ಕೆ.ಎಲ್.ರಾಹುಲ್ ಟೀಮ್ ಇಂಡಿಯಾಗೆ ಅಗತ್ಯವಿಲ್ಲ ಎಂದ್ರಾ ಈ ಆಟಗಾರ...!

Written by - Manjunath N | Last Updated : Aug 5, 2022, 12:28 PM IST
  • ಇಂತಹ ಸಂದರ್ಭದಲ್ಲಿ ನಮಗೆ ನಿಜವಾಗಿಯೂ ಕೆಎಲ್ ರಾಹುಲ್ ಬೇಕೇ?
  • ಅವರು ಒಂದು ವೇಳೆ ತಂಡಕ್ಕೆ ಹಿಂತಿರುಗಿದಲ್ಲಿ ಉತ್ತಮ ಫಾರ್ಮ್‌ನಲ್ಲಿ ಇರುತ್ತಾರೆಯೇ?
ಕೆ.ಎಲ್.ರಾಹುಲ್ ಟೀಮ್ ಇಂಡಿಯಾಗೆ ಅಗತ್ಯವಿಲ್ಲ ಎಂದ್ರಾ ಈ ಆಟಗಾರ...! title=

ಕನ್ನಡಿಗ ಕೆ.ಎಲ್.ರಾಹುಲ್ ಅವರು ನಿರಂತರ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೀಗಾಗಿ ಈಗ ಅವರು ಭಾರತ ತಂಡದಲ್ಲಿ ಇರಬೇಕೆ ಅಥವಾ ಬೇಡವೇ? ಎನ್ನುವ ಚರ್ಚೆಗಳು ಎದ್ದಿವೆ. ಇದಕ್ಕೆ ಪೂರಕ ಎನ್ನುವಂತೆ ಈಗ ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಸ್ಕಾಟ್ ಸ್ಟೈರಿಸ್ ನೀಡಿರುವ ಹೇಳಿಕೆ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ರಾಹುಲ್ ಗೆ ಆರಂಭದಲ್ಲಿ ಗಾಯದ ಸಮಸ್ಯೆ ಎದುರಾದರೆ ತದನಂತರ ಅವರಿಗೆ ಕೊರೊನಾ ಧೃಡಪಟ್ಟಿತ್ತು, ಹೀಗಾಗಿ ಅವರು ಐಪಿಎಲ್ ನಂತರ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ.ಈ ಹಿನ್ನೆಲೆಯಲ್ಲಿ ಈಗ ಸ್ಕಾಟ್ ಸ್ಟೈರಿಸ್ ಟೀಮ್ ಇಂಡಿಯಾದಲ್ಲಿ ರಾಹುಲ್ ಅನುಪಸ್ಥಿತಿಯ ನಡುವೆಯೂ ಕೂಡ ರಿಶಬ್ ಪಂತ್ ಹಾಗೂ ಸೂರ್ಯಕುಮಾರ್ ಯಾದವ್ ರಂತಹ ಆಟಗಾರರು ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ, ಹೀಗಾಗಿ ಈಗ ಆಯ್ಕೆ ಸಮಿತಿ ರಾಹುಲ್ ನಿಜವಾಗಿಯೂ ಟೀಮ್ ಇಂಡಿಯಾಗೆ ಅಗತ್ಯವಿದ್ದಾರೆಯೇ? ಎನ್ನುವ ನಿಟ್ಟಿನಲ್ಲಿ ಚರ್ಚೆ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.

"ಇದು ಆಟಗಾರರಿಗೆ ವಿಭಿನ್ನ ಮನಸ್ಥಿತಿಯಾಗಿದೆ ಏಕೆಂದರೆ, ಅವರು ಔಟಾಗಲು ಬಯಸುವುದಿಲ್ಲ ಮತ್ತು ಅವರು ಇತರ ಆಟಗಾರರಿಗೆ ಅವಕಾಶಗಳನ್ನು ನೀಡಲು ಬಯಸುವುದಿಲ್ಲ. ಭಾರತವು ತನ್ನ ಗುಂಪಿನಲ್ಲಿ ಉತ್ತಮ ಸಂಸ್ಕೃತಿಯನ್ನು ಹೊಂದಿದೆ ಎಂದು ನನಗೆ ತಿಳಿದಿದೆ, ಆದ್ದರಿಂದ ಇತರ ಆಟಗಾರರಿಗೆ ಅನುಮತಿಸಲು ಮನಸ್ಸಿಲ್ಲ ಎಂದು ಸ್ಕಾಟ್ ಸ್ಟೈರಿಸ್ ಹೇಳಿದ್ದಾರೆ.

ಇದನ್ನೂ ಓದಿ: Vikrant Rona Collection : 150 ಕೋಟಿ ಗಡಿ ದಾಟುತ್ತಾ ವಿಕ್ರಾಂತ್ ರೋಣ? 7ನೇ ದಿನದ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತೀರಾ!

"ಅವರು ಈಗ ಗಾಯಗೊಂಡು ತಂಡದಿಂದ ದೂರವಿದ್ದಾರೆ, ಇದೇ ವೇಳೆ ಇತರ ಆಟಗಾರರಾದ ಸೂರ್ಯಕುಮಾರ್ ಏನು ಮಾಡುತ್ತಿದ್ದಾರೆ, ರಿಷಬ್ ಪಂತ್ ಏನು ಮಾಡುತ್ತಿದ್ದಾರೆ ಎನ್ನುವುದನ್ನು ನಾವು ನೋಡಬೇಕು, ಅವರು ಈಗಾಗಲೇ ತಂಡದಲ್ಲಿ ಅವಕಾಶವನ್ನು ಪಡೆದು ರನ್ ಗಳಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮಗೆ ನಿಜವಾಗಿಯೂ ಕೆಎಲ್ ರಾಹುಲ್  ಅವರ ಅಗತ್ಯವಿದೆಯೇ? ಅವರು ಒಂದು ವೇಳೆ ತಂಡಕ್ಕೆ ಹಿಂತಿರುಗಿದಲ್ಲಿ ಉತ್ತಮ ಫಾರ್ಮ್‌ನಲ್ಲಿ ಇರುತ್ತಾರೆಯೇ? ಅವರು ಬಹಳಷ್ಟು ಕ್ರಿಕೆಟ್‌ನಿಂದ ತಪ್ಪಿಸಿಕೊಂಡಿದ್ದಾರೆ, ಅವರು ಸಮರ್ಥರಾಗಿದ್ದಾರೆ ಎಂಬ ಕಾರಣಕ್ಕಾಗಿ ಈಗ ಬಹಳಷ್ಟು ಪ್ರಶ್ನೆಗಳು ಎದುರಾಗುತ್ತವೆ, ಹಾಗಾಗಿ ಇತರ ಆಟಗಾರರಿಗೆ ಆ ಅವಕಾಶವನ್ನು ನೀಡಿ' ಎಂದು ಅವರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News