Ashad Month Lucky Zodiac sign: ಹಿಂದೂ ಧರ್ಮದ ಪವಿತ್ರ ಮಾಸ ಆಷಾಢ ಬಂತೆಂದರೆ ಸಾಕು ಪೂಜೆ ಪುನಸ್ಕಾರಗಳು ಸಂಭ್ರಮದಿಂದ ಶುರುವಾಗುತ್ತದೆ. ಇನ್ನೊಂದೆದಡೆ ಇದು ಮಳೆಗಾಲದ ಆರಂಭವನ್ನು ಸೂಚಿಸುತ್ತದೆ. ಅಂದಹಾಗೆ ಆಷಾಢ ಮಾಸದ ದೇವಶಯನಿ ಏಕಾದಶಿಯಿಂದ, ಭಗವಾನ್ ವಿಷ್ಣುವು 4 ತಿಂಗಳ ಕಾಲ ಯೋಗ ನಿದ್ರಾಗೆ ಜಾರುತ್ತಾನೆ. ಅದರ ಜೊತೆ ಚಾತುರ್ಮಾಸ ಕೂಡ ಪ್ರಾರಂಭವಾಗುತ್ತದೆ ಎಂಬುದು ನಂಬಿಕೆ.
ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಷಾಢ ಮಾಸವನ್ನು ಪೂರ್ವಾಷಾಢ ಮತ್ತು ಉತ್ತರಾಷಾಢ ರಾಶಿಯ ಮೇಲೆ ಇರಿಸಲಾಗುತ್ತದೆ. ಪೂರ್ಣಿಮಾ ತಿಥಿಯ ದಿನದಂದು ಚಂದ್ರನು ಈ ಎರಡು ರಾಶಿಗಳ ಮಧ್ಯದಲ್ಲಿ ಇರುತ್ತಾನೆ.
ಇದನ್ನೂ ಓದಿ: ನನಗೆ ‘ಆ’ ಕಾಯಿಲೆ ಇದೆ, ಅದೇ ಕಾರಣಕ್ಕೆ ನಾನ್ ವೆಜ್ ತಿನ್ನೋದು ಬಿಟ್ಟಿದ್ದೇನೆ: ವಿರಾಟ್ ಕೊಹ್ಲಿ ಶಾಕಿಂಗ್ ಹೇಳಿಕೆ ವೈರಲ್
ಈ ರಾಶಿಯವರು ವಿಷ್ಣುವಿನ ಆಶೀರ್ವಾದವನ್ನು ಪಡೆಯುವುದಲ್ಲದೆ, ಚಂದ್ರಪ್ರಿಯ ಗಜಕೇಸರಿ ಯೋಗದ ಪ್ರಭಾವಕ್ಕೆ ಒಳಗಾಗುತ್ತಾರೆ. ಅಂದಹಾಗೆ ನಾವಿಂದು ಆಷಾಢ ಮಾಸದ ಅದೃಷ್ಟಶಾಲಿ ರಾಶಿಗಳು ಯಾವುದು ಎಂಬುದನ್ನು ತಿಳಿಯೋಣ.
ಮೇಷ ರಾಶಿಯವರಿಗೆ ಆಷಾಢ ಮಾಸವು ಪ್ರಯೋಜನಕಾರಿಯಾಗಲಿದೆ. ಮೇಷ ರಾಶಿಯ ಜನರು ಈ ತಿಂಗಳು ತಮ್ಮ ವೃತ್ತಿಜೀವನದಲ್ಲಿ ಪ್ರಗತಿಯನ್ನು ಕಾಣುತ್ತಾರೆ. ಜೀವನಶೈಲಿಯಲ್ಲಿ ಸುಧಾರಣೆ ಇರುತ್ತದೆ. ಸ್ವಂತ ವ್ಯಾಪಾರ ಮಾಡುವವರು ಈ ತಿಂಗಳಲ್ಲಿ ಉತ್ತಮ ಲಾಭವನ್ನು ಪಡೆಯುತ್ತಾರೆ ಕುಟುಂಬ ಜೀವನದಲ್ಲಿ ನಡೆಯುತ್ತಿರುವ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ.
ವೃಷಭ ರಾಶಿಯವರಿಗೆ ಆಷಾಢ ಮಾಸದಲ್ಲಿ ಸಂಪತ್ತು ಬರುವ ಸಾಧ್ಯತೆಗಳಿದ್ದು, ವೃತ್ತಿ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಉದ್ಯೋಗವನ್ನು ಹುಡುಕುತ್ತಿರುವ ಯುವಕರು ಈ ಅವಧಿಯಲ್ಲಿ ಒಳ್ಳೆಯ ಸುದ್ದಿಯನ್ನು ಕೇಳುತ್ತಾರೆ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿದ್ದರೆ, ಅವು ಕೊನೆಗೊಳ್ಳುತ್ತವೆ.
ಆಷಾಢ ಮಾಸದಲ್ಲಿ ಸಿಂಹ ರಾಶಿಯ ಜನರು ವಿಷ್ಣುವಿನ ಕೃಪೆಯಿಂದ ಎಲ್ಲಾ ಕ್ಷೇತ್ರಗಳಲ್ಲಿ ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ ಮತ್ತು ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಹಣ ಗಳಿಕೆಯ ಹೊಸ ಮಾರ್ಗಗಳಿರುತ್ತವೆ ಮತ್ತು ಬ್ಯಾಂಕ್ ಬ್ಯಾಲೆನ್ಸ್’ನಲ್ಲಿ ಉತ್ತಮ ಏರಿಕೆ ಕಂಡುಬರುತ್ತದೆ.
ಕನ್ಯಾ ರಾಶಿಯ ಜನರು ಆಷಾಢ ಮಾಸದಲ್ಲಿ ತಮ್ಮನ್ನು ತಾವು ಸಾಬೀತುಪಡಿಸುವಲ್ಲಿ ಯಶಸ್ವಿಯಾಗುತ್ತಾರೆ. ಉದ್ಯೋಗಿಗಳ ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯ ಅವಕಾಶಗಳಿವೆ. ಭಗವಾನ್ ವಿಷ್ಣುವಿನ ಅನುಗ್ರಹದಿಂದ, ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಯಾವುದೇ ಕುಟುಂಬದ ಸದಸ್ಯರೊಂದಿಗೆ ವಿವಾದಗಳು ನಡೆಯುತ್ತಿದ್ದರೆ, ಈ ಅವಧಿಯಲ್ಲಿ ಅದು ಕೊನೆಗೊಳ್ಳುತ್ತದೆ.
ಆಷಾಢ ಮಾಸದಲ್ಲಿ, ತುಲಾ ರಾಶಿಯ ಜನರು ದೊಡ್ಡ ಯಶಸ್ಸನ್ನು ಪಡೆಯುತ್ತೀರಿ. ಭಗವಾನ್ ವಿಷ್ಣುವಿನ ಆಶೀರ್ವಾದವು ನಿಮ್ಮ ಮೇಲೆ ಇರುತ್ತದೆ ಮತ್ತು ಆಸೆಗಳು ಈಡೇರುತ್ತವೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್‌ನಲ್ಲಿ ಉತ್ತಮ ಏರಿಕೆ ಕಂಡುಬರುತ್ತದೆ.
ಇದನ್ನೂ ಓದಿ: ಮಳೆಗಾಲದಲ್ಲಿ ಮನೆಯ ಮುಂದೆ ಈ ಗಿಡವನ್ನು ತೂಗು ಹಾಕಿ… ಹಲ್ಲಿ, ಜೇಡ, ಇರುವೆ, ಸೊಳ್ಳೆ ಇದ್ಯಾವುದೂ ಬರಲ್ಲ!
ಸೂಚನೆ: ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ಜೋತಿಷ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.