Mahalakshmi Ravindran : ಪ್ರೀತಿಯನ್ನು ಕುರುಡು ಎಂದು ಕರೆಯಲಾಗುತ್ತದೆ. ಕೆಲವರಿಗೆ ಇದು ನಿಜ. ಅದರಲ್ಲಿ ಮಹಾಲಕ್ಷ್ಮಿ ಮತ್ತು ರವೀಂದರ್ ದಂಪತಿಯನ್ನು ನೋಡಿದರೆ ಈ ವಿಷಯ ನಿಜವೇ ಅನ್ನಿಸುತ್ತದೆ. ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದ್ರನ್ ಚಂದ್ರಶೇಖರನ್ ಮದುವೆಯಾಗಿ ಹಲವು ತಿಂಗಳುಗಳಾಗಿವೆ. ಆದರೆ ಈ ಜೋಡಿ ಆಗಾಗ ಸುದ್ದಿಯಲ್ಲಿರುತ್ತದೆ.
ಮೊದಲ ಮದುವೆಯಲ್ಲಿ ಮಗನನ್ನು ಹೊಂದಿದ್ದ ಮಹಾಲಕ್ಷ್ಮಿ ನಂತರ ನಿರ್ಮಾಪಕ ರವೀಂದರ್ ಅವರನ್ನು ವಿವಾಹವಾದರು. ಇವರಿಬ್ಬರು ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.
ಮಹಾಲಕ್ಷ್ಮೀ ಹಾಗೂ ರವೀಂದರ್ ವಿಚ್ಛೇದನ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಈ ಜೋಡಿ ಈ ವದಂತಿಗೆ ತೆರೆ ಎಳೆದಿದೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ಹಂಚಿಕೊಳ್ಳುವ ಮೂಲಕ ಮಹಾಲಕ್ಷ್ಮೀ ಎಲ್ಲಾ ಸುಳ್ಳು ಸುದ್ದಿಗೆ ಬ್ರೇಕ್ ಹಾಕಿದ್ದಾರೆ.
ನೀವು ನನ್ನ ಭುಜದ ಮೇಲೆ ಕೈ ಇಟ್ಟರೆ ನಾನು ಈ ಜಗತ್ತಿನಲ್ಲಿ ಏನು ಬೇಕಿದ್ದರೂ ಮಾಡಬಲ್ಲೆ ಎಂದು ಈ ಫೋಟೋಗಳಿಗೆ ಮಹಾಲಕ್ಷ್ಮೀ ಶೀರ್ಷಿಕೆ ನೀಡಿದ್ದು ನಮ್ಮ ನಡುವೆ ಎಲ್ಲವೂ ಸರಿಯಾಗಿದೆ ಎಂಬ ಸಂದೇಶ ಸಾರಿದ್ದಾರೆ.
ನಿರ್ಮಾಪಕ ರವೀಂದ್ರ ಚಂದ್ರಶೇಖರ್ ಜೊತೆ ಮದುವೆಯಾದ ನಂತರ ನಟಿ ಮಹಾಲಕ್ಷ್ಮಿ ಸದಾ ಸುದ್ದಿಯಲ್ಲಿರುತ್ತಾರೆ. ಮತ್ತು ಅವರು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಆದರೆ ಮದುವೆಯಾದ ನಂತರವೂ ಸೋಷಿಯಲ್ ಮೀಡಿಯಾ ಬಳಕೆದಾರರು ಈ ಜೋಡಿಯನ್ನು ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ.