Varabhavishya in Kannada From October 21st to October 27th: ಅಕ್ಟೋಬರ್ ಕೊನೆ ವಾರದಲ್ಲಿ ಗುರು-ಚಂದ್ರರ ಯುತಿಯಿಂದ ಗೌರಿ ಯೋಗ ರೂಪುಗೊಳ್ಳುತ್ತಿದೆ. ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಈ ಯೋಗವು ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ತರಲಿದೆ. ವೃತ್ತಿ, ವ್ಯವಹಾರದಲ್ಲಿ ಯಶಸ್ಸಿನ ಜೊತೆಗೆ ಕೌಟುಂಬಿಕ ಬದುಕಿನಲ್ಲೂ ಒಳ್ಳೆಯ ಫಲಗಳನ್ನು ನೀಡಲಿದೆ.
ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):
ನಿಮ್ಮ ಬದುಕಿನಲ್ಲಿ ವಿಶೇಷ ವ್ಯಕ್ತಿಯ ಪ್ರವೇಶವಾಗಲಿದೆ. ಏಕಾಗ್ರತೆಯಿಂದ ಕೆಲಸ ಮಾಡುವುದರಿಂದ ಪ್ರಯತ್ನಗಳಲ್ಲಿ ಶುಭ ಫಲಗಳನ್ನು ಪಡೆಯುವಿರಿ. ಹಣಕಾಸಿನ ಸ್ಥಿತಿ ಸುಧಾರಿಸಿ ಕುಟುಂಬದಲ್ಲಿ ಮಂಗಳ ಕಾರ್ಯಗಳು ಜರುಗುವುದರಿಂದ ಸಂತೋಷದಿಂದ ಕೂಡಿದ ವಾರ. ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ಜೀವನದ ಪ್ರತಿ ಹಂತದಲ್ಲಿ ಯಶಸ್ಸನ್ನು ಕಾಣುವಿರಿ.
ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope):
ಅನಾವಶ್ಯಕವಾಗಿ ಬೇರೆಯವರ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ. ಬದುಕಿನುದ್ದಕ್ಕೂ ಕಲಿಯುವುದು ಇದ್ದೇ ಇರುತ್ತದೆ. ನಿಮ್ಮ ಹಳೆಯ ಸಮಸ್ಯೆಗಳಿಂದ ಬುದ್ದಿ ಕಲಿತು ಮುಂದುವರೆಯುವುದು ಶುಭ. ವೈಯಕ್ತಿಕ ಜೀವನವು ಹೆಚ್ಚು ಕೇಂದ್ರೀಕೃತವಾಗಿರುತ್ತದೆ ಮತ್ತು ನಿಮ್ಮ ಪ್ರೀತಿಪಾತ್ರರ ಜೊತೆ ತಾಳ್ಮೆಯಿಂದ ಇರುವುದರಿಂದ ಒಳ್ಳೆಯದು. ಸ್ನೇಹಿತರೊಂದಿಗೆ ಪ್ರವಾಸಕ್ಕಾಗಿ ಯೋಜಿಸಬಹುದು. ಒಟ್ಟಾರೆ ಮಿಶ್ರ ಫಲಗಳಿಂದ ಕೂಡಿದ ವಾರ.
ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):
ತಪ್ಪುಗಳು ಮರುಕಳಿಸಲು ಅನುವು ಮಾಡಿಕೊಡಬೇಡಿ. ಬೇರೆಯವರನ್ನು ತುಚ್ಛವಾಗಿ ಕಾಣುವ ಮನೋಭಾವವು ನಿಮ್ಮ ಪ್ರಗತಿಯ ಹಾದಿಗೆ ಅಡ್ಡಿಯಾಗಬಹುದು. ಭೌತಿಕ ಸುಖಕ್ಕಾಗಿ ಅತಿಯಾಗಿ ಖರ್ಚು ಮಾಡುವುದನ್ನು ತಪ್ಪಿಸಿ. ಇಲ್ಲವೇ ಭವಿಷ್ಯದಲ್ಲಿ ಸಾಲದ ಸುಳಿಯಲ್ಲಿ ಸಿಲುಕಬಹುದು. ಯಾವುದೇ ವಸ್ತುವನ್ನು ಖರೀದಿಸುವಾಗ ಬುದ್ದಿವಂತಿಕೆಯಿಂದ ಅಗತ್ಯ ಇರುವುದಕ್ಕಷ್ಟೇ ಖರ್ಚು ಮಾಡಿ.
ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope):
ಪಶ್ಚಾತಾಪದಿಂದ ಹಿಂದೆ ನಡೆದಿದ್ದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಅದರಿಂದ ಕಲಿತ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಭವಿಷ್ಯವನ್ನು ಬದಲಾಯಿಸಬಹುದು. ವೃತ್ತಿಪರವಾಗಿ ಕೆಲವು ಅಡೆತಡೆಗಳು ನಿಮ್ಮನ್ನು ಕಾಡಬಹುದು. ವಾರಾಂತ್ಯದಲ್ಲಿ ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುವಿರಿ. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ.
ಇದನ್ನೂ ಓದಿ- ದೀಪಾವಳಿ ನಂತರ ಈ ರಾಶಿಯವರ ಬದುಕಿನಲ್ಲಿ ಶನಿ ಮಹಾದಶದಿಂದ ಬಂಪರ್ ಲಾಭ, ಹೋದಲ್ಲೆಲ್ಲಾ ಸಂತೋಷದ ಹೊನಲು
ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):
ಈ ವಾರ ಪ್ರತಿ ಹಂತದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಎದುರಾಗುವ ಸಂಕಷ್ಟಗಳನ್ನು ಪರಿಣಾಮಕಾರಿಯಾಗಿ ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯ ಹೆಚ್ಚಾಗಲಿದೆ. ವಿಶೇಷವಾಗಿ ಕೆಲಸದಲ್ಲಿ ಎದುರಾಗುವ ಸವಾಲುಗಳನ್ನು ಬುದ್ದಿವಂತಿಕೆಯಿಂದ ನಿರ್ವಹಿಸುವಿರಿ. ಏಕಕಾಲದಲ್ಲಿ ಹಲವು ಕೆಲಸಗಳನ್ನು ನಿರ್ವಹಿಸುವ ನಿಮ್ಮ ಸಾಮರ್ಥ್ಯಕ್ಕೆ ಮನ್ನಣೆ ದೊರೆಯಲಿದೆ.
ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope):
ನಿಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಇಷ್ಟು ದಿನಗಳಿಂದ ನೀವು ಬಯಸುತ್ತಿದ್ದ ಸುಂದರ ಆರಾಮದಾಯಕ ಬ್ರೇಕ್ ಪಡೆಯಲು ಈ ವಾರ ಹೆಚ್ಚು ಸೂಕ್ತವಾಗಿದೆ. ಆರೋಗ್ಯದ ಹಿತದೃಷ್ಟಿಯಿಂದ ಆಹಾರದ ಬಗ್ಗೆ ವಿಶೇಷ ಕಾಳಜಿವಹಿಸಿ. ಕುಟುಂಬಸ್ಥರೊಂದಿಗೆ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗುವುದು ಮನಸ್ಸಿಗೆ ಆಹ್ಲಾದಕರವಾಗಿರುತ್ತದೆ.
ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope):
ತೀರ್ಥಯಾತ್ರೆಗೆ ತೆರಳುವ ನಿಮ್ಮ ಬಹುದಿನಗಳ ಆಸೆ ಈ ವಾರ ನೆರವೇರಲಿದೆ. ಹೆಚ್ಚಿನ ಶಾಂತತೆಗಾಗಿ ಅನಾವಶ್ಯಕ ವಾದ-ವಿವಾದಗಳನ್ನು ತಪ್ಪಿಸಿ. ಹಣಕಾಸಿನ ಮೂಲಗಳು ಹೆಚ್ಚಾಗುವುದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಸ್ವಲ್ಪ ಪರಿಹಾರವನ್ನು ಪಡೆಯಬಹುದು. ಈ ವಾರ ಆತ್ಮಾವಲೋಕನ ಮತ್ತು ಪ್ರತಿಬಿಂಬ ಎರಡಕ್ಕೂ ಪ್ರಾಮುಖ್ಯತೆ ನೀಡಿ. ವೃತ್ತಿ ಬದುಕಿನಲ್ಲಿ ಭರವಸೆಗಳನ್ನು ಹೆಚ್ಚಿಸುವ ಅವಕಾಶಗಳನ್ನು ಕಾಣುವಿರಿ.
ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):
ಆತ್ಮೀಯರೊಂದಿಗೆ ಸ್ಮರಣೀಯ ಸಂವಾದವನ್ನು ಅನುಭವಿಸುವಿರಿ. ಜೀವನದಲ್ಲಿ ತಾಳ್ಮೆ, ಬುದ್ದಿವಂತಿಕೆಯನ್ನು ಬೆಳೆಸಿಕೊಳ್ಳಲು ಪರಿಪೂರ್ಣ ಅವಕಾಶಗಳನ್ನು ಪಡೆಯುವಿರಿ. ಪೋಷಕರು ತಮ್ಮ ಮಕ್ಕಳ ಬಗೆಗೆ ಹೆಚ್ಚಿನ ತಿಳುವಳಿಕೆಯನ್ನು ತೋರಿಸುವುದು ಅಗತ್ಯವಾಗಿದೆ. ಆರ್ಥಿಕ ಭರವಸೆಗಳು ಹೆಚ್ಚಾಗುವ ಸುಸಮಯ. ಬಹಳ ದಿನಗಳ ಮನೆ ತೆಗೆದುಕೊಳ್ಳುವ ನಿಮ್ಮ ಕನಸು ನನಸಾಗಲಿದೆ.
ಇದನ್ನೂ ಓದಿ- ವಯಸ್ಸಿಗೆ ಬಂದಿರುವ ಹೆಣ್ಮಕ್ಳು ಈ ದಿಕ್ಕಿನ ಕೋಣೆಯಲ್ಲಿದ್ರೆ ಅಪ್ಪ-ಅಮ್ಮನ ಇಷ್ಟದಂತೆ ಮದುವೆ ಆಗುವುದೇ ಇಲ್ಲ..!
ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):
ಈ ವಾರ ನಿಮ್ಮ ಸಂಬಂಧಗಳನ್ನು ಪೋಷಿಸುವತ್ತ ಹೆಚ್ಚಿನ ಗಮನ ಕೊಡಿ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ಪ್ರೀತಿಪಾತ್ರರೊಂದಿಗೆ ರಜಾ ದಿನಗಳಿಗಾಗಿ ಯೋಜಿಸಬಹುದು. ನಿಮ್ಮನ್ನು ಪ್ರೀತಿಸುವವರಿಗಾಗಿ ಸಮಯ ಮೀಸಲಿಡಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಬದ್ದತೆಗಳನ್ನು ಕಾಯ್ದುಕೊಳ್ಳಲು ಪ್ರಯತ್ನಿಸಿ. ಮನೆಯಲ್ಲಿ ಆಹ್ಲಾದಕರ ವಾತಾವರಣವನ್ನು ಅನುಭವಿಸುವಿರಿ.
ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):
ಬೇರೆಯವರಿಗೆ ನೀವು ಪ್ರೀತಿಯನ್ನು ತೋರಿದರೆ ಬದಲಿಗೆ ನಿಮಗೂ ಪ್ರೀತಿಯೇ ದೊರೆಯುತ್ತದೆ. ಬೇರೆಯವರಿಗೆ ಸಹಾನುಭೂತಿಯನ್ನು ತೋರುವುದರಿಂದ ಪ್ರತಿಯಾಗಿ ನಿಮಗೂ ಅದೇ ಸಿಗುತ್ತದೆ. ಪ್ರೀತಿಯಲ್ಲಿ ಆಳವಾದ ಒಳನೋಟವು ಮನಸ್ಸಿನ ಸ್ಥಿತಿಯನ್ನು ಸುಧಾರಿಸುತ್ತದೆ. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಹಠಾತ್ ಖರ್ಚುಗಳು ನಿಮ್ಮ ಆರ್ಥಿಕ ಸ್ಥಿತಿಯನ್ನು ಏರು-ಪೇರುಗೊಳಿಸಬಹುದು.
ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):
ಜೀವನದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಸ್ವಲ್ಪ ಸಮಯ ಬೇಕಾಗಬಹ್ದೂ. ಸ್ವಲ್ಪ ತಾಳ್ಮೆಯಿಂದ ಇರಿ. ಕಠಿಣ ಪರಿಸ್ಥಿತಿಗಳ ಸಮಯದಲ್ಲಿ ಯಾರು ನಿಮ್ಮೊಂದಿಗೆ ನಿಲ್ಲುತ್ತಾರೋ ಅವರೇ ನಿಜವಾದ ಸ್ನೇಹಿತರು. ಅನಾವಶ್ಯಕವಾಗಿ ಬೇರೆಯವರ ವಿಷಯದಲ್ಲಿ ಮೂಗು ತೂರಿಸುವುದನ್ನು ತಪ್ಪಿಸಿ. ಇಲ್ಲವೇ, ನೀವೇ ಸಮಸ್ಯೆಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಗೊಂಡಲಗಳಿಂದ ದೂರ ಉಳಿಯಿರಿ.
ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope):
ಈ ವಾರ ಜೀವನದ ಪ್ರತಿ ಹೆಜ್ಜೆಯಲ್ಲೂ ಉದ್ವಿಗ್ನತೆ ಹೆಚ್ಚಾಗಬಹುದು. ತಾತ್ಕಾಲಿಕ ಪರಿಸ್ಥಿತಿಗಳನ್ನು ನಿಭಾಯಿಸಲು ಕಾಲಜಿಯ ಅಗತ್ಯವಿಲ್ಲ. ಹಣಕಾಸಿನ ವಿಷಯವನ್ನು ಬುದ್ದಿವಂತಿಕೆಯಿಂದ ನಿಭಾಯಿಸದಿದ್ದರೆ ಹಣಕಾಸಿನ ಸಂಕಷ್ಟಗಳು ಎದುರಾಗಬಹುದು. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯವಿರುತ್ತದೆ. ಸಣ್ಣ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಇದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.