KKR vs PBKS: ಕೊಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿನಲ್ಲಿ 17 ಆವೃತ್ತಿಗಳಲ್ಲಿ ಹಲವಾರು ತಂಡಗಳು ಬಾರಿ ಬೃಹತ್ ಮೊತ್ತವನ್ನು ಚೇಸಿಂಗ್ ಮಾಡಿದ ನಿದರ್ಶನಗಳಿಗೆ ಸಾಕ್ಷಿಯಾಗಿವೆ.
ಶುಕ್ರವಾರದಂದು ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಜಾನಿ ಬೈರ್ಸ್ಟೋವ್ ಅವರ ವೇಗದ ಶತಕದ ಹಿನ್ನಲೆಯಲ್ಲಿ ಕೇವಲ 18.4 ಓವರ್ಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ 262 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡವು T20 ಇತಿಹಾಸದಲ್ಲಿ ಅತ್ಯಧಿಕ ಯಶಸ್ವಿ ರನ್ ಚೇಸ್ ಮಾಡುವ ಮೂಲಕ ಹೊಸ ವಿಶ್ವದಾಖಲೆಯನ್ನು ನಿರ್ಮಿಸಿದೆ.
For his phenomenal show with the bat in a record chase, Jonny Bairstow bags the Player of the Match Award 🏆
Scorecard ▶️ https://t.co/T9DxmbgIWu#TATAIPL | #KKRvPBKS pic.twitter.com/G3HVTUmOJF
— IndianPremierLeague (@IPL) April 26, 2024
ಈ ಹಿಂದೆ, ರಾಜಸ್ಥಾನ್ ರಾಯಲ್ಸ್ ತಂಡವು 2020 ರ ಋತುವಿನಲ್ಲಿ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಯಶಸ್ವಿ ರನ್-ಚೇಸ್ ಮಾಡಿದ ದಾಖಲೆಯನ್ನು ಹೊಂದಿತ್ತು, ಅದು ಶಾರ್ಜಾದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ವಿರುದ್ಧ 224 ರನ್ ಗುರಿ ಚೇಸ್ ಮಾಡುವ ಮೂಲಕ ದಾಖಲೆ ನಿರ್ಮಿಸಿತ್ತು.
Record books kholke vekh lo! 📖#SaddaPunjab #PunjabKings #JazbaHaiPunjabi #TATAIPL2024 #KKRvPBKS pic.twitter.com/vZIqr1IM9m
— Punjab Kings (@PunjabKingsIPL) April 26, 2024
ಇದಾದ ನಂತರ ರಾಜಸ್ತಾನ್ ರಾಯಲ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 224 ರಳನ್ನು ಚೇಸ್ ಮಾಡುವ ಮೂಲಕ ಈ ಹಿಂದಿನ ದಾಖಲೆಯನ್ನು ಸರಿಗಟ್ಟಿತ್ತು.
ಇದುವರೆಗೆ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳನ್ನು ಚೇಸಿಂಗ್ ಮಾಡಿದ ತಂಡಗಳು
262 by PBKS v KKR (2024)*
224 by RR v KKR (2024)
224 by RR v PBKS (2020)
219 by MI v CSK (2021)
215 by RR v DEC (2008)
215 by SRH v RR (2023)
215 by MI v PBKS (2023)
ಸಂಕ್ಷಿಪ್ತ ಸ್ಕೋರ್: ಕೋಲ್ಕತ್ತಾ ನೈಟ್ ರೈಡರ್ಸ್: 20 ಓವರ್ಗಳಲ್ಲಿ 261/6 (ಫಿಲ್ ಸಾಲ್ಟ್ 75, ಸುನಿಲ್ ನರೈನ್ 71). ಪಂಜಾಬ್ ಕಿಂಗ್ಸ್: 18.4 ಓವರ್ಗಳಲ್ಲಿ 262/2 (ಜಾನಿ ಬೈರ್ಸ್ಟೋ 108, ಪ್ರಭ್ಸಿಮ್ರಾನ್ ಸಿಂಗ್ 54, ಶಶಾಂಕ್ ಸಿಂಗ್ 68).
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.