ಭಾರತದ ಜೊತೆಗಿನ ಪ್ರತಿ ಪಂದ್ಯವೂ ಫಿಕ್ಸ್...‌ ಮ್ಯಾಚ್‌ ಫಿಕ್ಸಿಂಗ್‌ ಆರೋಪ ಹೊರಿಸಿದ ಪಾಕ್‌ ಆಟಗಾರ! ಆತ ಯಾರು ಗೊತ್ತಾ?

Mudassar Nazar statement on match fixing: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಮುದಸ್ಸರ್ ನಜರ್ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿನ ಫಿಕ್ಸಿಂಗ್ ಬಗ್ಗೆ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ ಈ ಕಾರಣದಿಂದ ಪಾಕಿಸ್ತಾನದ ಕ್ರಿಕೆಟ್ ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ ಎಂದು ಹೇಳಿದ್ದಾರೆ.  

Written by - Bhavishya Shetty | Last Updated : Oct 2, 2024, 07:33 PM IST
    • ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಮುದಸ್ಸರ್ ನಜರ್
    • ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿನ ಫಿಕ್ಸಿಂಗ್ ಬಗ್ಗೆ ವಿಷಯ ಬಹಿರಂಗ
    • ಈ ಕಾರಣದಿಂದ ಪಾಕಿಸ್ತಾನದ ಕ್ರಿಕೆಟ್ ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ ಎಂದು ಹೇಳಿದ್ದಾರೆ
ಭಾರತದ ಜೊತೆಗಿನ ಪ್ರತಿ ಪಂದ್ಯವೂ ಫಿಕ್ಸ್...‌ ಮ್ಯಾಚ್‌ ಫಿಕ್ಸಿಂಗ್‌ ಆರೋಪ ಹೊರಿಸಿದ ಪಾಕ್‌ ಆಟಗಾರ! ಆತ ಯಾರು ಗೊತ್ತಾ? title=
File Photo

IND vs PAK Match Fixing: ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವನ್ನು ಯಾವಾಗಲೂ ಹೈ ವೋಲ್ಟೇಜ್ ಎಂದು ಪರಿಗಣಿಸಲಾಗಿದೆ. ಮೈದಾನದಲ್ಲಿ ಎರಡೂ ತಂಡಗಳು ಮುಖಾಮುಖಿಯಾದಾಗಲೆಲ್ಲಾ ಪೈಪೋಟಿ ಕೇವಲ ಆಟಗಾರರ ನಡುವೆಯೇ ಅಲ್ಲ ತಂಡದ ಕೋಟ್ಯಂತರ ಅಭಿಮಾನಿಗಳ ನಡುವೆಯೂ ನಡೆಯುತ್ತದೆ.

ಇದನ್ನೂ ಓದಿ:  ಒಂದೇ ಒಂದು ಲವಂಗವನ್ನು ಇದರ ಜೊತೆ ಸುಟ್ಟು ಮನೆಯ ಈ ದಿಕ್ಕಿನಲ್ಲಿಡಿ: ಮನೆತುಂಬಾ ಶುಕ್ರದೆಸೆ ವೃದ್ಧಿಸಿ ಸಂಪತ್ತು ತುಂಬಿತುಳುಕುವುದು! ಕಾರು-ಬಂಗಲೆಗೆ ಮಾಲೀಕರಾಗುವಿರಿ

ಆದರೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಮುದಸ್ಸರ್ ನಜರ್ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿನ ಫಿಕ್ಸಿಂಗ್ ಬಗ್ಗೆ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ ಈ ಕಾರಣದಿಂದ ಪಾಕಿಸ್ತಾನದ ಕ್ರಿಕೆಟ್ ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ ಎಂದು ಹೇಳಿದ್ದಾರೆ.

ಮುದಸ್ಸರ್ ನಾಜರ್ ಹೇಳಿದ್ದೇನು?
ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮುದಸ್ಸರ್ ನಜರ್ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಪಂದ್ಯದ ಬಗ್ಗೆ ಮಾತನಾಡುತ್ತಾ, "ಪ್ರತಿ ಬಾರಿ ತಮ್ಮ ತಂಡ ಪಂದ್ಯ ಸೋತಾಗ, ಪಾಕಿಸ್ತಾನದ ಪ್ರತಿಯೊಬ್ಬರೂ ಪಂದ್ಯ ಫಿಕ್ಸ್ ಮಾಡಲಾಗಿದೆ ಎಂದು ಭಾವಿಸುತ್ತಾರೆ. ಇನ್ನು 90ರ ದಶಕದಲ್ಲಿ ಪಾಕಿಸ್ತಾನ ತಂಡವನ್ನು ಗಮನಿಸಿದರೆ 90ರ ದಶಕದಲ್ಲಿ ಆಸ್ಟ್ರೇಲಿಯದಂತೆಯೇ ಪ್ರತಿಭೆಯ ದೃಷ್ಟಿಯಿಂದ ಬಲಿಷ್ಠವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ತಂಡ ಸೋತಾಗಲೆಲ್ಲ ಪಂದ್ಯ ಫಿಕ್ಸ್ ಆಗಿದೆ ಎಂದು ಜನ ಹೇಳುತ್ತಾರೆ. ಅದರಲ್ಲೂ ಭಾರತದ ಜೊತೆಗಿನ ಪ್ರತಿ ಪಂದ್ಯಕ್ಕೂ ಈ ವಿವಾದ ಹೇರಲಾಗುತ್ತದೆ. ಇದರಿಂದ ತಂಡದ ಮೇಲೆ ಹೆಚ್ಚುವರಿ ಒತ್ತಡವಿರುತ್ತದೆ" ಎಂದು ಹೇಳಿದ್ದಾರೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮುದಸ್ಸರ್ ನಜರ್ ಅವರು ಕ್ರಿಕೆಟ್‌ನಲ್ಲಿ ಮ್ಯಾಚ್-ಫಿಕ್ಸಿಂಗ್ ಕುರಿತು ಮಾತನಾಡುತ್ತಾ, ತಮ್ಮ ತಂಡವು ಭಾರತದೊಂದಿಗೆ ಪಂದ್ಯವನ್ನು ಸೋತಾಗಲೆಲ್ಲಾ, ನಮ್ಮ ಜನರು ಪಂದ್ಯವನ್ನು ಫಿಕ್ಸ್‌ ಮಾಡಲಾಗಿದೆ ಎಂದು ಭಾವಿಸುತ್ತಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸೂಪರ್‌ಸ್ಟಾರ್‌ ರಜನಿಕಾಂತ್‌ ಆರೋಗ್ಯದಲ್ಲಿ ಏರುಪೇರು, ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಾದ ತಲೈವ! ಅಭಿಮಾನಿಗಳಲ್ಲಿ ಹೆಚ್ಚಾಯ್ತು ಆತಂಕ

ಮುದಸ್ಸರ್ ನಾಜರ್ ಯಾರು?
ಮುದಸ್ಸರ್ ನಾಜರ್ 1976 ರಿಂದ 1986 ರವರೆಗೆ ಪಾಕಿಸ್ತಾನಕ್ಕಾಗಿ 76 ಟೆಸ್ಟ್ ಮತ್ತು 122 ODI ಪಂದ್ಯಗಳನ್ನು ಆಡಿದ್ದಾರೆ. ಮುದಸ್ಸರ್ ಟೆಸ್ಟ್ ಕ್ರಿಕೆಟ್‌ನಲ್ಲಿ 4114 ರನ್ ಗಳಿಸಿದ್ದು, ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 231 ರನ್. ಟೆಸ್ಟ್ ಕ್ರಿಕೆಟ್‌ನಲ್ಲಿ 10 ಶತಕ ಮತ್ತು 17 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್ ಬಗ್ಗೆ ಮಾತನಾಡುವುದಾದರೆ, ಮುದಸ್ಸರ್ ನಾಜರ್ ಒಟ್ಟು 2653 ರನ್ ಗಳಿಸಿದ್ದು. ಇದರಲ್ಲ 16 ಅರ್ಧಶತಕಗಳು ಸೇರಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News