Varabhavishya in Kannada From October 28th to November 03rd: ಲಕ್ಷ್ಮೀನಾರಾಯಣ ಯೋಗ, ಗಜಕೇಸರಿ ಯೋಗದಂತಹ ಅತ್ಯಂತ ಮಂಗಳಕರ ಯೋಗಗಳಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ವಾರವು ಕೆಲವು ರಾಶಿಯವರ ಅದೃಷ್ಟವನ್ನು ಬೆಳಗಿಸಲಿದ್ದು, ಅವರ ಜೀವನದಲ್ಲಿ ಅಪಾರ ಯಶಸ್ಸು, ಕೀರ್ತಿಯನ್ನು ತರಲಿದೆ. ಈ ವಾರದ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):
ಶುಭ ಯೋಗಗಳು ಈ ವಾರ ನಿಮ್ಮ ಬದುಕಿನಲ್ಲಿ ಹೊಸ ದಾರಿ ದೀಪವನ್ನು ತರಲಿವೆ. ಹಠಾತ್ ಪ್ರವೃತ್ತಿಗೆ ಹೊಂದಿಕೊಳ್ಳಲು ಪ್ರಯತ್ನಿಸಿದರೆ ಶುಭವಾಗಲಿದೆ. ಜೀವನದಲ್ಲಿ ನಿಮ್ಮ ಗುರಿಗಳನ್ನು ನಿರ್ದಿಷ್ಟಗೊಳಿಸಿ ಮುಂದುವರೆಯಿರಿ. ನಿಮ್ಮ ಯಶಸ್ಸನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ದೀಪಾವಳಿ ಸಂದರ್ಭದಲ್ಲಿ ವಿಶೇಷ ವ್ಯಕ್ತಿಯೊಬ್ಬರು ನಿಮ್ಮನು ಭೇಟಿಯಾಗುವರು ಭವಿಷ್ಯದಲ್ಲಿ ಇವರಿಂದ ಲಾಭವನ್ನು ನಿರೀಕ್ಷಿಸಬಹುದು.
ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope):
ಆರ್ಚಾರ್ಯಕರ ಘಟನೆಗಳು ಈ ವಾರ ಜರುಗಬಹುದು. ಬೇರೆಯವರಿಗೆ ನಿಮ್ಮ ಕೈಲಾದಷ್ಟು ಸಹಾಯವನ್ನು ಮಾಡಿ. ನಿಮಗೂ ಪ್ರತಿಫಲವಾಗಿ ಅದೇ ಕರ್ಮ ದೊರೆಯಲಿದೆ. ಕಷ್ಟದ ಸಮಯದಲ್ಲಿ ನಿಮ್ಮ ಜೊತೆ ನಿಲ್ಲುವವರಿಗೆ ಧನ್ಯವಾದ ಹೇಳಲು ಹಿಂಜರಿಯಬೇಡಿ. ಕೌಟುಂಬಿಕ ಬಿಕ್ಕಟ್ಟುಗಳನ್ನು ಕುಳಿತು ಮಾತನಾಡುವ ಮೂಲಕ ಬಗೆಹರಿಸಿಕೊಳ್ಳಿ. ಬೇರೆಯವರ ಬಗ್ಗೆ ದುರುದ್ದೇಶಪೂರಿತ ಗಾಸಿಪ್ ಮಾಡುವವರ ಬಗ್ಗೆ ತುಂಬಾ ಜಾಗರೂಕರಾಗಿರಿ.
ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):
ಲಕ್ಷ್ಮೀನಾರಾಯಣ ಯೋಗವು ಈ ರಾಶಿಯವರಿಗೆ ದೀಪಾವಳಿಯಲ್ಲಿ ತಾಯಿ ಮಹಾಲಕ್ಷ್ಮಿಯ ವಿಶೇಷ ಆಶೀರ್ವಾದವನ್ನು ಕರುಣಿಸಲಿದೆ. ಇದರಿಂದಾಗಿ ಜೀವನದಲ್ಲಿ ಅದೃಷ್ಟ ನಿಮ್ಮೊಂದಿಗೆ ಇರಲಿದ್ದು ಸಂತಸ, ಸಮೃದ್ಧಿಯನ್ನು ಕಾಣುವಿರಿ. ಸೋಮಾರಿತನ ಬಿಟ್ಟು ಕೆಲಸ ಮಾಡುವುದರಿಂದ ನಿಮ್ಮ ಪ್ರಗತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಇನ್ನೂ ವಿವಾಹವಾಗದವರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಂಭವವಿದೆ. ವಾರಾಂತ್ಯದ ವೇಳೆಗೆ ಗುಡ್ ನ್ಯೂಸ್ ನಿರೀಕ್ಷಿಸಬಹುದು.
ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope):
ಕೆಲಸದ ವಿಚಾರದಲ್ಲಿ ವೈಯಕ್ತಿಕ ಅಭಿವೃದ್ಧಿಗೆ ಆದ್ಯತೆ ನೀಡಿ. ಭವಿಷ್ಯದಲ್ಲಿ ಎಲ್ಲವೂ ಒಳ್ಳೆಯದಾಗಲಿದೆ ಎಂಬ ಭರವಸೆ ಹುಟ್ಟುತ್ತದೆ. ನಿಮ್ಮವರ ಹಿತನುಡಿಗಳನ್ನು ಕೇಳಿದರೆ ಪ್ರಗತಿ. ದೀಪಾವಳಿಯಲ್ಲಿ ಮಾತೆ ಮಹಾಲಕ್ಷ್ಮೀ ಆಶೀರ್ವಾದದಿಂದ ಧನಲಾಭವನ್ನು ಕಾಣುವಿರಿ. ಅನಾರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಅದರಲ್ಲೂ ನೀವು ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ಎಚ್ಚರಿಕೆಯಿಂದ ಇರಿ. ವಾರಾಂತ್ಯದಲ್ಲಿ ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಧಾರ್ಮಿಕ ಸ್ಥಳಗಳಿಗೆ ಹೋಗಲು ಯೋಜಿಸಬಹುದು.
ಇದನ್ನೂ ಓದಿ- ದೀಪಾವಳಿಗೂ ಮುನ್ನ ಈ 5 ವಸ್ತುಗಳನ್ನ ಮನೆಯಿಂದ ಹೊರಹಾಕಿದ್ರೆ ಸಂಪತ್ತಿನ ದೇವತೆ ಮನೆ ಪ್ರವೇಶಿಸುವುದು ಗ್ಯಾರಂಟಿ!
ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):
ನಿಮ್ಮ ಬದುಕಿನಲ್ಲಿ ಕೆಟ್ಟ ಸಮಯ ಕಳೆದಿದೆ. ದೀಪಾವಳಿಯಲ್ಲಿ ಗಜಕೇಸರಿ, ಲಕ್ಷ್ಮೀನಾರಾಯಣ ಯೋಗಗಳು ನಿಮ್ಮ ಜೀವನದ ಜ್ಯೋತಿಯನ್ನು ಬೆಳಗಳಿವೆ. ನೀವು ಊಹಿಸಿರಲೂ ಸಾಧ್ಯವಿರದ ಶುಭ ಸುದ್ದಿಯನ್ನು ಕೇಳುವಿರಿ. ವೃತ್ತಿ ಬದುಕಿನಲ್ಲಿ ನಿಮ್ಮ ಹಳೆಯ ಸ್ನೇಹಿತರೊಬ್ಬರು ನಿಮ್ಮನ್ನು ಮರುಸಂಪರ್ಕಿಸಬಹುದು. ದೀರ್ಘ ಸಮಯದ ಯೋಜನೆಯನ್ನು ಜಾರಿಗೆ ತರಲು ಇದು ಸಕಾಲವಾಗಿದೆ. ಆರೋಗ್ಯದಲ್ಲೂ ಸುಧಾರಣೆಯನ್ನು ಕಾಣುವಿರಿ.
ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope):
ಬಹಳ ತಾಳ್ಮೆಯಿಂದ ಕಾರ್ಯನಿರ್ವಹಿಸಬೇಕಾದ ವಾರ. ತಾಳ್ಮೆ ಕಳೆದುಕೊಳ್ಳುವುದರಿಂದ ಸಮಸ್ಯೆಗಳು ಉಲ್ಬಣಿಸಬಹುದು. ಶಾಂತಚಿತ್ತತೆಯಿಂದ ಯೋಚಿಸಿ ಮುಂದುವರೆಯುವುದರಿಂದ ಬೆಟ್ಟದಂತಹ ಸಮಸ್ಯೆಗಳನ್ನು ಕೂಡ ಮಂಜಿನಂತೆ ಕರಗಿಸಬಹುದು. ಉದ್ಯೋಗಸ್ಥರಿಗೆ ಶುಭ ಯೋಗಗಳ ಫಲವಾಗಿ ಬಡ್ತಿ ಸಾಧ್ಯತೆ ಇದೆ. ಹೂಡಿಕೆ ವಿಚಾರಗಳಿಗೆ ವಾರವು ಅಷ್ಟು ಉತ್ತಮವಾಗಿಲ್ಲ. ಈ ಬಗ್ಗೆ ಎಚ್ಚರಿಕೆಯಿಂದ ಇರಿ. ಮನೆಯಲ್ಲಿ ಕೆಲವರಿಗೆ ಆರೋಗ್ಯ ಸಮಸ್ಯೆ ಕಾಡಬಹುದು. ಇದು ನಿಮ್ಮ ನೆಮ್ಮದಿಗೆ ಭಂಗ ತರಬಹುದು.
ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope):
ದೀಪಾವಳಿಯಲ್ಲಿ ಈ ರಾಶಿಯವರ ಜೀವನದಲ್ಲಿ ಹೊಸ ಚೈತನ್ಯ ತುಂಬಲಿದೆ. ಮನೆಯಲ್ಲಿ ಸಂತೋಷ ಹೆಚ್ಚಾಗಲಿದೆ. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ನ್ಯಾಯಾಲಯದ ಪ್ರಕರಣಗಳಲ್ಲಿ ಜಯ ಸಾಧಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣುವಿರಿ. ಮಕ್ಕಳ ಕಡೆಯಿಂದ ಸಂತಸದ ಸುದ್ದಿಯನ್ನು ಕೇಳುವಿರಿ. ದಾಂಪತ್ಯದಲ್ಲಿ ಮೂಡಿದ್ದ ಭಿನ್ನಾಭಿಪ್ರಾಯಗಳು ಸರಿದು ಸುಖದಾಂಪತ್ಯವನ್ನು ಅನುಭವಿಸುವಿರಿ.
ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):
ಗಜಕೇಸರಿ ಯೋಗವು ನಿಮ್ಮ ಶಕ್ತಿಯನ್ನು ಹೆಚ್ಚಿಸಲಿದೆ. ಈ ವಾರ ನಿಮ್ಮ ಸಾಮರ್ಥ್ಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದರಿಂದ ಜೀವನದಲ್ಲಿ ಎದುರಾಗಿರುವ ಸವಾಲುಗಳನ್ನು ಜಯಿಸುವಿರಿ. ಸರಿ ಎನ್ನುವ ವಿಷಯಗಳ ಬಗ್ಗೆ ಮಾತನಾದಳು ಹೆದರಬೇಡಿ. ಟೀಕೆಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ವೃತ್ತಿ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕಾಣುವ ಸುವರ್ಣ ಸಮಯ. ವೈಯಕ್ತಿಕ ಜೀವನದಲ್ಲಿ ಶುಭ ಸಮಾಚಾರಗಳು ನಿಮ್ಮ ದೀಪಾವಳಿಯನ್ನು ಬೆಳಗಿಸಲಿವೆ.
ಇದನ್ನೂ ಓದಿ- ನವೆಂಬರ್ನಲ್ಲಿ ಈ ರಾಶಿಯವರಿಗೆ ಶುಕ್ರದೆಸೆ, ಕಷ್ಟ ಸರಿದು ಸುಖ ಅನುಭವಿಸುವ ಪರ್ವಕಾಲ, ವ್ಯವಹಾರದಲ್ಲಿ ಪ್ರಗತಿ, ದಿಢೀರ್ ಧನಲಾಭ
ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):
ಯಾವುದೇ ಪ್ರಮುಖ ಕೆಲಸಗಳಿಗೆ ಕೈ ಹಾಕುವಾಗ ಹಿರಿಯರ ಸಲಹೆ ಪಡೆಯುವುದನ್ನು ಮರೆಯಬೇಡಿ. ನಿಮ್ಮ ವರ್ಚಸ್ಸು ಬೇರೆಯವರನ್ನು ನಿಮ್ಮತ್ತ ಆಕರ್ಷಿಸುತ್ತದೆ. ಲಕ್ಷ್ಮೀನಾರಾಯಣ ಯೋಗದ ಫಲವಾಗಿ ನಿಮ್ಮ ಆದಾಯವು ಇಮ್ಮ್ಬಡಿಗೊಳ್ಳಲಿದೆ. ದೀಪಾವಳಿಯಲ್ಲಿ ನೀವು ಕಂಡ ಕನಸನ್ನು ನನಸು ಮಾಡಿಕೊಳ್ಳಲು ಪ್ರಯತ್ನಿಸಿ. ಸವಾಲಿನ ಪರಿಸ್ಥಿತಿಗಳನ್ನು ಶಾಂತ ಮನಸ್ಥಿತಿಯಿಂದ ನಿಭಾಯಿಸಿದರೆ ಒಳ್ಳೆಯದು.
ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):
ದೀಪಾವಳಿಯಲ್ಲಿ ಲಕ್ಷ್ಮಿನಾರಾಯಣ ಯೋಗ ಹಾಗೂ ಗಜಕೇಸರಿ ಯೋಗಗಳು ನಿಮ್ಮ ಹೊಸ ಯೋಜನೆಗಳಿಗೆ ಅದೃಷ್ಟದ ಬೆಂಬಲವನ್ನು ನೀಡಲಿವೆ. ಉದ್ಯೋಗದಲ್ಲಿ ಸೃಜನಾತ್ಮಕವಾಗಿ ನಡೆದುಕೊಳ್ಳುವುದು ನಿಮ್ಮ ಯಶಸ್ಸನ್ನು ಖಚಿತಪಡಿಸಲಿವೆ. ಏಕಾಂಗಿಯಾಗಿ ಲಘುವಾದ ಪ್ರಯಾಣ ಕೈಗೊಳ್ಳಲು ಯೋಚಿಸಬಹುದು. ಸಂಸಾರದಲ್ಲಿ ಮೂಡಿದ್ದ ಬಿರುಕುಗಳು ಸರಿದು ಹೊಸ ಜ್ಯೋತಿಯೊಂದು ಬೆಳಗಲಿದೆ. ಒಟ್ಟಾರೆಯಾಗಿ, ಈ ವಾರ ನಿಮಗೆ ಅದೃಷ್ಟದ ವಾರ.
ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):
ಬದಲಾವಣೆ ಜಗದ ನಿಯಮ. ನಿಮ್ಮ ಜೀವನದಲ್ಲೂ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ಕಾಣುವಿರಿ. ವಾರದ ಮಧ್ಯಭಾಗದಲ್ಲಿ ಇದ್ದಕ್ಕಿದ್ದಂತೆ ಮನೆಗ ಆಗಮಿಸುವ ಅತಿತಿಯಿಂದ ಶುಭ ಸುದ್ದಿ ಕೇಳುವಿರಿ. ಹಳೆಯ ಸ್ನೇಹಿತರೊಂದಿಗೆ ಸಂತಸದ ಸಮಯವನ್ನು ಕಳೆಯುವಿರಿ. ಮಕ್ಕಳಿಂದ ಮನೆಯ ವಾತಾವರಣ ಆಹ್ಲಾದಕರವಾಗಿರುತ್ತದೆ. ಪ್ರಸ್ತುತ ನಿಮ್ಮ ಮನಸ್ಸಿನ ಭಾರವನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದರಿಂದ ಮನಸ್ಸು ಶಾಂತಗೊಳ್ಳಲಿದೆ.
ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope):
ಇದು ನಿಮಗೆ ಮಿಶ್ರ ಫಲಗಳಿಂದ ಕೂಡಿದ ವಾರವಾಗಿದೆ. ಸಾಮಾಜಿಕ ಸಭೆ ಸಮಾರಂಭಗಳಲ್ಲಿ ನೆಟ್ವರ್ಕ್ ಹೆಚ್ಚಾಗಬಹುದು. ನಿಮ್ಮ ಆಕರ್ಷಣೀಯ ಮಾತು ಬೇರೆಯವರನ್ನು ನಿಮ್ಮತ್ತ ಆಕರ್ಷಿಸುತ್ತದೆ. ಯಾವುದೇ ಪ್ರಮುಖ ವಿಚಾರಗಳಲ್ಲಿ ಅಸಡ್ಡೆ ತೋರುವುದು ನಿಮಗೆ ಭವಿಷ್ಯದಲ್ಲಿ ಭಾರೀ ತೊಂದರೆ ಉಂಟುಮಾಡಬಹುದು. ಈ ಬಗ್ಗೆ ಜಾಗರೂಕರಾಗಿರಿ. ವಾರದ ಕೊನೆಯ ಭಾಗದಲ್ಲಿ ತಾಯಿ ಲಕ್ಷ್ಮಿ ಆಶೀರ್ವಾದದಿಂದ ಅದೃಷ್ಟ ಬೆಳಗಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.