Acharya Chanakya Lessons In Kannada: ಹಣ ಗಳಿಕೆಯ ಜೊತೆಗೆ ಹಣ ಹೇಗೆ ವೆಚ್ಚ ಮಾಡಬೇಕು ಎಂಬುದರ ಕುರಿತು ಕೂಡ ಚಾಣಕ್ಯ ನೀತಿಯಲ್ಲಿ ಮಾರ್ಗದರ್ಶನಗಳನ್ನು ನೀಡಲಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ, ಕೆಲ ಸ್ಥಳಗಳಲ್ಲಿ ಹಣ ವೆಚ್ಚ ಮಾಡುವಲ್ಲಿ ಹಿಂಜರಿಯಬಾರದು ಎನ್ನಲಾಗಿದೆ.
Acharya Chanakya Lessons In Kannada: ಹಣ ಗಳಿಕೆಯ ಜೊತೆಗೆ ಹಣ ಹೇಗೆ ವೆಚ್ಚ ಮಾಡಬೇಕು ಎಂಬುದರ ಕುರಿತು ಕೂಡ ಚಾಣಕ್ಯ ನೀತಿಯಲ್ಲಿ ಮಾರ್ಗದರ್ಶನಗಳನ್ನು ನೀಡಲಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ, ಕೆಲ ಸ್ಥಳಗಳಲ್ಲಿ ಹಣ ವೆಚ್ಚ ಮಾಡುವಲ್ಲಿ ಹಿಂಜರಿಯಬಾರದು ಎನ್ನಲಾಗಿದೆ. ಆ ಸ್ಥಳಗಳಲ್ಲಿ ಹಣ ವೆಚ್ಚ ಮಾಡುವುದರಿಂದ ಘನತೆ-ಗೌರವ ಹೆಚ್ಚಾಗುತ್ತದೆ ಮತ್ತು ದೇವ-ದೇವತೆಗಳ ಕೃಪೆಯಿಂದ ಧನ-ಸಂಪತ್ತು ಕೂಡ ಹೆಚ್ಚಾಗುತ್ತದೆ ಎನ್ನಲಾಗಿದೆ. ಹಾಗಾದರೆ ಬನ್ನಿ ಯಾವ ಕೆಲಸಗಳಲ್ಲಿ ಹಣ ವೆಚ್ಚ ಮಾಡಲು ಹಿಂದೇಟು ಹಾಕಬಾರದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಇದನ್ನೂ ಓದಿ-Hair Care Tips: ಮುಂಗಾರಿನ ಋತುವಿನಲ್ಲಿ ಕೂದಲಿಗೆ ಬಣ್ಣ ಹಾಕುವಾಗ ಈ ಸಂಗತಿಗಳು ನೆನಪಿರಲಿ
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
1. ಯಾವುದೇ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯ ಸಹಾಯ ಮಾಡುವಲ್ಲಿ ಹಿಂಜರಿಯಬಾರದು. ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಸಹಾಯ ಮಾಡುವುದರಿಂದ ಸಾಕಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ. ಇಂತಹ ವ್ಯಕ್ತಿಗೆ ಅನಾರೋಗ್ಯದಿಂದ ಬಳಲುವ ವ್ಯಕ್ತಿಯ ಆಶೀರ್ವಾದ ಲಭಿಸುತ್ತದೆ ಹಾಗೂ ದೇವರು ಕೂಡ ಆತನ ಮೇಲೆ ಪ್ರಸನ್ನನಾಗುತ್ತಾನೆ ಎನ್ನಲಾಗುತ್ತದೆ.
2. ಬಡ ಜನರಿಗಾಗಿ ಅನ್ನ-ನೀರಿನ ವ್ಯವಸ್ಥೆ ಮಾಡುವಲ್ಲಿ ಎಂದಿಗೂ ಕೂಡ ಹಿಂಜರಿಯಬಾರದು ಎನ್ನಲಾಗಿದೆ. ಬಡ ಜನರಿಗೆ ಅನ್ನ-ನೀರು ನೀಡುವುದು ಪುಣ್ಯದ ಕೆಲಸವಾಗಿದೆ. ಯಾವಾಗಲು ಇಂತಹ ಕೆಲಸಗಳಲ್ಲಿ ಕೈ ಬಿಚ್ಚಿ ದಾನ ಮಾಡಬೇಕು ಎನ್ನಲಾಗುತ್ತದೆ.
3. ಬಡವರ ಮಕ್ಕಳ ಶಿಕ್ಷಣಕ್ಕೆ ಯಾವಾಗಲು ಎರಡು ಕೈಗಳಿಂದ ದಾನ ಮಾಡಬೇಕು. ಇದರಿಂದ ದೇಶಕ್ಕೆ ಓರ್ವ ವಿದ್ಯಾವಂತ ನಾಗರಿಕ ಸಿಗುತ್ತಾನೆ ಹಾಗೂ ಆ ಮಗುವಿನ ಜೀವನ ಮಟ್ಟ ಕೂಡ ಸುಧಾರಿಸುತ್ತದೆ. ವಿದ್ಯಾ ದಾನಕ್ಕೆ ಧರ್ಮಶಾಸ್ತ್ರಗಳಲ್ಲಿಯೂ ಕೂಡ ತುಂಬಾ ಪ್ರಾಮುಖ್ಯತೆಯನ್ನು ನೀಡಲಾಗಿದೆ.
4. ಸಾಮಾಜಿಕ ಕೆಲಸ ಕಾರ್ಯಗಳಲ್ಲಿಯೂ ಕೂಡ ಕೈಬಿಚ್ಚಿ ಹಣ ಖರ್ಚು ಮಾಡಬೇಕು. ಶಾಲೆ-ಆಸ್ಪತ್ರೆಗಳ ನಿರ್ಮಾಣವೇ ಆಗಲಿ ಅಥವಾ ಇತರ ಯಾವುದಾದರೊಂದು ಒಳ್ಳೆಯ ಕೆಲಸವೇ ಆಗಲಿ. ಇದರಲ್ಲಿ ಸಮಾಜದ ಜನರ ಒಳಿತು ಅಡಗಿರುತ್ತದೆ ಮತ್ತು ಸಮಾಜದ ಜನರ ದೃಷ್ಟಿಯಲ್ಲಿ ನಿಮ್ಮ ಘನತೆ ಗೌರವ ಹೆಚ್ಚಾಗುತ್ತದೆ.
5. ಧಾರ್ಮಿಕ ಕೆಲಸ ಕಾರ್ಯಗಳಲ್ಲಿಯೂ ಕೂಡ ಮನಬಿಚ್ಚಿ ಖರ್ಚು ಮಾಡಬೇಕು. ದೇವಸ್ಥಾನದ ನಿರ್ಮಾಣವೇ ಆಗಲಿ ಅಥವಾ ಯಾವುದಾದರೊಂದು ಯಜ್ಞದ ಅನುಷ್ಠಾನವೆ ಆಗಲಿ, ನಿಮ್ಮ ನಗರಕ್ಕೆ ಆಗಮಿಸಿದ ಸಂತರ ಸೇವೆಗಾಗಿ ಹಣ ವೆಚ್ಚ ಮಾಡಲು ಎಂದಿಗೂ ಕೂಡ ಹಿಂಜರಿಯಬೇಡಿ. ಇದರಿಂದ ತುಂಬಾ ಪುಣ್ಯ ಪ್ರಾಪ್ತಿಯಾಗುತ್ತದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)