Buddha Purnima 2023 Shubh Yog : ಹಿಂದೂ ಕ್ಯಾಲೆಂಡರ್ ಪ್ರಕಾರ ವೈಶಾಖ ಪೂರ್ಣಿಮೆಯ ದಿನದಂದು , ಗೌತಮ ಬುದ್ಧನ ಜನನವಾದದ್ದು. ಆದ್ದರಿಂದ ಈ ದಿನವನ್ನು ಬುದ್ಧ ಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಬೌದ್ಧ ಧರ್ಮದ ಅನುಯಾಯಿಗಳು ಬುದ್ಧ ಪೂರ್ಣಿಮೆಯ ದಿನದಂದು ಭಗವಾನ್ ಬುದ್ಧನಿಗೆ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ವೈಶಾಖ ಪೂರ್ಣಿಮೆ ಹಿಂದೂ ಧರ್ಮದಲ್ಲಿಯೂ ಬಹಳ ವಿಶೇಷವಾಗಿದೆ. ಈ ಬಾರಿ ಮೇ 5 ರಂದು ವೈಶಾಖ ಪೂರ್ಣಿಮೆ ದಿನ ಬರಲಿದೆ. ಈ ಬಾರಿಯ ವೈಶಾಖ ಪೂರ್ಣಿಮೆ ಅಥವಾ ಬುದ್ಧ ಪೂರ್ಣಿಮೆಯ ದಿನ ಅಪರೂಪದ ಶುಭ ಯೋಗ ರೂಪುಗೊಳ್ಳುತ್ತಿದೆ.
ಬುದ್ಧ ಪೂರ್ಣಿಮೆಯಂದು ಗ್ರಹಗಳ ಅಪರೂಪದ ಸಂಯೋಜನೆ :
ವರ್ಷದ ಮೊದಲ ಚಂದ್ರಗ್ರಹಣವು ಮೇ 5 ರಂದು ವೈಶಾಖ ಹುಣ್ಣಿಮೆಯ ದಿನವೇ ಗೋಚರಿಸುತ್ತದೆ. ಈ ಚಂದ್ರಗ್ರಹಣವು ಮೇ 5 ರಂದು ರಾತ್ರಿ 8.45 ರಿಂದ ಮೇ 6 ರ ಮಧ್ಯರಾತ್ರಿ 1 ರವರೆಗೆ ಇರುತ್ತದೆ. ಇದೇ ವೇಳೆ ಮೇ 5ರ ಸೂರ್ಯೋದಯದಿಂದ ಬೆಳಗ್ಗೆ 09:17ರವರೆಗೆ ಸಿದ್ಧಿ ಯೋಗವಿರುತ್ತದೆ. ಈ ದಿನ ಬೆಳಿಗ್ಗೆಯಿಂದ ರಾತ್ರಿ 09:40 ರವರೆಗೆ ಸ್ವಾತಿ ನಕ್ಷತ್ರವಿರಲಿದೆ. 130 ವರ್ಷಗಳ ನಂತರ ಬುದ್ಧ ಪೂರ್ಣಿಮೆಯಂದು ಇಂಥಹ ಯೋಗ ರೂಪುಗೊಳ್ಳುತ್ತಿದೆ. ಈ ಹೊತ್ತಿನಲ್ಲಿ ಶನಿಯು ಸ್ವರಾಶಿ ಕುಂಭದಲ್ಲಿಯೇ ಉಳಿಯಲಿದ್ದು, ಗುರು, ಬುಧ ಮತ್ತು ಸೂರ್ಯ ಮೇಷ ರಾಶಿಯಲ್ಲಿರುತ್ತಾರೆ. ಬುಧ ಮತ್ತು ಸೂರ್ಯ ಒಟ್ಟಿಗೆ ಸೇರಿ ಬುಧಾದಿತ್ಯ ಯೋಗವನ್ನು ರೂಪಿಸುತ್ತಾರೆ. ಈ ಅಪರೂಪದ ಸಂಯೋಜನೆಯಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ನೋಡೋಣ.
ಮೇಷ ರಾಶಿ : ಬುದ್ಧ ಪೂರ್ಣಿಮೆಯಂದು ರೂಪುಗೊಳ್ಳುವ ಅಪರೂಪದ ಯೋಗವು ಮೇಷ ರಾಶಿಯವರಿಗೆ ಶುಭಕರವಾಗಿರುತ್ತದೆ. ಈ ರಾಶಿಯವರ ಆದಾಯ ಹೆಚ್ಚಾಗುತ್ತದೆ. ಇದರಿಂದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಕೆಲಸವನ್ನು ಬದಲಾಯಿಸಲು ಬಯಸುವುದಾದರೆ ಇದು ಉತ್ತಮ ಸಮಯ.
ಇದನ್ನೂ ಓದಿ : ಈ ಬಾರಿಯದ್ದು ಹೈಬ್ರಿಡ್ ಸೂರ್ಯಗ್ರಹಣ ! 100 ವರ್ಷಗಳ ನಂತರ ಸಂಭವಿಸುತ್ತಿದೆ ಇಂಥಹ ಗ್ರಹಣ !
ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರ ವೃತ್ತಿ ಜೀವನದಲ್ಲಿ ಸಾಕಷ್ಟು ಉತ್ತಮ ಬದಲಾವಣೆ ಕಂಡು ಬರಲಿದೆ. ವ್ಯಾಪಾರ ಚೆನ್ನಾಗಿ ನಡೆಯುತ್ತದೆ. ಹಳೆಯ ಸಮಸ್ಯೆಗಳು ಇದ್ದಲ್ಲಿ ಈ ಸಮಯದಲ್ಲಿ ಇತ್ಯರ್ಥವಾಗಲಿವೆ. ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ.
ಸಿಂಹ ರಾಶಿ : ಸಿಂಹ ರಾಶಿಯವರ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗಲಿದೆ. ಹೊಸ ಅವಕಾಶಗಳು ಜೀವನದಲ್ಲಿ ಸಿಗಲಿವೆ. ಸಂತೋಷ ಹೆಚ್ಚಾಗುತ್ತದೆ. ಆದಾಯ ಹೆಚ್ಚಳವಾಗುವುದರೊಂದಿಗೆ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.
ಇದನ್ನೂ ಓದಿ : Shani Dev: ಕೆಲವೇ ಗಂಟೆಗಳ ಬಳಿಕ 3 ರಾಶಿಗಳ ಮೇಲೆ ಶನಿಯ ಕೃಪಾವೃಷ್ಟಿ, ಶುಭ ದಶಮ ದೃಷ್ಟಿಯಿಂದ ಅಪಾರ ಧನ ಪ್ರಾಪ್ತಿಯ ಯೋಗ!
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.