Rohit Sharma Viral Video: ಮೊದಲ ಏಕದಿನ ಪಂದ್ಯವನ್ನಾಡಲು ಭಾರತ ತಂಡ ಗುವಾಹಟಿ ತಲುಪಿದೆ. ಮಧ್ಯಾಹ್ನ 1.30 ರಿಂದ ಗುವಾಹಟಿಯಲ್ಲಿ ನಡೆಯಲಿರುವ ಏಕದಿನ ಪಂದ್ಯಕ್ಕೂ ಮುನ್ನ ಭಾರತ ತಂಡದ ಅಭ್ಯಾಸವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಕೂಡ ಅಭಿಮಾನಿಗಳನ್ನು ಭೇಟಿಯಾಗಲು ತೆರಳಿದ್ದರು.
ಈ ವೇಳೆ ಅಭಿಮಾನಿಗಳ ನಡುವೆ 10-15 ವರ್ಷದ ಹುಡುಗ ಜೋರಾಗಿ ಅಳುತ್ತಿದ್ದನು. ಆಗ ರೋಹಿತ್ ಶರ್ಮಾ ಆ ಹುಡುಗನನ್ನು ಸಮಾಧಾನಗೊಳಿಸಿದ್ದರು. ಇದೀಗ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: Team India Opener: ಏಕದಿನ ಪಂದ್ಯಕ್ಕೆ ಹೊಸ ಓಪನರ್: ರೋಹಿತ್ ಶರ್ಮಾಗೆ ಜೋಡಿಯಾಗಲಿರುವ ಆರಂಭಿಕ ಇವರೇ
ರೋಹಿತ್ ಶರ್ಮಾ ಅಭಿಮಾನಿಗಳನ್ನು ಭೇಟಿ ಮಾಡಲು ಹೋದಾಗ ಬಾಲಕನೋರ್ವ ಶರ್ಮಾರನ್ನು ನೋಡಿ ಅಳಲು ಪ್ರಾರಂಭಿಸಿದ. ನಂತರ ರೋಹಿತ್ ಆತನನ್ನು ಸಮಾಧಾನಪಡಿಸಿದ್ದರು. ಬಾಲಕನನ್ನು ಸಮಾಧಾನಗೊಳಿಸಿದ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
A little Rohit Sharma fan Getting emotial after met his Idol.
Cricket is such a emotion for every generation.#RohitSharma #Guwahati #Assam pic.twitter.com/8N9ehqJBo1— Riyaan (@imdeepjyotideka) January 9, 2023
ಬಾಲಕನ ಕಣ್ಣೀರು ಒರೆಸುತ್ತಾ, “ಯಾಕೆ ಅಳುತ್ತಿದ್ದೀಯಾ? ಚಬ್ಬೀ ಚೀಕ್ಸ್” ಎಂದು ಕೆನ್ನೆ ಮುಟ್ಟಿ ಮುದ್ದಾಡಿದ್ದಾರೆ. ಬಳಿಕ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ದೃಶ್ಯ ಕಂಡ ಜನರು ನಕ್ಕಿದ್ದಾರೆ. ಸದ್ಯ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸ್ಫೋಟಕ ಬ್ಯಾಟಿಂಗ್ ತಜ್ಞ
ರೋಹಿತ್ ಶರ್ಮಾ ಭಾರತದ ಸ್ಫೋಟಕ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಭಾರತ ತಂಡಕ್ಕೆ ಸ್ವಂತ ಬಲದಿಂದ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಅವರು ಉತ್ತಮ ಫಾರ್ಮ್ ನಲ್ಲಿದ್ದಾಗ ಎಂತಹದ್ದೇ ಬಿರುಸಿನ ಬೌಲಿಂಗ್ ಆದರೂ ಸರಿ ಅದನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗುತ್ತಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಮೂರು ದ್ವಿಶತಕಗಳನ್ನು ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ರೋಹಿತ್. ಅವರ ಸಿಕ್ಸರ್‌ಗಳನ್ನು ಹೊಡೆಯುವ ಸಾಮರ್ಥ್ಯ ಎಲ್ಲರಿಗೂ ತಿಳಿದಿದೆ.
ಇದನ್ನೂ ಓದಿ: Irfan Pathan: ಭಾರತದ ಗೆಲುವಿಗೆ ಈ ಆಟಗಾರ ಫಾರ್ಮ್ಗೆ ಬರುವುದು ಬಹಳ ಮುಖ್ಯ: ಇರ್ಫಾನ್ ಪಠಾಣ್ ಹೇಳಿದ್ದು ಯಾರಿಗೆ ಗೊತ್ತಾ?
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಲೋಕೇಶ್ ರಾಹುಲ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಶಮಿ, ಉಹಮ್ಮದ್ ಮಾ ಸಿರಾಜ್ ಮತ್ತು ಅರ್ಷದೀಪ್ ಸಿಂಗ್.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.