ಬೆಂಗಳೂರು: ಶ್ರಾವಣ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯು ಭಾನುವಾರ ಬೀಳುತ್ತಿದೆ. ಇಂದು ರಾತ್ರಿ 9 ಗಂಟೆ 32 ನಿಮಿಷದವರೆಗೆ ಏಕಾದಶಿ ತಿಥಿ ಇರಲಿದೆ. ಬಳಿಕ ದ್ವಾದಶಿ ತಿಥಿ ಆರಂಭಗೊಳ್ಳಲಿದೆ. ಇದಲ್ಲದೆ ಇಂದು ಪ್ರೀತಿ, ಆಯುಷ್ಮಾನ ಯೋಗದ ಜೊತೆಗೆ ಸರ್ವಾರ್ಥಸಿದ್ಧಿ ಹಾಗೂ ತ್ರಿಪುಷ್ಕರ ಯೋಗ ನಿರ್ಮಾಣಗೊಳ್ಳುತ್ತಿವೆ. ಜೋತಿಷ್ಯ ಪಂಡಿತರ ಪ್ರಕಾರ ಇಂದಿನ ದಿನ ಹಲವು ರಾಶಿಗಳ ಜನರ ಜೀವನದಲ್ಲಿ ಖುಷಿಗಳ ಆಗಮನವಾಗಲಿದೆ. ಅಪಾರ ಯಶಸ್ಸಿನ ಜೊತೆಗೆ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಯಾವ ರಾಶಿಗಳ ಅದೃಷ್ಟ ಇಂದು ಬಲವಾಗಿರಲಿದೆ ತಿಳಿದುಕೊಳ್ಳೋಣ ಬನ್ನಿ,
ವೃಷಭ ರಾಶಿ: ಇಂದು ನಿರ್ಮಾಣಗೊಂಡಿರುವ ಶುಭ ಯೋಗಗಳು ನಿಮ್ಮ ಪಾಲಿಗೆ ಅನುಕೂಲಕರ ಸಾಬೀತಾಗಲಿವೆ. ಹಲವು ದಿನಗಳಿಂದ ನಡೆದುಕೊಂಡು ಬಂದ ನಿರಾಶೆಗಳು ಖುಷಿಯಲ್ಲಿ ಬದಲಾಗಲಿವೆ. ವೃತ್ತಿ ಹಾಗೂ ಖಾಸಗಿ ಜೀವನ ಎರಡರ ಆನಂದ ನೀವು ಪಡೆಯುವಿರಿ. ನಿಮ್ಮ ಗಳಿಕೆ ನಿಮ್ಮ ಸ್ಥಗಿತಗೊಂಡ ಯೋಜನೆಗಳನ್ನು ಪೂರ್ಣಗೊಳಿಸಲು ಸಹಕರಿಸಲಿದೆ. ಸಹೋದರ-ಸಹೋದರಿಯರ ಬೆಂಬಲದಿಂದ ಹೊಸ ಉದ್ಯಮ ಆರಂಭಿಸಲು ಇದು ಸಕಾಲ.
ಮಿಥುನ ರಾಶಿ: ಇಂದು ನಿರ್ಮಾಣಗೊಳ್ಳುತ್ತಿರುವ ಶುಭಯೋಗಗಳ ಅವಧಿಯಲ್ಲಿ ನೀವು ತುಂಬಾ ವ್ಯಸ್ತರಾಗಿರುವಿರಿ. ನಿಮ್ಮ ಸಮರ್ಪಣೆಯ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಆದರೆ, ನಿಮ್ಮಲ್ಲಿರುವ ಧೈರ್ಯ ನಿಮ್ಮನ್ನು ಗುರಿ ತಲುಪಿಸುವಲ್ಲಿ ನಿಮಗೆ ಸಹಕರಿಸಲಿದೆ. ಕಠಿಣ ಪರಿಶ್ರಮದ ಫಲ ನಿಮಗೆ ಸಿಗಲಿದೆ ಹಾಗೂ ನೀವು ಸ್ಥಿರಾಸ್ತಿಗಳಲ್ಲಿ ಹೂಡಿಕೆ ಮಾಡುವಿರಿ.
ಕರ್ಕ ರಾಶಿ: ಈ ಯೋಗಗಳ ಕಾರಣ ನಿಮಗೆ ಇಂದು ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ಶಾಂತಿಗಾಗಿ ಧಾರ್ಮಿಕ ಸ್ಥಾನಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಹೊಸ ಸಂಗತಿಗಳನ್ನು ಅರಿಯಲು ಪ್ರಯತ್ನಿಸುವಿರಿ. ಒಂಟಿಯಾಗಿರುವವರಿಗೆ ಸಂಗಾತಿ ಸಿಗುವ ಸಾಧ್ಯತೆ ಇದೆ. ಲವ್ ಬರ್ಡ್ಸ್ ಮದುವೆಯ ಕುರಿತು ಉತ್ತಮ ನಿರ್ಣಯಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.
ಕನ್ಯಾ ರಾಶಿ: ಇಂದು ನಿಮ್ಮ ಮೇಲೆ ಚಂದ್ರನ ಕೃಪೆ ಇರಲಿದೆ. ಇದರಿಂದ ನೀವು ಖುಷಿಯಾಗಿರುವಿರಿ. ಇಂದು ನಿಮ್ಮ ಪರಿಶ್ರಮಕ್ಕೆ ನಿಮಗೆ ತಕ್ಕ ಫಲ ಸಿಗಲಿದೆ. ಅಧೈರ್ಯದಿಂದ ಇರುವವರಿಗೆ ಇಂದು ನೀವು ಸಹಾಯ ಮಾಡುವಿರಿ. ಸ್ಥಗಿತಗೊಂಡ ನಿಮ್ಮ ಕೆಲಸ ಕಾರ್ಯಗಳನ್ನು ಆರಂಭಿಸುವಿರಿ. ವ್ಯಾಪಾರದಲ್ಲಿ ಲಾಭ ನಿಮ್ಮದಾಗಲಿದೆ. ಇದರಿಂದ ನಿಮ್ಮ ವಿತ್ತೀಯ ಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲಿದೆ.
ತುಲಾ ರಾಶಿ: ನಿರ್ಮಾಣಗೊಳ್ಳುತ್ತಿರುವ ಈ ಶುಭ ಯೋಗಗಳ ಕಾಲದಲ್ಲಿ ನೀವು ತುಂಬಾ ಪ್ರಸನ್ನ ಹಾಗೂ ಶಾಂತರಾಗಿರುವಿರಿ ಮತ್ತು ನೀವು ನಿಮ್ಮ ಗುರಿಗಳ ಮೇಲೆ ಗಮನ ಕೇಂದ್ರೀಕರಿಸುವಿರಿ ಬಾಲಸಂಗಾತಿಯ ಜೊತೆಗೆ ರೊಮ್ಯಾಂಟಿಕ್ ಕಾಲ ಕಳೆಯುವಿರಿ ಹಾಗೂ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ. ಇತರ ಕೌಟುಂಬಿಕ ವಿಷಯಗಳ ವಿಷಯದಲ್ಲಿಯೂ ಕೂಡ ವ್ಯಸ್ತರಾಗಿರುವಿರಿ.
ಇದನ್ನೂ ಓದಿ-ಶೀಘ್ರದಲ್ಲೇ ಬುಧನ ಅಂಗಳದಲ್ಲಿ ಸೂರ್ಯ-ಮಂಗಳರ ಮೈತ್ರಿ, 3 ರಾಶಿಗಳ ಜನರಿಗೆ ಅಪಾರ ಧನಲಾಭ!
ಮೀನ ರಾಶಿ: ಇಂದು ನಿರ್ಮಾಣಗೊಳ್ಳುತ್ತಿರುವ ಶುಭಯೋಗಗಳ ಕಾರಣ ಇಂದು ನೀವು ತಕ್ಷಣ ನಿರ್ಣಯ ಕೈಗೊಳ್ಳುವಲ್ಲಿ ಸಕ್ಷಮರಾಗಿರುವಿರಿ. ಇದರ ಲಾಭ ನಿಮಗೆ ನಿಮ್ಮ ದಿನನಿತ್ಯದ ಜೀವನದ ಮೇಲೆ ಕಂಡು ಬರಲಿದೆ. ಸಹೋದ್ಯೋಗಿಗಳ ಸಹಾಯದಿಂದ ಕಠಿಣ ನಿರ್ಣಯ ಕೈಗೊಳ್ಳುವಲ್ಲಿ ನೀವು ಸಕ್ಷಮರಾಗಿರುವಿರಿ ಮತ್ತು ನೀವು ಅದರಲ್ಲಿ ಯಶಸ್ವಿಯಾಗುವಿರಿ. ಸಹೋದರ-ಸಹೋದರಿಯರ ನಡುವಿನ ಸಂಪತ್ತಿಗೆ ಸಂಬಂಧಿಸಿದಂತೆ ವಿವಾದಗಳು ಅಂತ್ಯವಾಗಲಿವೆ. ಚಿಕ್ಕದಾದ ಒಂದು ಯಾತ್ರೆ ಜರುಗಬಹುದು ಮತ್ತು ನಿಮಗೆ ಅದು ಲಾಭ ನೀಡಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇತನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ