Vastu Tips: ಆರ್ಥಿಕ ಪ್ರಗತಿಯನ್ನು ಸ್ಥಗಿತಗೊಳಿಸುತ್ತವೆ ಈ ವಾಸ್ತು ದೋಷಗಳು

                  

Vastu Tips: ಪ್ರತಿದಿನ ನಾವು ಸಾಕಷ್ಟು ಕೆಲಸಗಳನ್ನು ಮಾಡುತ್ತೇವೆ ಮತ್ತು ಈ ಸಮಯದಲ್ಲಿ ತಿಳಿದೋ ತಿಳಿಯದೆಯೋ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ಕೆಲವೊಮ್ಮೆ ತಪ್ಪುಗಳು ಸಣ್ಣ ಹಾನಿಯನ್ನುಂಟುಮಾಡುತ್ತವೆ. ಆದರೆ ಕೆಲವೊಮ್ಮೆ ಅವು ಜೀವನದಲ್ಲಿ ಬಿಕ್ಕಟ್ಟನ್ನು ತಂದೊಡ್ಡುತ್ತವೆ. ಇಂತಹ ತಪ್ಪುಗಳು ವ್ಯಕ್ತಿಯ ಆರ್ಥಿಕ ಪ್ರಗತಿ, ವೃತ್ತಿ ಪ್ರಗತಿಯನ್ನು ನಿಲ್ಲಿಸುತ್ತವೆ. ವಾಸ್ತು ಶಾಸ್ತ್ರದಲ್ಲಿ, ಪ್ರತಿಯೊಬ್ಬರೂ ತಪ್ಪಿಸಬೇಕಾದ ಕೆಲವು ತಪ್ಪುಗಳ ಬಗ್ಗೆ ಉಲ್ಲೇಖಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ದೇವರ ವಿಗ್ರಹಗಳು-ಫೋಟೋಗಳನ್ನು  ಎಂದಿಗೂ ಮುಖಾಮುಖಿಯಾಗಿ ಇಡಬೇಡಿ. ಹಾಗೆ ಮಾಡುವುದರಿಂದ ಆರ್ಥಿಕ ಪ್ರಗತಿಯ ಹಾದಿ ಮುಚ್ಚುತ್ತದೆ. ಜೊತೆಗೆ ಎಷ್ಟೇ ಕಷ್ಟ ಪಟ್ಟು ದುಡಿದರೂ ಹಣ ಕೈಸೇರುವಲ್ಲಿ ಅಡೆತಡೆಗಳು ಉಂಟಾಗುತ್ತವೆ.  

2 /5

ಮನೆಯಲ್ಲಿ ಪೊರಕೆಗೆ ಸಂಬಂಧಿಸಿದಂತೆ ಯಾವಾಗಲೂ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ. ಎಂದಿಗೂ ಸಹ ಪೊರಕೆಯನ್ನು ಕಾಲಿಗೆ ಸ್ಪರ್ಶಿಸಬೇಡಿ.  ಹೀಗೆ ಮಾಡುವುದರಿಂದ ಹಣದ ನಷ್ಟವಾಗುತ್ತದೆ.   

3 /5

ಮುರಿದ ಪಾತ್ರೆಗಳನ್ನು ಎಂದಿಗೂ ಬಳಸಬೇಡಿ. ಹರಿದ ಬೂಟುಗಳು ಅಥವಾ ಬಟ್ಟೆಗಳನ್ನು ಧರಿಸಬೇಡಿ. ಈ ರೀತಿ ಮಾಡುವುದರಿಂದ ಮನೆಗೆ ಹಣ ಬರುವ ದಾರಿ ಮುಚ್ಚಿ ಕುಟುಂಬ ಬಡತನದಲ್ಲಿ ಮುಳುಗುತ್ತದೆ ಎಂದು ಹೇಳಲಾಗುತ್ತದೆ.

4 /5

ಮನೆಯಲ್ಲಿ ಬೋನ್ಸಾಯ್ ಮರವನ್ನು ನೆಡುವುದರಿಂದ ಪ್ರಗತಿ ನಿಲ್ಲುತ್ತದೆ. ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಬೋನ್ಸಾಯ್ ಮರಗಳನ್ನು ಎಂದಿಗೂ ನೆಡಬೇಡಿ. ಇದರ ಹೊರತಾಗಿ ಮುಳ್ಳಿನ ಮರ, ಗಿಡಗಳನ್ನು ನೆಡಬೇಡಿ.   

5 /5

ಹರಿದ ಪರ್ಸ್ ಅನ್ನು ಎಂದಿಗೂ ಬಳಸಬೇಡಿ. ಪರ್ಸ್ ನಮ್ಮ ಆದಾಯಕ್ಕೆ ನೇರವಾಗಿ ಸಂಬಂಧಿಸಿದೆ. ಹರಿದ ಪರ್ಸ್ ನಿಮ್ಮ ಆದಾಯವನ್ನು ಕಡಿಮೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.