ನವದೆಹಲಿ: 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 8ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿ(KKR vs PBKS)ಯಾಗಲಿವೆ. ಮುಂಬೈನ ವಾಂಖೆಡೆ ಸ್ಟೇಡಿಯಂ(Wankhede Stadium)ನಲ್ಲಿ ಇಂದು ಸಂಜೆ 7.30ಕ್ಕೆ ನಡೆಯಲಿರುವ ಈ ಪಂದ್ಯ ಭಾರೀ ಕುತೂಹಲ ಮೂಡಿಸಿದೆ.
ಪ್ರಸಕ್ತ ಟೂರ್ನಿಯಲ್ಲಿ ಕೆಕೆಆರ್(Kolkata Knight Riders) 2 ಪಂದ್ಯಗಳನ್ನು ಆಡಿದ್ದು, ಚೆನ್ನೈ ವಿರುದ್ಧ ಗೆಲವು ಸಾಧಿಸಿದರೆ, ಕಳೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಸೋಲು ಕಂಡಿದೆ. ಅದೇ ರೀತಿ ಪಂಜಾಬ್ ಕಿಂಗ್ಸ್ ಆಡಿದ ಮೊದಲ ಪಂದ್ಯದಲ್ಲಿಯೇ ಆರ್‌ಸಿಬಿಗೆ ಮಣ್ಣು ಮುಕ್ಕಿಸಿ ಮತ್ತೊಂದು ಗೆಲುವಿನ ಉತ್ಸಾಹದಲ್ಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಉಭಯ ತಂಡಗಳು ಬಲಿಷ್ಠವಾಗಿದ್ದು, ಇಂದಿನ ಪಂದ್ಯದಲ್ಲಿ ಭರ್ಜರಿ ಪೈಪೋಟಿ ನಡೆಯುವ ನಿರೀಕ್ಷೆ ಇದೆ.
ಇದನ್ನೂ ಓದಿ: IPL 2022 ಹರಾಜಿನಲ್ಲಿ 10.75 ಕೋಟಿಗೆ ಮಾರಾಟವಾದ ಈ ಆಟಗಾರನ ಅತ್ಯಂತ ಮುಜುಗರದ ದಾಖಲೆ!
WE. ARE. IN. FOR. A. RIDE. 😍#SaddaPunjab #KKRvPBKS #IPL2022 #PunjabKings #ਸਾਡਾਪੰਜਾਬ @mayankcricket @ShreyasIyer15 @KKRiders pic.twitter.com/PWi0QTOstH
— Punjab Kings (@PunjabKingsIPL) April 1, 2022
ಶ್ರೇಯಸ್ ಅಯ್ಯರ್(Shreyas Iyer) ನೇತೃತ್ವದ ಕೆಕೆಆರ್ ನಲ್ಲಿ ಅನುಭವಿ ಮತ್ತು ಯುವ ಆಟಗಾರರು ತುಂಬಿಕೊಂಡಿದ್ದು, ಪಂಜಾಬ್ ಮೇಲೆ ಸವಾರಿ ಮಾಡಲು ತಂಡ ಸಜ್ಜಾಗಿದೆ. ಅದೇ ರೀತಿ ಮಯಾಂಕ್ ಅಗರ್ವಾಲ್(Mayank Agarwal)ನೇತೃತ್ವದ ಪಂಜಾಬ್ ಕಿಂಗ್ಸ್(Punjab Kings)ನಲ್ಲಿ ಯುವ ಆಟಗಾರರೇ ಹೆಚ್ಚಾಗಿದ್ದು, ಗೆಲುವಿನ ಮೇಲೆ ಕಣ್ಣಿಟ್ಟಿದೆ. ವಾಂಖೆಡೆಯಲ್ಲಿ ಇದುವರೆಗೆ 2 ಪಂದ್ಯಗಳು ನಡೆದಿದ್ದು, ಪಂದ್ಯದ ಫಲಿತಾಂಶದಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಲಿದೆ. 2ನೇ ಇನ್ನಿಂಗ್ಸ್‍ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚು ಅನುಕೂಲವಾಗಲಿದೆ.
ಐಪಿಎಲ್‍ನಲ್ಲಿ ಕೋಲ್ಕತ್ತಾ ಮತ್ತು ಪಂಜಾಬ್ ಇದುವರೆಗೆ 29 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಕೆಕೆಆರ್ ಮೇಲುಗೈ ಸಾಧಿಸಿದೆ.19 ಪಂದ್ಯದಲಲ್ಲಿ ಕೋಲ್ಕತ್ತಾ ಗೆದ್ದಿದ್ದರೆ, ಪಂಜಾಬ್ 10ರಲ್ಲಿ ಗೆದ್ದಿದೆ. ಕೋಲ್ಕತ್ತಾ ಬ್ಯಾಟಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಬೇಕಿದೆ. ಅದೇ ರೀತಿ ಪಂಜಾಬ್‍ನಲ್ಲಿ ನಿಂತು ಆಡುವ ಆಟಗಾರರ ಅವಶ್ಯಕತೆ ಇದೆ. ಕೆಕೆಆರ್(Kolkata Knight Riders) ಮತ್ತು ಪಂಜಾಬ್ ನಡುವಿನ ಕದನದಲ್ಲಿ ಯಾರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: IPL 2022 ಹರಾಜಿನಲ್ಲಿ 10.75 ಕೋಟಿಗೆ ಮಾರಾಟವಾದ ಈ ಆಟಗಾರನ ಅತ್ಯಂತ ಮುಜುಗರದ ದಾಖಲೆ!
ಎರಡೂ ತಂಡಗಳ ಸ್ಕ್ವಾಡ್ ಈ ರೀತಿ ಇದೆ:
ಕೋಲ್ಕತ್ತಾ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್ (ನಾಯಕ), ಶೆಲ್ಡನ್ ಜಾಕ್ಸನ್ (ವಿಕೆಟ್ ಕೀಪರ್), ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್, ಆಂಡ್ರೆ ರಸೆಲ್, ಸುನಿಲ್ ನರೈನ್, ಟಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ, ಶಿವಂ ಮಾವಿ, ಮೊಹಮ್ಮದ್ ನಬಿ, ಚಾಮಿಕಾ ಕರುಣಾ, ಬಾಬಾ ಇಂದ್ರಜಿತ್, ರಿಂಕು ಸಿಂಗ್, ಅನುಕುಲ್ ರಾಯ್, ಪ್ರಥಮ್ ಸಿಂಗ್, ಅಭಿಜೀತ್ ತೋಮರ್, ರಸಿಖ್ ಸಲಾಂ, ಅಮನ್ ಹಕೀಮ್ ಖಾನ್, ಅಶೋಕ್ ಶರ್ಮಾ, ರಮೇಶ್ ಕುಮಾರ್
ಪಂಜಾಬ್ ಕಿಂಗ್ಸ್: ಮಯಾಂಕ್ ಅಗರ್ವಾಲ್ (ನಾಯಕ), ಭಾನುಕಾ ರಾಜಪಕ್ಸೆ (ವಿಕೆಟ್ ಕೀಪರ್), ಶಿಖರ್ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಶಾರುಖ್ ಖಾನ್, ಒಡಿಯನ್ ಸ್ಮಿತ್, ರಾಜ್ ಬಾವಾ, ಅರ್ಷದೀಪ್ ಸಿಂಗ್, ಹರ್‌ಪ್ರೀತ್ ಬ್ರಾರ್, ಸಂದೀಪ್ ಶರ್ಮಾ, ರಾಹುಲ್ ಚಾಹರ್, ಪ್ರಭಾಸಿಮ್ರಾನ್ ಸಿಂಗ್, ರಿಷಿ ಧವನ್, ಬೆನ್ನಿ ಹೋವೆಲ್, ಇಶಾನ್ ಪೊರೆಲ್, ವೈಭವ್ ಅರೋರಾ, ಅಂಶ್ ಪಟೇಲ್, ಅಥರ್ವ ಟೈಡೆ, ಪ್ರೇರಕ್ ಮಂಕಡ್, ಜಿತೇಶ್ ಶರ್ಮಾ, ಕಗಿಸೊ ರಬಾಡ, ರಿಟಿಕ್ ಚಟರ್ಜಿ, ಬಲ್ತೇಜ್ ಸಿಂಗ್
ಐಪಿಎಲ್ ಪಂದ್ಯ: 08
ಪಂಜಾಬ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್
ದಿನಾಂಕ: ಏಪ್ರಿಲ್ 01, ಶುಕ್ರವಾರ
ಸ್ಥಳ: ಮುಂಬೈನ ವಾಂಖೆಡೆ ಸ್ಟೇಡಿಯಂ
ಸಮಯ: ಸಂಜೆ 7.30ಕ್ಕೆ
===================================================================================================
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.