ನವ ದೆಹಲಿ: ಧೋನಿ ಫಿಟ್ನೆಸ್ ಮತ್ತು ಫಾರ್ಮ್ ಎರಡನ್ನೂ ಹೊಂದಿದ್ದಾರೆ. ಅವರು 2019ರ ವಿಶ್ವಕಪ್ ನಲ್ಲಿ ಆಡುತ್ತಾರೆ ಎಂದು ಹೇಳುವ ಮೂಲಕ ಭಾರತ ಕ್ರಿಕೆಟ್ ತಂಡದ ತರಬೇತುದಾರ ರವಿ ಶಾಸ್ತ್ರೀ, 2019ರ ವಿಶ್ವ ಕಪ್ನಲ್ಲಿ ಧೋನಿ ಆಡುವರೆ ಇಲ್ಲವೇ ಎಂಬ ಊಹಾ ಪೋಹಗಳಿಗೆ ತೆರೆ ಎಳೆದಿದ್ದಾರೆ.
ಅನಿಲ್ ಕುಂಬ್ಳೆಯ ನಿರ್ಗಮನದ ನಂತರ ಭಾರತ ತಂಡದ ಕೋಚ್ ಆಗಿರುವ ರವಿಶಾಸ್ತ್ರಿ ಬುಧವಾರ ಮಾಧ್ಯಮವೊಂದರಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಧೋನಿಯವರ ಪ್ರಸ್ತುತ ಫಾರ್ಮ್ & ಫಿಟ್ನೆಸ್ ಪರಗಣಿಸಿದರೆ ಅವರನ್ನು ತಂಡದಿಂದ ಕೈಬಿಡುವ ಯೋಚನೆ ಇಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.
ಇತ್ತೀಚಿಗೆ ಶ್ರೀಲಂಕಾದಲ್ಲಿ ನಡೆದ ಪಂದ್ಯಗಳಲ್ಲಿ ಧೋನಿ ಮಾಡಿದ ಸಾಧನೆಗಳನ್ನು ಪ್ರಶಂಸಿಸಿದ ರವಿಶಾಸ್ತ್ರಿ ಅವರಿಂದ ಮತ್ತಷ್ಟು ಒಳ್ಳೆಯ ಪ್ರದರ್ಶನ ನೀಡಲು ಸಾಧ್ಯ ಎಂಬ ವಿಶ್ವಾಸ ವ್ಯಕ್ತಪಡಿಸಿದರು.