ಬೆಂಗಳೂರು: ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ಭಾರೀ ಮಳೆಯಾಗುತ್ತಿದ್ದು, ಇದರಿಂದಾಗಿ ನಗರವೆಲ್ಲಾ ಜಲಾವೃತವಾಗಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದಿಂದಾಗಿ ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ ಇದರಿಂದಾಗಿ ಉದ್ಯಾನನಗರಿಯಲ್ಲಿ ಅಕ್ಟೋಬರ್ 25ರವರೆಗೆ ಒಂದು ವಾರ ಮಳೆ ಸುರಿಯುವ ನಿರೀಕ್ಷೆಯಿದೆ.
ಬೆಂಗಳೂರಿನಲ್ಲಿ ಮುಂದಿನ ಕೆಲವು ದಿನಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಅಕ್ಟೋಬರ್ 20 ಮತ್ತು 21 ರಂದು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್ 22 ರಂದು ಲಘು ಮಳೆಯಾಗಲಿದ್ದು, ಅಕ್ಟೋಬರ್ 23, 24 ಮತ್ತು 25 ರಂದು ಹೆಚ್ಚು ಸ್ಥಿರವಾದ ಮಳೆಯಾಗುವ ಸಾಧ್ಯತೆಯಿದೆ.
It's currently raining at Chinnaswamy stadium. 🌧️ pic.twitter.com/eDv94kJpGB
— Tanuj Singh (@ImTanujSingh) October 20, 2024
ಇದನ್ನೂ ಓದಿ: ಪೊರಕೆ ಕೊಳ್ಳುವಾಗ ಈ ವಿಷಯಗಳನ್ನು ಗಮನದಲ್ಲಿಡಿ.. ಇಲ್ಲದಿದ್ದರೆ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ! ಬಡತನ-ಕಷ್ಟ ಎದುರಾಗುತ್ತೆ!
ಕೀವಿಸ್ ಪಡೆಗೆ ಕಂಟಕವಾಗಲಿದ್ದಾನೆಯೇ ವರುಣ..?
ಭಾನುವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಮ್ ಲ್ಯಾಥಮ್ ಅವರ ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ಟೆಸ್ಟ್ ಪಂದ್ಯದ ಐದನೇ ಮತ್ತು ಅಂತಿಮ ದಿನದಂದು ಗೆಲ್ಲಲು ಕೇವಲ 107 ರನ್‌ಗಳ ಅಗತ್ಯವಿದೆ. ಒಂದು ವೇಳೆ ಈ ಪಂದ್ಯವನ್ನು ಗೆದ್ದಿದ್ದೆ ಆದಲ್ಲಿ ನ್ಯೂಜಿಲೆಂಡ್ ತಂಡವು 1989 ರ ನಂತರ ಟೆಸ್ಟ್ ಪಂದ್ಯವನ್ನು ಗೆದ್ದಂತಾಗಲಿದೆ.1989 ರಲ್ಲಿ ನ್ಯೂಜಿಲೆಂಡ್ ಕೊನೆಯ ಬಾರಿಗೆ ಭಾರತದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತ್ತು, ಸರ್ ರಿಚರ್ಡ್ ಹ್ಯಾಡ್ಲಿ ಆಗ ಇನ್ನೂ ಸಕ್ರಿಯ ಟೆಸ್ಟ್ ಕ್ರಿಕೆಟಿಗರಾಗಿದ್ದರು.ಆದರೆ ಈಗ ಅಕ್ಯುವೆದರ್ ಪ್ರಕಾರ, ಬೆಂಗಳೂರಿನ ಕೆಲವು ಭಾಗಗಳಲ್ಲಿ ಭಾನುವಾರ (ಅಕ್ಟೋಬರ್ 20) ದಿನವಿಡೀ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ ಎನ್ನಲಾಗಿದೆ.
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T