ನವದೆಹಲಿ: ಭಾರತದ ಸ್ಟಾರ್ ಕ್ರಿಕೆಟಿಗ ಮತ್ತು ವಿಶ್ವದ ನಂ. 2 ಏಕದಿನ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಅವರು ಬುಧವಾರ (ಫೆಬ್ರವರಿ 26) ದೆಹಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ತಮ್ಮ ಕಳವಳವನ್ನು ಹಂಚಿಕೊಂಡಿದ್ದಾರೆ. 'ದೆಹಲಿಯಲ್ಲಿನ ಸ್ಥಿತಿ ಸರಿಯಿಲ್ಲ, ಶೀಘ್ರದಲ್ಲೇ ಎಲ್ಲವೂ ತಟಸ್ಥಗೊಳ್ಳುತ್ತದೆ ಎಂದು ಭಾವಿಸುತ್ತೇನೆ' ಎಂದು ಭಾರತೀಯ ಆರಂಭಿಕ ಆಟಗಾರ ಟ್ವೀಟ್ ಮಾಡಿದ್ದಾರೆ.
Not such a great sight in Delhi. Hope everything neutralises soon.
— Rohit Sharma (@ImRo45) February 26, 2020
ದೆಹಲಿಯಲ್ಲಿ ಭಾನುವಾರ (ಫೆಬ್ರವರಿ 23) ಪರ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನಾಕಾರರ ನಡುವಿನ ಘರ್ಷಣೆಗಳು ಭುಗಿಲೆದ್ದವು ಮತ್ತು ಮಂಗಳವಾರದ ವರೆಗೆ ಹಿಂಸಾಚಾರ ಹಾಗೆಯೇ ಮುಂದುವರೆಯಿತು.ಈ ಹಿಂಸಾಚಾರದಲ್ಲಿ ಸುಮಾರು 34 ಜನರು ಸಾವನ್ನಪ್ಪಿ 200ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.ಈಶಾನ್ಯ ದೆಹಲಿಯ ಹಲವಾರು ಭಾಗಗಳಲ್ಲಿ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ ಮತ್ತು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಭದ್ರತಾ ಪಡೆಗಳು ಈಗ ಗಲಭೆ ಪೀಡಿತ ಪ್ರದೇಶಗಳಲ್ಲಿ ನಿಗಾವಹಿಸಿವೆ.
ಏತನ್ಮಧ್ಯೆ, ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಈಶಾನ್ಯ ದೆಹಲಿಯ ಹಲವಾರು ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಅವರು ತಮ್ಮ ಭೇಟಿಯ ಸಮಯದಲ್ಲಿ ಸ್ಥಳೀಯರನ್ನು ಭೇಟಿಯಾದರು ಮತ್ತು ಕಾನೂನು ಜಾರಿ ಸಂಸ್ಥೆಗಳಲ್ಲಿ ವಿಶ್ವಾಸ ಹೊಂದಬೇಕೆಂದು ಜನರಿಗೆ ಮನವಿ ಮಾಡಿದರು ಮತ್ತು ಪೊಲೀಸರು ಹೆಚ್ಚಿನ ಜಾಗರೂಕರಾಗಿದ್ದಾರೆ ಮತ್ತು ಅವರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.