Vastu Tips: ಈ 5 ವಸ್ತುಗಳನ್ನು ಎಂದಿಗೂ ಯಾರೊಂದಿಗೂ ಶೇರ್ ಮಾಡಬೇಡಿ, ಇದೇ ಬಡತನಕ್ಕೆ ಕಾರಣವಾಗಬಹುದು!

Vastu Shastra: ಜೀವನದಲ್ಲಿ ಒಬ್ಬರಿಗೊಬ್ಬರು ತಮ್ಮ ನಡುವೆ ಪದಾರ್ಥಗಳನ್ನು ಹಂಚಿಕೊಳ್ಳುವುದು ಸಹಜ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ಎಂದಿಗೂ ಸಹ ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಹೇಳಲಾಗುತ್ತದೆ. ಇದರಿಂದ ಮನೆಯಲ್ಲಿ ಬಡತನ ಬೆಂಬಿಡದೆ ಕಾಡುತ್ತದೆ. ಜೀವನದಲ್ಲಿ ಸಂಕಷ್ಟಗಳ ಸರಮಾಲೆಯನ್ನೇ ಎದುರಿಸಬೇಕಾಗುತ್ತದೆ ಎನ್ನಲಾಗುತ್ತದೆ. 

Written by - Yashaswini V | Last Updated : Sep 13, 2022, 04:17 PM IST
  • ಜೀವನದಲ್ಲಿ ಒಬ್ಬರಿಗೊಬ್ಬರು ತಮ್ಮ ನಡುವೆ ಪದಾರ್ಥಗಳನ್ನು ಹಂಚಿಕೊಳ್ಳುವುದು ಒಳ್ಳೆಯದು.
  • ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ಎಂದಿಗೂ ಸಹ ಯಾರ ಜೊತೆಗೂ ಹಂಚಿಕೊಳ್ಳದಂತೆ ಸಲಹೆ ನೀಡಲಾಗುತ್ತದೆ.
  • ವಾಸ್ತು ಶಾಸ್ತ್ರದ ಪ್ರಕಾರ, ನಾವು ಬಳಸುವ ಐದು ಪ್ರಮುಖ ವಸ್ತುಗಳನ್ನು ಯಾರೊಂದಿಗೂ ಶೇರ್ ಮಾಡಬಾರದು.
Vastu Tips: ಈ 5 ವಸ್ತುಗಳನ್ನು ಎಂದಿಗೂ ಯಾರೊಂದಿಗೂ ಶೇರ್ ಮಾಡಬೇಡಿ, ಇದೇ ಬಡತನಕ್ಕೆ ಕಾರಣವಾಗಬಹುದು!  title=
Vastu Tips

ವಾಸ್ತು ಶಾಸ್ತ್ರ:  ಚಿಕ್ಕ ವಯಸ್ಸಿನಿಂದಲೂ ಆಹಾರವನ್ನಾಗಲಿ, ನಮ್ಮ ಬಳಿ ಇರುವ ಪದಾರ್ಥಗಳನ್ನಾಗಲಿ ಬೇರೆಯವರೊಂದಿಗೆ ಹಂಚಿಕೊಳ್ಳಬೇಕು ಎಂದು ಹಿರಿಯರು ಹೇಳಿಕೊಡುತ್ತಾರೆ. ವಾಸ್ತವವಾಗಿ, ಇದು ಒಳ್ಳೆಯ ಅಭ್ಯಾಸ.  ಜೀವನದಲ್ಲಿ ಒಬ್ಬರಿಗೊಬ್ಬರು ತಮ್ಮ ನಡುವೆ ಪದಾರ್ಥಗಳನ್ನು ಹಂಚಿಕೊಳ್ಳುವುದು ಒಳ್ಳೆಯದು. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ಎಂದಿಗೂ ಸಹ ಯಾರ ಜೊತೆಗೂ ಹಂಚಿಕೊಳ್ಳದಂತೆ ಸಲಹೆ ನೀಡಲಾಗುತ್ತದೆ. 

ವಾಸ್ತು ಶಾಸ್ತ್ರದ ಪ್ರಕಾರ, ನಾವು ಬಳಸುವ ಐದು ಪ್ರಮುಖ ವಸ್ತುಗಳನ್ನು ಯಾರೊಂದಿಗೂ ಶೇರ್ ಮಾಡಬಾರದು. ಇದನ್ನು ಮಾಡುವುದರಿಂದ, ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ, ಇದರಿಂದಾಗಿ ಕುಟುಂಬದಲ್ಲಿ ಆರ್ಥಿಕ ಬಿಕ್ಕಟ್ಟು, ಅನಾರೋಗ್ಯ ಮತ್ತು ಜಗಳ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ ಆ ವಸ್ತುಗಳು ಯಾವುವು ತಿಳಿಯೋಣ...

ಪಾದರಕ್ಷೆ:
ವಾಸ್ತು ಶಾಸ್ತ್ರದ ಪ್ರಕಾರ, ನಾವು ಎಂದಿಗೂ ಸಹ ನಮ್ಮ ಪಾದರಕ್ಷೆಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು. ಮಾತ್ರವಲ್ಲ, ಬೇರೆಯವರ ಪಾದರಕ್ಷೆಗಳನ್ನು ನಾವು ಧರಿಸಲೂ ಬಾರದು. ಇದನ್ನು ಅಶುಭ ಎಂದು ಪರಿಗಣಿಸಲಾಗಿದೆ.  ಶಾಸ್ತ್ರಗಳ ಪ್ರಕಾರ ಶನಿಯು ಮನುಷ್ಯನ ಪಾದದಲ್ಲಿ ನೆಲೆಸಿದ್ದಾನೆ ಎಂದು ನಂಬಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನಾವು ಇತರರ ಪಾದರಕ್ಷೆ ಮತ್ತು ಚಪ್ಪಲಿಗಳನ್ನು ಧರಿಸಿದರೆ, ಆಗ ಶನಿಯ ಕೋಪವು ನಮ್ಮ ಮೇಲೆ ಏರುತ್ತದೆ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಬಡತನ ಮತ್ತು ದುಃಖ ಬರುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Zodiac Signs : ಪ್ರೀತಿ ವಿಚಾರದಲ್ಲಿ ನಿಷ್ಠಾವಂತರು ಈ ರಾಶಿಯ ಯುವತಿಯರು!

ಗಡಿಯಾರ:
ವಾಸ್ತುಶಾಸ್ತ್ರಜ್ಞರ ಪ್ರಕಾರ, ನಾವು ಎಂದಿಗೂ ಸಹ ಇತರರಿಗೆ ನಮ್ಮ ಗಡಿಯಾರವನ್ನು ಕೊಡುವುದಾಗಲೀ ಅಥವಾ ನಾವು ಬೇರೆಯವರ ಗಡಿಯಾರವನ್ನು ಧರಿಸುವುದಾಗಲಿ ಮಾಡಬಾರದು. ಇದಕ್ಕೆ ಕಾರಣವೆಂದರೆ ಗಡಿಯಾರವು ಸಮಯವನ್ನು ಮಾತ್ರ ಹೇಳುವುದಿಲ್ಲ, ಆದರೆ ವ್ಯಕ್ತಿಯ ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಸಮಯಗಳು ಸಹ ಅದರೊಂದಿಗೆ ಸಂಬಂಧ ಹೊಂದಿವೆ. ಅಂತಹ ಪರಿಸ್ಥಿತಿಯಲ್ಲಿ, ಯಾರಾದರೂ ಕೆಟ್ಟ ಸಮಯವನ್ನು ಹೊಂದಿದ್ದರೆ ಮತ್ತು ನೀವು ಅವರ ಗಡಿಯಾರವನ್ನು ಧರಿಸಿದರೆ ಅದು ನಿಮ್ಮ ಜೀವನದ ಮೇಲೂ ಪರಿಣಾಮ ಬೀರಬಹುದು.

ಸ್ನೇಹಿತರ ಉಂಗುರ:
ನಾವು ಎಂದಿಗೂ ನಮ್ಮ ಬೆರಳಿಗೆ ಇನ್ನೊಬ್ಬರ ಉಂಗುರವನ್ನು ಧರಿಸಬಾರದು. ವಾಸ್ತವವಾಗಿ, ಅದು ಉಂಗುರ ಅಥವಾ ರತ್ನ-ಲೋಹವಾಗಿದ್ದರೂ, ಅವು ಕೆಲವು ಗ್ರಹ ಅಥವಾ ರಾಶಿಚಕ್ರಕ್ಕೆ ಸಂಬಂಧಿಸಿವೆ. ಆದ್ದರಿಂದ, ನೀವು ಇತರರ ಉಂಗುರ ಅಥವಾ ರತ್ನವನ್ನು ಧರಿಸಬಾರದು. ಮಾತ್ರವಲ್ಲ, ನಿಮ್ಮ ಉಂಗುರ ಅಥವಾ ರತ್ನವನ್ನೂ ಸಹ ಯಾರ ಜೊತೆಗೂ ಹಂಚಿಕೊಳ್ಳಬಾರದು. ಅದು ನಿಮ್ಮ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಪೆನ್‌:
ನಾವು ಸಾಮಾನ್ಯವಾಗಿ ಬ್ಯಾಂಕ್ ಅಥವಾ ಇತರ ಸ್ಥಳಗಳಿಗೆ ಹೋದಾಗ ಇತರರಿಂದ ಪೆನ್ನನ್ನು ಎರವಲು ಪಡೆಯುತ್ತೇವೆ. ಇಲ್ಲವೇ, ಕೇಳಿದವರಿಗೆ ನಮ್ಮ ಪೆನ್ನನ್ನು ನೀಡಿರುತ್ತೇವೆ. ನಂತರ ಅದನ್ನು ಹಿಂದಿರುಗಿಸಲು ಮರೆತಿರುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ ಇದು ತಪ್ಪು. ಇನ್ನೊಬ್ಬ ವ್ಯಕ್ತಿಯ ಭವಿಷ್ಯವು ಆ ಪೆನ್‌ನೊಂದಿಗೆ ಸಂಬಂಧಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಆ ವ್ಯಕ್ತಿಯ ಜೀವನದಲ್ಲಿ ಕೆಟ್ಟ ಹಂತವು ನಡೆಯುತ್ತಿದ್ದರೆ, ಅದು ನಿಮ್ಮ ಜೀವನದಲ್ಲಿಯೂ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ಹಾಗಾಗಿ ನೀವು ಯಾರಿಗಾದರೂ ಪೆನ್ ನೀಡಿದ್ದರೆ ಅಥವಾ ನೀವು ಪೆನ್ನು ಎರವಲು ಪಡೆದಿದ್ದರೆ, ಅದನ್ನು ಹಿಂತಿರುಗಿಸಿ.

ಇದನ್ನೂ ಓದಿ- Mangal Gochar 2022: ಶೀಘ್ರದಲ್ಲಿಯೇ ಮಿಥುನ ರಾಶಿಗೆ ಮಂಗಳನ ಪ್ರವೇಶ, ಈ 3 ರಾಶಿಗಳ ಜನರಿಗೆ ಭಾರಿ ಲಾಭ

ಇತರರ ಬಟ್ಟೆಗಳನ್ನು ಧರಿಸಬೇಡಿ:
ಸ್ನೇಹಿತರು ಮತ್ತು ಕುಟುಂಬದವರು ಆಗಾಗ್ಗೆ ಬಟ್ಟೆ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ. ವಾಸ್ತು ಶಾಸ್ತ್ರದ ಪ್ರಕಾರ, ಬೇರೆಯವರ ಬಟ್ಟೆಯನ್ನು ಧರಿಸಬಾರದು. ಇದು ನಿಮ್ಮ ಅದೃಷ್ಟವನ್ನೂ ಸಹ ದುರದೃಷ್ಟವಾಗಿ ಬದಲಾಯಿಸಬಹುದು ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News