ನವದೆಹಲಿ: ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಸರಣಿ ವೇಳೆ ಎಂ.ಎಸ್ ಧೋನಿ ಯವರಿಗೆ ವಿಶ್ರಾಂತಿ ನೀಡಿದ ನಿಟ್ಟಿನಲ್ಲಿ ಅವರು ನಿವೃತ್ತಿ ಘೋಶಿಸಬೇಕೆನ್ನುವ ಮಾತುಗಳು ಕೇಳಿ ಬಂದಿದ್ದವು. ಈಗ ಈ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಪಾಕ್ ಮಾಜಿ ಸ್ಪೋಟಕ ಆಟಗಾರ ಶಾಹಿದ್ ಆಫ್ರಿದಿ ಧೋನಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ಆಫ್ರಿದಿ ಮುಂಬರುವ 2019 ರಲ್ಲಿ ಭಾರತ ತಂಡವು ವಿಶ್ವಕಪ್ ಗೆಲ್ಲಬೇಕಾದರೆ ಧೋನಿ ತಂಡದಲ್ಲಿರುವುದು ಅವಶ್ಯಕವಾಗಿದೆ. ಭಾರತ ಕ್ರಿಕೆಟ್ ತಂಡಕ್ಕೆ ಯಾರೂ ಅವರಷ್ಟು ಕೊಡುಗೆ ನೀಡಿಲ್ಲ ಆದ್ದರಿಂದ ಅವರಿಗೆ ಯಾವಾಗ ನಿವೃತ್ತಿಯಾಗಬೇಕೆನ್ನುವ ಸಲಹೆಯನ್ನು ಯಾರೂ ನೀಡುವ ಅವಶ್ಯಕತೆ ಇಲ್ಲ ಎಂದು ಖಾಸಗಿ ಚಾನಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
ಇದೇ ವೇಳೆ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ಆಫ್ರಿದಿ ಅವರು ತಮ್ಮ ನೆಚ್ಚಿನ ಆಟಗಾರರಲ್ಲಿ ಒಬ್ಬರು ಆದರೆ ನಾಯಕನಾಗಿ ಇನ್ನು ಅವರು ಸುಧಾರಣೆ ಹೊಂದಬೇಕೆಂದು ತಿಳಿಸಿದರು. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಸರಣಿ ಬಗ್ಗೆ ಮಾತನಾಡಿದ ಅವರು"ಭಾರತ-ಆಸ್ಟ್ರೇಲಿಯಾ ಸರಣಿಯು ಬಹಳ ರೋಮಾಂಚಕಾರಿ ಸ್ಪರ್ಧೆಯಾಗಿದೆ.ಆದರೆ ಈಗಿನ ತಂಡವು ಆಸ್ಟ್ರೇಲಿಯಾವನ್ನು ಆಸ್ಟ್ರೇಲಿಯಾ ದಲ್ಲಿಯೇ ಸೋಲಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎನ್ನುವುದನ್ನು ನೋಡಬೇಕಾಗಿದೆ.ಈ ವೇಳೆ ತಂಡವು ಒಗ್ಗಟ್ಟಿನ ಪ್ರದರ್ಶನ ನೀಡಬೇಕೆಂದು ಅವರು ತಿಳಿಸಿದರು.