ಬರೋಬ್ಬರಿ 116 ಮೀಟರ್… ಸ್ಟೇಡಿಯಂ ದಾಟಿ ರಸ್ತೆಗೆ ಬಿತ್ತು ಈ ಆಟಗಾರ ಬಾರಿಸಿದ ಸಿಕ್ಸರ್!

Rovman Powell: ಕೆಲವೊಮ್ಮೆ ಬೌಲರ್‌ಗಳು ಪ್ರಾಬಲ್ಯ ಸಾಧಿಸುತ್ತಾರೆ ಆದರೆ ಹೆಚ್ಚಾಗಿ ದೊಡ್ಡ ಸ್ಕೋರ್‌ಗಳು ದಾಖಲಾಗುತ್ತವೆ. ಇತ್ತೀಚೆಗೆ, ಈ ಕ್ರಿಕೆಟ್ ಲೀಗ್‌ನಲ್ಲಿ ಪೇಶಾವರ್ ಝಲ್ಮಿಯನ್ನು ಪ್ರತಿನಿಧಿಸುತ್ತಿರುವ ವೆಸ್ಟ್ ಇಂಡೀಸ್ ಟಿ20 ನಾಯಕ ರೋವ್‌ಮನ್ ಪೊವೆಲ್ ಬಾನೆತ್ತರಕ್ಕೆ ಬ್ಯಾಟ್ ಬೀಸಿದ್ದಾರೆ.

Written by - Bhavishya Shetty | Last Updated : Mar 10, 2023, 05:40 PM IST
    • ಹೆಸರಾಂತ ಬ್ಯಾಟ್ಸ್‌ಮನ್‌ಗಳು ಮಿಂಚಿನ ಇನ್ನಿಂಗ್ಸ್‌ಗಳನ್ನು ಆಡುತ್ತಾರೆ
    • ಪಂದ್ಯದ ಫಲಿತಾಂಶವನ್ನು ಸೆಕೆಂಡುಗಳಲ್ಲಿ ಬದಲಾಯಿಸುತ್ತಾರೆ.
    • ಪ್ರಸ್ತುತ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಿಎಸ್‌ಎಲ್‌’ನಲ್ಲೂ ಅದೇ ಆಗುತ್ತಿದೆ.
ಬರೋಬ್ಬರಿ 116 ಮೀಟರ್… ಸ್ಟೇಡಿಯಂ ದಾಟಿ ರಸ್ತೆಗೆ ಬಿತ್ತು ಈ ಆಟಗಾರ ಬಾರಿಸಿದ ಸಿಕ್ಸರ್! title=
Rovman Powell

Rovman Powell: ಟಿ20 ಕ್ರಿಕೆಟ್’ನಲ್ಲಿ ಬೌಂಡರಿಗಳದ್ದೇ ಕಾರುಬಾರು. ಬೌಲರ್‌ಗಳು ಎಷ್ಟೇ ಬೌಲಿಂಗ್ ಮಾಡಿದರೂ ಇಲ್ಲಿ ಬ್ಯಾಟ್ಸ್‌ಮನ್‌ಗಳೇ ಮೇಲುಗೈ ಸಾಧಿಸುತ್ತಾರೆ. ಹೆಸರಾಂತ ಬ್ಯಾಟ್ಸ್‌ಮನ್‌ಗಳು ಮಿಂಚಿನ ಇನ್ನಿಂಗ್ಸ್‌ಗಳನ್ನು ಆಡುತ್ತಾರೆ ಮತ್ತು ಪಂದ್ಯದ ಫಲಿತಾಂಶವನ್ನು ಸೆಕೆಂಡುಗಳಲ್ಲಿ ಬದಲಾಯಿಸುತ್ತಾರೆ. ಪ್ರಸ್ತುತ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಿಎಸ್‌ಎಲ್‌’ನಲ್ಲೂ ಅದೇ ಆಗುತ್ತಿದೆ.

ಇದನ್ನೂ ಓದಿ: No.1 T20 Cricket Premier League: ವಿಶ್ವದ ನಂಬರ್.1 ಟಿ-20 ಕ್ರಿಕೆಟ್ ಪ್ರೀಮಿಯರ್ ಲೀಗ್ ಯಾವುದು ಗೊತ್ತಾ? ಗೆಸ್ ಮಾಡಿ ನೋಡೋಣ

ಕೆಲವೊಮ್ಮೆ ಬೌಲರ್‌ಗಳು ಪ್ರಾಬಲ್ಯ ಸಾಧಿಸುತ್ತಾರೆ ಆದರೆ ಹೆಚ್ಚಾಗಿ ದೊಡ್ಡ ಸ್ಕೋರ್‌ಗಳು ದಾಖಲಾಗುತ್ತವೆ. ಇತ್ತೀಚೆಗೆ, ಈ ಕ್ರಿಕೆಟ್ ಲೀಗ್‌ನಲ್ಲಿ ಪೇಶಾವರ್ ಝಲ್ಮಿಯನ್ನು ಪ್ರತಿನಿಧಿಸುತ್ತಿರುವ ವೆಸ್ಟ್ ಇಂಡೀಸ್ ಟಿ20 ನಾಯಕ ರೋವ್‌ಮನ್ ಪೊವೆಲ್ ಬಾನೆತ್ತರಕ್ಕೆ ಬ್ಯಾಟ್ ಬೀಸಿದ್ದಾರೆ.

ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧದ ಪಂದ್ಯದಲ್ಲಿ, ಪೊವೆಲ್ ಕೇವಲ 18 ಎಸೆತಗಳಲ್ಲಿ 35 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್‌ಗಳಿದ್ದವು. ಈ ಪಂದ್ಯದಲ್ಲಿ ಪೊವೆಲ್ ಹೊಡೆದ ಚೆಂಡು ಹೈಲೈಟ್ ಆಯಿತು. ಮೊಹಮ್ಮದ್ ನವಾಜ್ 15 ಓವರ್‌ಗಳ ಮೊದಲ ಎಸೆತವನ್ನು ಎಸೆದಾಗ ಅದರಲ್ಲಿ 116 ಮೀಟರ್‌ಗಳ ಬೃಹತ್ ಸಿಕ್ಸರ್’ನ್ನು ಪೊವೆಲ್ ಬಾರಿಸಿದರು. ಪೊವೆಲ್ ಹೊಡೆದ ಚೆಂಡು ಕ್ರೀಡಾಂಗಣದಿಂದ ಹೊರಗೆ ಹೋಗಿ ಬಿದ್ದಿತು. ನವಾಜ್ ಗೆ ಸ್ವಲ್ಪ ಹೊತ್ತು ಏನು ಮಾಡಬೇಕೆಂದು ಅರ್ಥವಾಗಲಿಲ್ಲ. ಆದರೆ ಪೊವೆಲ್ ಬಾರಿಸಿದ ಸಿಕ್ಸರ್ ಪಾಕಿಸ್ತಾನ ಸೂಪರ್ ಲೀಗ್‌ ಇತಿಹಾಸದಲ್ಲಿ ಅತಿದೊಡ್ಡ ಸಿಕ್ಸರ್‌ಗಳಲ್ಲಿ ಒಂದಾಗಿದೆ.

Rovman Powell, what a shot 👏 #HBLPSL8 pic.twitter.com/hrJaON9hLL
— Farid Khan (@_FaridKhan) March 8, 2023

 

ಇದನ್ನೂ ಓದಿ: ಟೆಸ್ಟ್ ಪಂದ್ಯದ ಮಧ್ಯೆ ಪತ್ನಿ ಜೊತೆ ಭರ್ಜರಿಯಾಗಿ ಹೋಳಿ ಆಡಿದ ಟೀಂ ಇಂಡಿಯಾದ ಈ ಸ್ಟಾರ್ ಬೌಲರ್: ಫೋಟೋ ನೋಡಿ

ಈ ಸಂಬಂಧ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಪಂದ್ಯದ ವಿಷಯಕ್ಕೆ ಬಂದರೆ ಈ ಪಂದ್ಯದಲ್ಲಿ ಪೇಶಾವರ 8 ವಿಕೆಟ್‌ಗಳಿಂದ ಸೋಲು ಕಂಡಿತ್ತು. 241 ರನ್‌ಗಳ ಬೃಹತ್ ಗುರಿಯೊಂದಿಗೆ ಕ್ವೆಟ್ಟಾ ಗ್ಲಾಡಿಯೇಟರ್ಸ್ ಕೇವಲ ಎರಡು ವಿಕೆಟ್ ಕಳೆದುಕೊಂಡು ಕಣಕ್ಕೆ ಇಳಿದಿತ್ತು. ಕ್ವೆಟ್ಟಾ ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್ 63 ಎಸೆತಗಳಲ್ಲಿ 145 ರನ್‌ಗಳ ಸುನಾಮಿ ಶತಕ ಗಳಿಸಿ ಪಂದ್ಯವನ್ನು ಗೆಲ್ಲಿಸಿದರು. ಇದೇ ಪಂದ್ಯದಲ್ಲಿ ಪೇಶಾವರ ಝಲ್ಮಿ ನಾಯಕ ಬಾಬರ್ ಅಜಮ್ ಕೂಡ ಸೂಪರ್ ಶತಕ ಬಾರಿಸಿದ್ದರು. 65 ಎಸೆತಗಳನ್ನು ಎದುರಿಸಿದ ಬಾಬರ್ 15 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 115 ರನ್ ಗಳಿಸಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News