19 ವರ್ಷಗಳವರೆಗೆ ಇರುವ ಶನಿಯ ಮಹಾದೆಸೆ ಬಿಕಾರಿಯನ್ನು ರಾಜನಾನ್ನಾಗಿಸುವಷ್ಟು ಪವರ್ ಫುಲ್ ! ಏನು ಹೇಳುತ್ತದೆ ನಿಮ್ಮ ಜಾತಕ ಫಲ

Shani Mahadasha effect : ಶನಿಯ ಮಹಾದಶಾದ ಪ್ರಭಾವ ವ್ಯಕ್ತಿಯ ಮೇಲೆ 19 ವರ್ಷಗಳವರೆಗೆ ಇರುತ್ತದೆ. ಈ ಮಹಾದಶ ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ಬರೀ ಬಂದೇ ಬರುತ್ತದೆ

Written by - Ranjitha R K | Last Updated : Apr 21, 2023, 01:11 PM IST
  • ಗ್ರಹಗಳ ಮಹಾದಶಾ ಮತ್ತು ಅಂತರದಶಾ ಕಾಲಕಾಲಕ್ಕೆ ಬದಲಾಗುತ್ತದೆ.
  • ಶನಿಯ ಮಹಾದಶಾ 19 ವರ್ಷಗಳವರೆಗೆ ಇರುತ್ತದೆ.
  • ಮಹಾದಶ ಪ್ರತಿಯೊಬ್ಬರ ಜೀವನದಲ್ಲಿಯೂ ಬರುತ್ತದೆ.
19 ವರ್ಷಗಳವರೆಗೆ ಇರುವ ಶನಿಯ ಮಹಾದೆಸೆ ಬಿಕಾರಿಯನ್ನು ರಾಜನಾನ್ನಾಗಿಸುವಷ್ಟು ಪವರ್ ಫುಲ್ ! ಏನು ಹೇಳುತ್ತದೆ ನಿಮ್ಮ ಜಾತಕ ಫಲ  title=

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಮಹಾದಶಾ ಮತ್ತು ಅಂತರದಶಾ ಕಾಲಕಾಲಕ್ಕೆ ಬದಲಾಗುತ್ತದೆ. ಗ್ರಹಗಳ ಮಹಾದೆಸೆ  ಸಮಯದಲ್ಲಿ, ವ್ಯಕ್ತಿಯ ಜಾತಕದಲ್ಲಿ ಆ ಗ್ರಹವು ಮಂಗಳಕರ ಸ್ಥಾನದಲ್ಲಿದ್ದರೆ, ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾನೆ.  ಶನಿಯ ಮಹಾದೆಸೆ 19 ವರ್ಷಗಳವರೆಗೆ ಇರುತ್ತದೆ. ಈ ಸಮಯದಲ್ಲಿ, ಶನಿಯು ವ್ಯಕ್ತಿಯ ಜಾತಕದಲ್ಲಿ ಪ್ರಬಲ ಸ್ಥಾನದಲ್ಲಿದ್ದರೆ, ಅವನಿಗೆ ಸ್ಥಾನ, ಪ್ರತಿಷ್ಠೆ, ಗೌರವ, ಸಂಪತ್ತು, ವ್ಯಾಪಾರ ಮತ್ತು ಉದ್ಯೋಗದಲ್ಲಿ ಬಡ್ತಿ ಸಿಗುತ್ತದೆ. ಅಂಥವರು ಯಾವ ಕೆಲಸ ಮಾಡಿದರೂ ಯಶಸ್ಸು ಕೈ ಹಿಡಿಯುತ್ತದೆ.   

ಶುಭ ಫಲ : 
ಶನಿಯ ಮಹಾದೆಸೆ ಪ್ರಭಾವ ವ್ಯಕ್ತಿಯ ಮೇಲೆ 19 ವರ್ಷಗಳವರೆಗೆ ಇರುತ್ತದೆ. ಈ ಮಹಾದೆಸೆ ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ಬಾರಿ  ಬಂದೇ ಬರುತ್ತದೆ. ವ್ಯಕ್ತಿಯ ಜಾತಕದಲ್ಲಿ ಶನಿಯು ಉಚ್ಛ ಅಥವಾ ಶುಭ ಸ್ಥಾನದಲ್ಲಿದ್ದರೆ, ಮಹಾದೆಸೆ ಸಮಯದಲ್ಲಿ ವ್ಯಕ್ತಿಯು ಬಹಳಷ್ಟು  ಶುಭ ಫಲಗಳನ್ನೇ ಪಡೆಯುತ್ತಾನೆ. ಆ ವ್ಯಕ್ತಿಯ ಸಂಪತ್ತಿನಲ್ಲಿ ಹೆಚ್ಚಳವಾಗುತ್ತದೆ.  ವ್ಯಾಪಾರಸ್ಥರಿಗೆ ಭಾರೀ ಲಾಭವಾಗುವುದು. ಈ ಸಮಯದಲ್ಲಿ, ವ್ಯಕ್ತಿಯು ರಾಜರಂತೆ  ಬದುಕುತ್ತಾರೆ. 

ಇದನ್ನೂ ಓದಿ : Akshaya Tritiya: ಅಕ್ಷಯ ತೃತೀಯದಲ್ಲಿ ನಿಮ್ಮ ರಾಶಿಗನುಗುಣವಾಗಿ ಈ ವಸ್ತುಗಳನ್ನು ಖರೀದಿಸಿ

ಅಶುಭ ಫಲ ಯಾವಾಗ ? : 
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿಯು ವ್ಯಕ್ತಿಯ ಜಾತಕದಲ್ಲಿ ನೀಚ ಅಥವಾ ಅಶುಭ ಸ್ಥಾನದಲ್ಲಿದ್ದರೆ, ಆ ವ್ಯಕ್ತಿಯು ಮಹಾದೆಸೆ  ಸಮಯದಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ದೊಡ್ಡ ಪ್ರಮಾಣದ ಹಣದ ನಷ್ಟವನ್ನು ಅನುಭವಿಸಬೇಕಾಗುತ್ತದೆ.  ಸಮಾಜದಲ್ಲಿ ಗೌರವ, ಪ್ರತಿಷ್ಠೆ ಕಡಿಮೆಯಾಗುತ್ತಿದೆ. ಆರ್ಥಿಕ ಪರಿಸ್ಥಿತಿ  ಹದಗೆಡುತ್ತದೆ. ಅನಾರೋಗ್ಯ, ಪ್ರಗತಿಯಲ್ಲಿ ಅಡೆತಡೆಗಳು, ವೈಫಲ್ಯವನ್ನು ಎದುರಿಸಬೇಕಾಗುತ್ತದೆ. ತಮ್ಮ ಜೀವನದ 19 ವರ್ಷಗಳ ಕಾಲ ನೋವಿನಲ್ಲಿಯೇ ಕಳೆಯಬೇಕಾಗುತ್ತದೆ. 

 ಪರಿಹಾರ ಏನು ? : 
ಶನಿಯ ಮಹಾದೆಸೆ ಸಮಯದಲ್ಲಿ, ವ್ಯಕ್ತಿಯು ಮಾದಕ ದ್ರವ್ಯ  ಮಾಂಸಾಹಾರ, ತಪ್ಪು ನಡವಳಿಕೆಯಿಂದ ದೂರವಿರಬೇಕು. ಮಹಿಳೆಯರು, ಹಿರಿಯರು, ಅಸಹಾಯಕರು, ಕೂಲಿ ಕಾರ್ಮಿಕರನ್ನು ಅವಮಾನಿಸಬಾರದು. ಶನಿವಾರ ಸಂಜೆ  ಅಶ್ವತ ಮರದ ಕೆಳಗೆ ಎಳ್ಳೆಣ್ಣೆ ದೀಪವನ್ನು ಬೆಳಗಿಸಬೇಕು. ಮರಕ್ಕೆ ಕನಿಷ್ಠ ಮೂರು ಬಾರಿ ಪ್ರದಕ್ಷಿಣೆ ಹಾಕಬೇಕು. ಇದರ ನಂತರ ಶನಿದೇವನ ಮಂತ್ರವನ್ನು ಪಠಿಸಿ. ಶನಿವಾರದಂದು ಕಪ್ಪು ಉದ್ದು, ಕಪ್ಪು ಎಳ್ಳು, ಕಪ್ಪು ಬಟ್ಟೆ, ಕಪ್ಪು ಬೂಟುಗಳು, ಕಪ್ಪು ಛತ್ರಿ ಅಥವಾ ಹಣವನ್ನು ದಾನ ಮಾಡಬೇಕು.

ಇದನ್ನೂ ಓದಿ : Food Astrology: ನಾವು ಸೇವಿಸುವ ಆಹಾರದಿಂದ ಕೂಡ ನಮ್ಮ ಭಾಗ್ಯ ಬದಲಾಗುತ್ತದೆ ಗೊತ್ತಾ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News