ಮೆಲ್ಬೋರ್ನ್: ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ದಾಳಿಗೆ ತತ್ತರಿಸಿದ ಕಾಂಗರೂ ಪಡೆ ಕೇವಲ 151 ರನ್ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು. ಭಾರತಕ್ಕೆ ಮೊದಲ ಇನಿಂಗ್ಸ್ನಲ್ಲಿ ಮಹತ್ವದ 292 ರನ್ ಮುನ್ನಡೆ ದೊರೆತಿದೆ.
ನಿನ್ನೆ ವಿಕೆಟ್ ನಷ್ಟವಿಲ್ಲದೇ 8 ರನ್ ಗಳಿಸಿದ್ದ ಆಸ್ಟ್ರೇಲಿಯಾ ಇಂದು ಭಾರತೀಯ ಬೌಲರ್ ಗಳ ದಾಳಿಗೆ ತತ್ತರಿಸಿತು. ಆಸೀಸ್ ಪರ ಮಾರ್ಕಸ್ ಹ್ಯಾರಿಸ್ 22 , ಉಸ್ಮಾನ್ ಖ್ವಾಜಾ 21, ಶಾನ್ ಮಾರ್ಶ್ 19, ಟ್ರಾವಿಸ್ ಹೆಡ್ 20, ಟಿಮ್ ಪೇಯ್ನ 22, ಪ್ಯಾಟ್ ಕ್ಯುಮಿನ್ಸ್ 17 ರನ್ಗಳಿಸಿದೆ ಉಳಿದ ಆಟಗಾರರ್ಯಾರು ಒಂದಂಕಿ ದಾಟಲಿಲ್ಲ.
ಭಾರತದ ಪರ ಬಿಗಿ ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ 33 ಕ್ಕೆ 6 ವಿಕೆಟ್ ಕಿತ್ತು ಗಮನ ಸೆಳೆದರೆ, ಜಡೇಜಾ 2, ಇಶಾಂತ್ ಶರ್ಮಾ ಮತ್ತು ಮೊಹಮದ್ ಶಮಿ ತಲಾ 1 ವಿಕೆಟ್ ಪಡೆದರು.
Jasprit Bumrah bounced Marcus Harris to provide India with their second breakthrough of the morning. 👏🏻
Catch the action LIVE on SONY SIX and SONY TEN 3.#ChhodnaMat #AUSvIND #SPNSports pic.twitter.com/vFCbzODqes
— SPN- Sports (@SPNSportsIndia) December 28, 2018