Varabhavishya in Kannada From November 04th to November 10th: ನವೆಂಬರ್ ತಿಂಗಳ ಎರಡನೇ ವಾರ ಬೃಹಸ್ಪತಿಯ ರಾಶಿಚಕ್ರ ಚಿಹ್ನೆಯಾದ ಧನು ರಾಶಿಯಲ್ಲಿ ಶುಕ್ರ ಪದಾರ್ಪಣೆ ಮಾಡಲಿದ್ದಾನೆ. ಈಗಾಗಲೇ, ಶುಕ್ರನ ರಾಶಿಯಾದ ವೃಷಭ ರಾಶಿಯಲ್ಲಿ ಗುರು ಉಪಸ್ಥಿತನಿದ್ದು ಗುರು-ಶುಕ್ರರ ಮೈತ್ರಿ ಈ ವಾರ ಕೆಲವು ರಾಶಿಯವರ ಬದುಕನ್ನೆ ಬದಲಾಯಿಸಲಿದೆ. ಆ ಅದೃಷ್ಟದ ರಾಶಿಗಳು ಯಾವುವು. ಈ ವಾರ ಯಾವ ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):
ಇದು ನಿಮಗೆ ಏರಿಳಿತಗಳಿಂದ ಕೂಡಿದ ವಾರ. ಕೌಟುಂಬಿಕ ಸಮಸ್ಯೆಗಳು ವಿಶೇಷವಾಗಿ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಉಲ್ಬಣಗೊಳ್ಳುವ ಸಾಧ್ಯತೆ. ವಿವಧ ಸಂದರ್ಭಗಳಲ್ಲಿ ಅವಮಾನವಾಗುವ ಸಂಭವವಿರುವುದರಿಂದ ಸಾಧ್ಯವಾದಷ್ಟು ಬೇಡದ ಜಾಗದಲ್ಲಿ ಮಾತನಾಡುವುದನ್ನು ತಪ್ಪಿಸಿ. ಅಪಘಾತ ಸಂಭವವಿರುವುದರಿಂದ ವಾಹನ ಚಾಲನೆ ಮಾಡುವಾಗ ಜಾಗರೂಕರಾಗಿರಿ.
ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope):
ಇದು ಅನುಕೂಲಕರವಾದ ವಾರ. ನಿಮ್ಮ ಪ್ರತಿ ಕೆಲಸದಲ್ಲೂ ಕುಟುಂಬದ ಸಂಪೂರ್ಣ ಬೆಂಬಲ ಇರುತ್ತದೆ. ಕುಟುಂಬದಲ್ಲಿ ಪ್ರೀತಿ, ಗೌರವ ಹೆಚ್ಚಾಗಲಿದೆ. ಈ ವಾರ ನೀವು ನಿಮ್ಮ ಕುಟುಂಬಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರವನ್ನು ಕೈಗೊಳ್ಳಬೇಕಾಗಬಹುದು. ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಯ ಸಾಧಿಸುವಿರಿ. ಆಧ್ಯಾತ್ಮ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಶುಭವಾಗಲಿದೆ.
ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):
ಅದ್ಭುತ ವಾರ ಇದಾಗಿದ್ದು ಯೋಜಿತ ಕಾರ್ಯಗಳೆಲ್ಲವೂ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಪ್ರೀತಿಪಾತ್ರರೊಂದಿಗೆ ಆನಂದಮಯ ಸಮಯವನ್ನು ಕಳೆಯುವಿರಿ.ಸಂತೋಷದ ಕ್ಷಣಗಳು ನಿಮ್ಮ ಹಾದಿಯಲ್ಲಿವೆ. ಸ್ನೇಹಿತರು ಕುಟುಂಬಸ್ಥರೊಂದಿಗೆ ಮೂಡಿದ್ದ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರಲಿದೆ.
ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope):
ಪ್ರತಿ ಹೆಜ್ಜೆಗೂ ಸವಾಲನ್ನು ಎದುರಿಸಬೇಕಾಗಬಹುದು. ಈ ವಾರ ಸಮಸ್ಯೆಗಳು ಹೆಚ್ಚಾಗುವುದರಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಕುಟುಂಬದಲ್ಲಿ ಉದ್ವಿಗ್ನ ವಾತಾವರಣದಿಂದ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ನಿಮ್ಮ ಪ್ರೀತಿಪಾತ್ರರು ನಿಮ್ಮಿಂದ ದೂರವಾಗುವ ಪರಿಸ್ಥಿತಿಯೂ ಎದುರಾಗಬಹುದು. ಹಾಗಾಗಿ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಬಹಳ ಜಾಗರೂಕರಾಗಿರಿ ಮುಂದುವರೆಯುವುದನ್ನು ಪರಿಗಣಿಸಿ.
ಇದನ್ನೂ ಓದಿ- ಗುರು-ಬುಧ ಯೋಗದಿಂದ ಈ ರಾಶಿಯವರಿಗೆ ವರ್ಷಪೂರ್ತಿ ಅದೃಷ್ಟ, ಕಷ್ಟಗಳು ಕಳೆದು ರಾಜವೈಭೋಗವನ್ನೇ ಆನಂದಿಸುವಿರಿ
ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):
ಕಠಿಣ ಪರಿಶ್ರಮದಿಂದ ಈ ವಾರ ಯಶಸ್ಸನ್ನು ಗಿಟ್ಟಿಸಿಕೊಳ್ಳುವಿರಿ. ನಿಮ್ಮ ಪ್ರೀತಿಪಾತ್ರರೇ ನಿಮ್ಮ ತೊಂದರೆಗಳನ್ನು ಹೆಚ್ಚಿಸಬಹುದಾದ್ದರಿಂದ ಈ ಬಗ್ಗೆ ಕಾಳಜಿವಹಿಸಿ. ಮನೆಯಲ್ಲಿ ಕಲಹಗಳು ನಿಮ್ಮ ಮನಸ್ಸಿನ ಭಾರವನ್ನು ಹೆಚ್ಚಿಸಬಹುದು. ಇದನ್ನು ತಪ್ಪಿಸಲು ನೀವು ತಾಳ್ಮೆಯನ್ನು ಕಾಪಾಡಿಕೊಳ್ಳುವುದು ತುಂಬಾ ಅವಶ್ಯಕವಾಗಿದೆ.
ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope):
ನಿಮಗಿದು ಮಿಶ್ರ ಫಲಗಳಿಂದ ಕೂಡಿದ ವಾರವಾಗಿದೆ. ಕೆಲಸದಲ್ಲಿ ಏಕಾಗ್ರತೆ ವಹಿಸುವುದರಿಂದ ಕಷ್ಟಕರ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಕೌಟುಂಬಿಕ ವಿಷಯಗಳನ್ನು ಮಾತುಕತೆಯಲ್ಲಿ ಬಗೆಹರಿಸಲು ಪ್ರಯತ್ನಿಸಿ. ಆತಂಕವನ್ನು ತಪ್ಪಿಸಲು ಹಳೆಯ ವಿವಾದಗಳು ಮರುಕಳಿಸದಂತೆ ನಿಗಾವಹಿಸಿ. ಸಂಗಾತಿಗೆ ಯಾವುದೇ ಆನಾರೋಗ್ಯ ಸಮಸ್ಯೆಗಳಿದ್ದರೆ ಇದನ್ನು ನಿರ್ಲಕ್ಷಿಸಬೇಡಿ.
ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope):
ಇದು ನಿಮಗೆ ಅನುಕೂಲಕರವಾದ ವಾರವಾಗಿದೆ. ಈ ವಾರ ಆರ್ಥಿಕ ಲಾಭವನ್ನು ತರುತ್ತದೆ. ಸಾಮಾಜಿಕ ಮತ್ತು ರಾಜಕೀಯವಾಗಿ ಕುಟುಂಬ ಸದಸ್ಯರ ಗೌರವ ಹೆಚ್ಚಾಗುತ್ತದೆ. ವೃತ್ತಿಪರರು ಉನ್ನತ ಅಧಿಕಾರಿಗಳಿಂದ ಮೆಚ್ಚುಗೆಯನ್ನು ಗಳಿಸುವರು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರಿಗೆ ಫಲಪ್ರಧವಾದ ವಾರ್ವಾಗಿದೆ. ಕುಟುಂಬ ಸದಸ್ಯರೊಂದಿಗೆ ಅತ್ಯುತ್ತಮವಾದ ಸಂತೋಷದಾಯಕ ಸಮಯವನ್ನು ಆನಂದಿಸುವಿರಿ.
ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):
ಈ ವಾರ ಕೆಲ ಕುಟುಂಬ ಸದಸ್ಯರು ಉದ್ದೇಶಪೂರ್ವಕವಾಗಿ ಘರ್ಷಣೆಗಳನ್ನು ಸೃಷ್ಟಿಸಬಹುದು. ಬೇರೆಯವರ ತಪ್ಪಿಗೆ ನೀವು ಜವಾಬ್ದಾರಿ ಹೊತ್ತುಕೊಳ್ಳಬಹುದು. ಸಂದರ್ಭ ಎಂತಹುದೇ ಇರಲಿ ನಿಮ್ಮ ಮಾತನ್ನು ನಿಯಂತ್ರಿಸಿ. ಇಲ್ಲದಿದ್ದರೆ, ಪರಿಸ್ಥಿತಿ ಕೈಮೀರುವ ಸಾಧ್ಯತೆ ಇರುತ್ತದೆ. ಬೇರೆಯವರೊಂದಿಗೆ ಪ್ರೀತಿ-ಸಾಮರಸ್ಯದಿಂದ ಇರುವುದನ್ನು ಪರಿಗಣಿಸಿ.
ಇದನ್ನೂ ಓದಿ- ಶನಿ ಶುಕ್ರರಿಂದ 2025ರಲ್ಲಿ ಈ ರಾಶಿಯವರಿಗೆ ಜಾಕ್ಪಾಟ್, ಯಾವ ಕೆಲಸ ಹಿಡಿದರೂ ಜಯ ನಿಮ್ಮದೇ, ಅದೃಷ್ಟ ಲಕ್ಷ್ಮೀಯಿಂದ ಬದುಕೇ ಬಂಗಾರ
ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):
ಈ ವಾರ ನೀವು ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ವಿರೋಧವನ್ನು ಎದುರಿಸಬೇಕಾಗಬಹುದು. ಬೇರೆಯವರು ನಿಮ್ಮೊಂದಿಗೆ ಲಘುವಾಗಿ ವರ್ತಿಸುವುದಕ್ಕೆ ಅನುವು ಮಾಡಿಕೊಡಬೇಡಿ. ನಿಮ್ಮ ಇಮೇಜ್ ಹಾಳುಮಾಡಲು ಬಯಸುವವರಿಗೆ ತಕ್ಕ ಪಾಠ ಕಲಿಸಿ. ಇಲ್ಲವೇ, ಅವರು ಮತ್ತೆ ಮತ್ತೆ ಅದೇ ಪ್ರಯತ್ನ ಮಾಡಬಹುದು. ಖ್ಯಾತಿಯ ಅಪಾಯದಿಂದ ದೂರವಿರಿ. ಕೋಪವನ್ನು ನಿಯಂತ್ರಿಸದಿದ್ದರೆ ಅಪಾಯಗಳು ಹೆಚ್ಚಾಗಬಹುದು.
ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):
ಈ ವಾರವು ನಿಮ್ಮ ಬದುಕಿನಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಲಿದೆ. ಆರೋಗ್ಯವು ಉತ್ತಮವಾಗಿರಲಿದ್ದು ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸನ್ನು ಗಳಿಸುವಿರಿ. ಆಧ್ಯಾತ್ಮ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಪ್ರೀತಿ ಸಂವಹನವು ಬದುಕಿನಲ್ಲಿ ಆಶಾಕಿರಣವನ್ನು ಹೊಟ್ಟಿಸಲಿದೆ. ಸಾಮರಸ್ಯದಿಂದ ಬದುಕುವುದನ್ನು ಕಲಿತರೆ ಸುಖ ಪ್ರಾಪ್ತಿಯಾಗುವುದು.
ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):
ಎಲ್ಲಾ ಯೋಜಿತ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಇದು ನಿಮ್ಮ ಆದಾಯವನ್ನು ದುಪ್ಪಟ್ಟು ಹೆಚ್ಚಿಸಲಿದ್ದು, ಸಾಲಬಾಧೆಯಿಂದ ಮುಕ್ತಿಯನ್ನು ಕಾಣುವಿರಿ. ಕುಟುಂಬದಲ್ಲಿ ಶುಭ ಕಾರ್ಯಗಳು ಜರುಗುವ ಸಂಭವವಿದ್ದು, ನಿಮ್ಮ ಪ್ರತಿ ಕೆಲಸದಲ್ಲೂ ಕುಟುಂಬದವರು ಬೆನ್ನೆಲುಬಾಗಿ ನಿಲ್ಲುವರು.
ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope):
ಈ ವಾರ ನೀವು ನಿಮ್ಮ ಮಾತುಗಳಿಗೆ ಕಡಿವಾಣ ಹಾಕದಿದ್ದರೆ ಕುಟುಂಬದಲ್ಲಿ ಸಮಸ್ಯ್ಗಳು ಹೆಚ್ಚಾಗಬಹುದು. ಕುಟುಂಬಸ್ಥರ ನಡುವೆ ಪರಸ್ಪರರ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಪ್ರಯತ್ನಿಸಿ. ಇಲ್ಲದಿದ್ದರೆ, ಭವಿಷ್ಯದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಪ್ರಯತ್ನಿಸಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.