಹ್ಮಚಾರಿ ರೂಪವನ್ನು ಹೊಂದಿದ್ದಾನೆ ಮತ್ತು ಈ ದೇವಾಲಯವನ್ನು ಪ್ರವೇಶಿಸಿದ ಮಹಿಳೆಯರಿಗೆ ದೇವರು ಶಾಪ ನೀಡುತ್ತಾನೆ ಎಂದು ನಂಬಲಾಗಿದೆ.
2. ಅಮೇರಿಕಾದ ಬರ್ನಿಂಗ್ ಟ್ರೀ ಕ್ಲಬ್ (Burning Tree Club) - ಯುನೈಟೆಡ್ ಸ್ಟೇಟ್ಸ್ನ ಮೇರಿಲ್ಯಾಂಡ್ನಲ್ಲಿ ಪುರುಷರಿಗಾಗಿ ಬರ್ನಿಂಗ್ ಟ್ರೀ ಕ್ಲಬ್ ಎಂಬ ವಿಶಿಷ್ಟವಾದ ಗಾಲ್ಫ್ ಕ್ಲಬ್ ಇದೆ. ಈ ಪ್ರತಿಷ್ಠಿತ ಕ್ಲಬ್ನಲ್ಲಿ ಅಧ್ಯಕ್ಷರಿಂದ ಮುಖ್ಯ ನ್ಯಾಯಮೂರ್ತಿಗಳವರೆಗೆ ಸದಸ್ಯರಿದ್ದಾರೆ. ಆದರೆ ಇಂದಿಗೂ ಮಹಿಳೆಯರಿಗೆ ಈ ಕ್ಲಬ್ ಪ್ರವೇಶಿಸಲು ಅವಕಾಶವಿಲ್ಲ.
3. ಮೌಂಟ್ ಎಥೋಸ್, ಗ್ರೀಸ್ (Mount Ethos) - ಇದು 1000 ವರ್ಷಗಳಿಗಿಂತ ಅಧಿಕ ಕಾಲ ಗತಿಸಿದರೂ ಕೂಡ ಇಂದಿಗೂ ಮಹಿಳೆಯರಿಗೆ ಈ ಸ್ಥಳಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಗ್ರೀಸ್ನ ಮೌಂಟ್ ಅಥೋಸ್ನಲ್ಲಿರುವ ಈ ಕ್ಯಾಥೆಡ್ರಲ್ ತುಂಬಾ ಪವಿತ್ರವಾಗಿದೆ, ಇಲ್ಲಿ ಕೇವಲ 100 ಧರ್ಮದ ಪುರುಷರು ಮತ್ತು 10 ಧರ್ಮೇತರ ಪುರುಷರು ಒಂದೇ ಬಾರಿಗೆ ತೀರ್ಥಯಾತ್ರೆ ಮಾಡಬಹುದು. ಇಂದಿಗೂ ಈ ಧಾರ್ಮಿಕ ಪವಿತ್ರ ಚರ್ಚ್ನಲ್ಲಿ ಪ್ರಾಚೀನ ನಿಯಮಗಳನ್ನು ಅನುಸರಿಸಲಾಗುತ್ತದೆ.
4. ಸಬರಿಮಲೈ, ಕೇರಳ (Okinoshima Island) - ಕೇರಳದ ಪ್ರಸಿದ್ಧ ದೇಗುಲ ಶಬರಿಮಲೆಗೂ ಮಹಿಳೆಯರಿಗೆ ಪ್ರವೇಶ ಇರಲಿಲ್ಲ. ಆದರೆ, ನಂತರ ನ್ಯಾಯಾಲಯವು ಮಹಿಳೆಯರ ಪರವಾಗಿ ತೀರ್ಪು ನೀಡಿದೆ. ಈ ಬಗ್ಗೆ ಹಲವು ಬಾರಿ ಚರ್ಚೆ ನಡೆದು ನ್ಯಾಯಾಲಯದಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ. ಇಷ್ಟೆಲ್ಲಾ ಆದರೂ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನ ಪ್ರವೇಶಿಸುವುದು ಕಷ್ಟ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ದೇವತೆಗಳು ಅವಿವಾಹಿತರು ಎನ್ನಲಾಗುತ್ತದೆ.
5. ಒಕಿನೋಶಿಮಾ ಐಲ್ಯಾಂಡ್, ಜಪಾನ್ (Okinoshima Island) - ಇದೊಂದು ಪವಿತ್ರ ಜಪಾನೀ ದ್ವೀಪ, ಓಕಿನೋಶಿಮಾ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, ಶಿಂಟೋ ಧರ್ಮ ಮತ್ತು ಸಂಪ್ರದಾಯಗಳ ಕಾರಣದಿಂದಾಗಿ ಅಲ್ಲಿ ಮಹಿಳೆಯರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಶಿಂಟೋ ಸಂಪ್ರದಾಯವು ಬೌದ್ಧಧರ್ಮ, ಟಾವೊ ತತ್ತ್ವ ಮತ್ತು ಚೀನಾದ ಮಿಶ್ರಣವಾಗಿದೆ.