PKL 2022 Playoffs: ಪ್ರೊ ಕಬಡ್ಡಿ ಲೀಗ್ 2022ರ ಮೊದಲನೇ ಎಲಿಮಿನೇಟರ್ ಪಂದ್ಯ ಇಂದು ನಡೆಯಿತು. ಮೊದಲ ಮ್ಯಾಚ್‌ನಲ್ಲಿ ಬೆಂಗಳೂರು ಬುಲ್ಸ್ ಆರ್ಭಟಕ್ಕೆ ದಬಾಂಗ್ ಡೆಲ್ಲಿ ಧೂಳಿಪಟವಾಗಿದೆ. ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಬುಲ್ಸ್ ಪಡೆ ದಬಾಂಗ್ ಡೆಲ್ಲಿಯನ್ನು 56-24 ಅಂಕಗಳಿಂದ ಸೋಲಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಪ್ರೊ ಕಬಡ್ಡಿ ಲೀಗ್ ಸೀಸನ್ 9 ಎಲಿಮಿನೇಟರ್ ಸುತ್ತಿನಲ್ಲಿ ಬೆಂಗಳೂರು ಬುಲ್ಸ್ ಮತ್ತು ದಬಾಂಗ್ ದೆಹಲಿ ನಡುವಿನ ಮೊದಲ ಕಬಡ್ಡಿ ಪಂದ್ಯವನ್ನು ಮುಂಬೈನ NSCI ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಟೇಡಿಯಂನಲ್ಲಿ ಡೋಮ್‌ನಲ್ಲಿ ನಡೆಯಿತು.
ಇದನ್ನೂ ಓದಿ : KL Rahul Statement on Virat Kohli: ವಿರಾಟ್ ಬಗ್ಗೆ ಪ್ರಶ್ನೆ ಕೇಳಿದಕ್ಕೆ ಹೀಗಂದ್ರು ರಾಹುಲ್!! ಉತ್ತರ ಕೇಳಿ ಎಲ್ಲರೂ ಶಾಕ್ ಆಗಿದ್ದೇಕೆ?
ಲೀಗ್ ಹಂತದ ಪಾಯಿಂಟ್ಸ್ ಪಟ್ಟಿಯಲ್ಲಿ ದಬಾಂಗ್ ಡೆಲ್ಲಿ ಕೆ.ಸಿ. ಆರನೇ ಸ್ಥಾನ ಪಡೆಯುವ ಮೂಲಕ ಪ್ಲೇಆಫ್‌ನಲ್ಲಿ ಸ್ಥಾನ ಪಡೆದರು. ಹಾಲಿ ಚಾಂಪಿಯನ್ ನವೀನ್ ಕುಮಾರ್ 246 ರೇಡ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ.
ಅಲ್ಲೋಲ ಕಂಡೋಲ 🔥#FullChargeMaadi #BengaluruBulls #BLRvDEL #vivoProKabaddi #FantasticPanga pic.twitter.com/OnwYI8ho4J
— Bengaluru Bulls (@BengaluruBulls) December 13, 2022
ಆಟ ಶುರುವಾದಾಗಿನಿಂದಲೂ ಗೂಳಿಗಳ ಅಬ್ಬರ ಜೋರಾಗಿತ್ತು. ಆರಂಭದಲ್ಲಿ ವಿಕಾಸ್ ಕಂಡೋಲಾ ಅಬ್ಬರಿಸಿದರೆ, ಭರತ್ ದಬಂಗ್ ಡೆಲ್ಲಿ ಡಿಫೆನ್ಸ್ ಪಡೆಗೆ ದುಸ್ವಪ್ನವಾದರು. ಎಲಿಮಿನೇಟರ್ ಪಂದ್ಯದಲ್ಲಿ ಬಲಿಷ್ಠ ಡಿಫೆನ್ಸ್ ಕೋಟೆ ಕಟ್ಟಿದ್ದ ಬೆಂಗಳೂರು ಬುಲ್ಸ್ ತಂಡ, ಡೆಲ್ಲಿ ಎಕ್ಸ್‌ಪ್ರೆಸ್ ನವೀನ್ ಕುಮಾರ್ ಅವರಿಗೆ ಹೆಚ್ಚು ರೈಡಿಂಗ್ ಪಾಯಿಂಟ್ ಗಳಿಸಲು ಚಾನ್ಸ್ ಕೊಡಲೇ ಇಲ್ಲ. ಡಿಫೆಂಡರ್ ಪಾರ್ಥಿಬನ್ ಡೆಲ್ಲಿ ರೈಡರ್ ಗಳನ್ನು ಹತ್ತಿಕ್ಕಲು ಯಶಸ್ವಿಯಾದರು.
ವಿಕಾಸ್ ಕಂಡೋಲಾ 13 ರೈಡಿಂಗ್ ಪಾಯಿಂಟ್, ಭರತ್ 15 ರೈಡಿಂಗ್ ಪಾಯಿಂಟ್ ಗಳಿಸಿ ಬೆಂಗಳೂರು ಬುಲ್ಸ್ ತಂಡದ ಗೆಲುವಿಗೆ ಕಾರಣರಾದರು. ಪಂದ್ಯದ ಮೊದಲಾರ್ಧದ ಹೊತ್ತಿಗೆ ದಬಾಂಗ್ ಡೆಲ್ಲಿಯನ್ನು ಎರಡು ಬಾರಿ ಆಲೌಟ್ ಮಾಡುವಲ್ಲಿ ಬೆಂಗಳೂರು ಬುಲ್ಸ್ ಯಶಸ್ವಿಯಾದರು. ಮೊದಲಾರ್ಧದ ಮುಕ್ತಾಯದ ವೇಳೆಗೆ ಬೆಂಗಳೂರು ಬುಲ್ಸ್ 31-15 ಪಾಯಿಂಟ್ಸ್‌ಗಳ ಮುನ್ನಡೆ ಕಾಯ್ದುಕೊಂಡಿದ್ದರು.
ಇದನ್ನೂ ಓದಿ : R Ashwin Record: ಐತಿಹಾಸಿಕ ದಾಖಲೆ ಮುರಿಯುವ ಸನಿಹದಲ್ಲಿ ಅಶ್ವಿನ್: ಅನಿಲ್ ಕುಂಬ್ಳೆ ರೆಕಾರ್ಡ್ ಬ್ರೇಕ್ ಮಾಡ್ತಾರಾ!
ಮತ್ತೊಂದೆಡೆ ಡಿಫೆಂಡಿಂಗ್‌ನಲ್ಲಿ ಪಾರ್ಥಿಬನ್ ಆಟಕ್ಕೆ ಡಬಾಂಗ್ ಡೆಲ್ಲಿ ರೈಡರ್ ಗಳು ಮಣಿಯಬೇಕಾಯಿತು. ಪಾರ್ಥಿಬನ್ 7 ಟ್ಯಾಕಲ್ ಪಾಯಿಂಟ್ ಪಡೆದರು. ಸೌರಭ್ ನಂದಲ್ 5 ಟ್ಯಾಕಲ್ ಪಾಯಿಂಟ್‌ಗಳನ್ನು ಪಡೆದರು. ಆಟದ ದ್ವಿತೀಯಾರ್ಧದಲ್ಲಿಯೂ ದಬಾಂಗ್ ಡೆಲ್ಲಿ ಗೂಳಿಗಳ ಎದುರು ಅಬ್ಬರಿಸಲು ಸಾಧ್ಯವಾಗಲಿಲ್ಲ. ಇದೀಗ ಡೆಲ್ಲಿ ವಿರುದ್ಧ ಭರ್ಜರಿ ಜಯಗಳಿಸಿರುವ ಬುಲ್ಸ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಬೆಂಗಳೂರು ಬುಲ್ಸ್ ಸೆಮಿಫೈನಲ್‌ನಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಸೆಣೆಸಲಿದೆ. ಡಿಸೆಂಬರ್ 15ರಂದು ರಾತ್ರಿ 7.30ಕ್ಕೆ ಬೆಂಗಳೂರು ಬುಲ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ನಡುವೆ ಸೆಮಿಫೈನಲ್ ಪಂದ್ಯ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.