ಈ ಭಾರತೀಯ ಐವರು ಸ್ಟಾರ್ ಆಟಗಾರರ ಪತ್ನಿಯರು ಸೌಂದರ್ಯದಲ್ಲಿ ಯಾವುದೇ ಬಾಲಿವುಡ್ ನಟಿಯರಿಗಿಂತಲೂ ಕಡಿಮೆಯಿಲ್ಲ.
ಕ್ರಿಕೆಟ್ ಆಡುವ ಆಟಗಾರರು ಮೈದಾನದ ಒಳಗೂ ಹೊರಗೂ ಸಾಕಷ್ಟು ಖ್ಯಾತಿ ಹೊಂದಿರುತ್ತಾರೆ. ಈ ಕ್ರಿಕೆಟಿಗರು ಹೆಚ್ಚು ಪ್ರಸಿದ್ಧರಾದಷ್ಟೂ ಅವರ ಪತ್ನಿಯರು ಕೂಡ ಚರ್ಚೆಯಲ್ಲಿರುತ್ತಾರೆ. ಉದಾಹರಣೆಗೆ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅಥವಾ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅವರನ್ನು ನೋಡಬಹುದು. ಆದರೆ ಕೆಲವು ಕ್ರಿಕೆಟಿಗರ ಪತ್ನಿಯರು ಇದ್ದಾರೆ, ಅವರು ಯಾವಾಗಲು ಜನರಿಂದ ಸಾಕಷ್ಟು ಅಂತರ ಕಾಯ್ದುಕೊಂಡಿರುತ್ತಾರೆ. ಕೆಲವೇ ಜನರಿಗೇ ಮಾತ್ರ ಅವರಿಗೆ ತಿಳಿದಿರುತ್ತದೆ. ಈ ಆಟಗಾರರ ಪತ್ನಿಯರು ಪ್ರಚಾರದಿಂದ ಬಹುದೂರವಿರುತ್ತಾರೆ. ಕ್ಯಾಮೆರಾ ಕಂಡರೆ ಸಾಕು ತಮ್ಮನ್ನೇ ತಾವು ಮರೆಮಾಚಿಕೊಳ್ಳುತ್ತಾರೆ. ಭಾರತೀಯ ಐವರು ಸ್ಟಾರ್ ಆಟಗಾರರ ಪತ್ನಿಯರು ಸೌಂದರ್ಯದಲ್ಲಿ ಯಾವುದೇ ಬಾಲಿವುಡ್ ನಟಿಯರಿಗಿಂತಲೂ ಕಡಿಮೆಯಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಟೀಂ ಇಂಡಿಯಾದ ಮುಖ್ಯ ಕೋಚ್ ಮತ್ತು ಮಾಜಿ ನಾಯಕ ರಾಹುಲ್ ದ್ರಾವಿಡ್ ಸಾಮಾಜಿಕ ಮಾಧ್ಯಮ ಮತ್ತು ಪಾರ್ಟಿಗಳಿಂದ ದೂರವಿರುತ್ತಾರೆ. ಅವರ ಪತ್ನಿ ವಿಜೇತಾ ಪೆಂಡಾರ್ಕರ್ ಅವರು ಕೂಡ ಪತಿಯಂತೆಯೇ ನಡೆದುಕೊಳ್ಳುತ್ತಾರೆ. ವಿಜೇತಾ ಅವರು ವೃತ್ತಿಯಲ್ಲಿ ಶಸ್ತ್ರಚಿಕಿತ್ಸಕರಾಗಿದ್ದು, ಸರಳ ಜೀವನವನ್ನು ನಡೆಸುತ್ತಿದ್ದಾರೆ. ದ್ರಾವಿಡ್ ಮತ್ತು ವಿಜೇತಾ ಅವರು 4 ಮೇ 2003ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಟೀಂ ಇಂಡಿಯಾ ಬ್ಯಾಟ್ಸ್ ಮನ್ ಅಜಿಂಕ್ಯ ರಹಾನೆ ಅವರ ಪತ್ನಿ ರಾಧಿಕಾ ಧೋಪಾವ್ಕರ್ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ರಹಾನೆ ಹಲವಾರು ಸಂದರ್ಭಗಳಲ್ಲಿ ತಮ್ಮ ಯಶಸ್ಸನ್ನು ತಮ್ಮ ಪತ್ನಿ ರಾಧಿಕಾ ಮತ್ತು ಅವರ ತಾಯಿಗೆ ಸಲ್ಲಿಸಿದ್ದಾರೆ. ರಹಾನೆ ಮತ್ತು ರಾಧಿಕಾ ಬಾಲ್ಯದ ಸ್ನೇಹಿತರು. ಇವರಿಬ್ಬರು 26 ಸೆಪ್ಟೆಂಬರ್ 2014ರಂದು ವಿವಾಹವಾದರು. ರಾಧಿಕಾ ಆಗಾಗ ತನ್ನ ಪತಿಯೊಂದಿಗೆ ಅಂತಾರಾಷ್ಟ್ರೀಯ ಪ್ರವಾಸ ಮತ್ತು ದೇಶೀಯ ಪಂದ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಅವರು ವಿರಳವಾಗಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಾರೆ.
ಚೇತೇಶ್ವರ್ ಪೂಜಾರ ಟೆಸ್ಟ್ ಕ್ರಿಕೆಟ್ಗೆ ಸೀಮಿತರಾಗಿದ್ದಾರೆ. ಚೇತೇಶ್ವರ್ ಮತ್ತು ಪೂಜಾ ಕುಟುಂಬ ಸ್ನೇಹಿತರಿಂದ ಪರಸ್ಪರ ಪರಿಚಯವಾದ ಕಾರಣ ಅರೇಂಜ್ಡ್ ಮ್ಯಾರೇಜ್ ಸೆಟಪ್ನಲ್ಲಿ ವಿವಾಹವಾದರು. ದಂಪತಿಗಳು ಪರಸ್ಪರ ಇಷ್ಟಪಟ್ಟು ತಮ್ಮ ಸಂಬಂಧವನ್ನು ಮುಂದುವರಿಸಲು ನಿರ್ಧರಿಸಿದರು. 2013ರಲ್ಲಿ ಇವರಿಬ್ಬರು ವಿವಾಹವಾದರು. ಪೂಜಾ ಅನೇಕ ಬಾರಿ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಆಟಗಾರರನ್ನು ಹುರಿದುಂಬಿಸಲು ಕಾಣಿಸಿಕೊಂಡಿದ್ದರು. ಆದರೆ ಅವರು ಮಾಧ್ಯಮಗಳು ಮತ್ತು ಕ್ಯಾಮೆರಾ ಕಣ್ಣುಗಳಿಂದ ದೂರವಿರುತ್ತಾರೆ.
ಟೀಂ ಇಂಡಿಯಾದ ವೇಗದ ಬೌಲರ್ ಇಶಾಂತ್ ಶರ್ಮಾ ಅವರ ಪತ್ನಿ ಪ್ರತಿಮಾ ಅವರು 2003ರಲ್ಲಿ ಬ್ಯಾಸ್ಕೆಟ್ಬಾಲ್ ಆಡಲು ಪ್ರಾರಂಭಿಸಿದರು. ಅವರು ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿದ್ದಾರೆ. ಪ್ರತಿಮಾ ಮೊದಲ 3×3 FIBA ಏಷ್ಯಾ ಚಾಂಪಿಯನ್ಶಿಪ್ ಗೆದ್ದರು ಮತ್ತು 2012ರ ಎಲ್ಲಾ ಪಂದ್ಯಾವಳಿಗಳಲ್ಲಿ ಅತಿಹೆಚ್ಚು ಸ್ಕೋರರ್ ಆದರು. ಈ ಜೋಡಿ ಡಿಸೆಂಬರ್ 10, 2016ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿತು. ಇಶಾಂತ್ ಶರ್ಮಾ ಅವರು ಮೊದಲ ನೋಟದಲ್ಲಿಯೇ ಪ್ರತಿಮಾರನ್ನು ಇಷ್ಟಪಟ್ಟಿದ್ದರಂತೆ.
2011ರ ವಿಶ್ವಕಪ್ ಗೆಲುವಿನ ಹೀರೋ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ನತಾಶಾ ಜೈನ್ ಅವರನ್ನು ವಿವಾಹವಾದರು. ನತಾಶಾ ಅಮೃತಸರದಲ್ಲಿ ವ್ಯಾಪಾರಿ ವರ್ಗದ ಕುಟುಂಬದಲ್ಲಿ ಜನಿಸಿದರು. ಗಂಭೀರ್ ಮತ್ತು ನತಾಶಾ ಅವರ ಪೋಷಕರು ಇಬ್ಬರೂ ಉದ್ಯಮಿಗಳಾಗಿದ್ದರು ಮತ್ತು ದೀರ್ಘಕಾಲದವರೆಗೆ ಪರಸ್ಪರ ತಿಳಿದಿದ್ದರು. ಇಬ್ಬರೂ ತಕ್ಷಣವೇ ಸ್ನೇಹಿತರಾದರು ಮತ್ತು ಅಂತಿಮವಾಗಿ 2007ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ICC ಕ್ರಿಕೆಟ್ ವಿಶ್ವಕಪ್ 2011ರ ನಂತರ ಅವರು 28 ಅಕ್ಟೋಬರ್ 2011ರಂದು ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಗಂಭೀರ್ ಪತ್ನಿ ಕೂಡ ಲೈಮ್ ಲೈಟ್ ನಿಂದ ದೂರ ಉಳಿದಿದ್ದಾರೆ.