ಇವರೇ ನೋಡಿ ಕ್ರಿಕೆಟ್ ಇತಿಹಾಸದ ಅತಿ ವೇಗದ ಬೌಲರ್! ಗಂಟೆಗೆ 161.3 ಕಿಮೀ ವೇಗದಲ್ಲಿ ಬೌಲಿಂಗ್ ಮಾಡ್ತಾನೆ ಈ ಡೇಂಜರಸ್ ಕ್ರಿಕೆಟಿಗ

Fastest bowler in cricket history: ಕ್ರಿಕೆಟ್‌’ನಲ್ಲಿ ಅನೇಕ ಬೌಲರ್’ಗಳನ್ನು ಕಂಡಿರಬಹುದು. ಒಬ್ಬರಿಂದ ಒಬ್ಬರು ಚಮತ್ಕಾರಿ ಎಸೆತಗಳನ್ನು ಎಸೆಯುವವರೇ… ಆದರೆ ಅಂತಹ ಬೌಲರ್’ಗಳಲ್ಲಿ ಅತಿ ವೇಗದ ಬೌಲರ್ ಯಾರೆಂಬುದು ನಿಮಗೆ ತಿಳಿದಿದೆಯೇ? ಈ ವರದಿಯಲ್ಲಿ ಆ ಬಗ್ಗೆ ತಿಳಿಯೋಣ.

Written by - Bhavishya Shetty | Last Updated : Jul 13, 2024, 06:16 PM IST
    • ಅತಿ ವೇಗದ ಬೌಲರ್ ಯಾರೆಂಬುದು ನಿಮಗೆ ತಿಳಿದಿದೆಯೇ?
    • ರಾವಲ್ಪಿಂಡಿ ಎಕ್ಸ್‌ಪ್ರೆಸ್ ಎಂದು ಕರೆಯಲ್ಪಡುವ ಶೋಯೆಬ್ ಅಖ್ತರ್
    • ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲರ್ ಆಗಿರುವುದು ಅಖ್ತರ್
ಇವರೇ ನೋಡಿ ಕ್ರಿಕೆಟ್ ಇತಿಹಾಸದ ಅತಿ ವೇಗದ ಬೌಲರ್! ಗಂಟೆಗೆ 161.3 ಕಿಮೀ ವೇಗದಲ್ಲಿ ಬೌಲಿಂಗ್ ಮಾಡ್ತಾನೆ ಈ ಡೇಂಜರಸ್ ಕ್ರಿಕೆಟಿಗ title=
Fastest Bowler in Cricket History

Fastest bowler in cricket history: ಕ್ರಿಕೆಟ್‌’ನಲ್ಲಿ ಅನೇಕ ಬೌಲರ್’ಗಳನ್ನು ಕಂಡಿರಬಹುದು. ಒಬ್ಬರಿಂದ ಒಬ್ಬರು ಚಮತ್ಕಾರಿ ಎಸೆತಗಳನ್ನು ಎಸೆಯುವವರೇ… ಆದರೆ ಅಂತಹ ಬೌಲರ್’ಗಳಲ್ಲಿ ಅತಿ ವೇಗದ ಬೌಲರ್ ಯಾರೆಂಬುದು ನಿಮಗೆ ತಿಳಿದಿದೆಯೇ? ಈ ವರದಿಯಲ್ಲಿ ಆ ಬಗ್ಗೆ ತಿಳಿಯೋಣ.

ರಾವಲ್ಪಿಂಡಿ ಎಕ್ಸ್‌ಪ್ರೆಸ್ ಎಂದು ಕರೆಯಲ್ಪಡುವ ಶೋಯೆಬ್ ಅಖ್ತರ್ ಹೆಸರು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲರ್ ಆಗಿರುವುದು ಅಖ್ತರ್. 2003 ರ ವಿಶ್ವಕಪ್‌’ನಲ್ಲಿ ಇಂಗ್ಲೆಂಡ್ ವಿರುದ್ಧ ಅಖ್ತರ್ ತಮ್ಮ ವೃತ್ತಿಜೀವನದ ಅತ್ಯಂತ ವೇಗದ ಚೆಂಡನ್ನು ಬೌಲ್ ಮಾಡಿದರು. ಗಂಟೆಗೆ 161.3 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು.

ಇದನ್ನೂ ಓದಿ: ಕ್ರಿಕೆಟ್ ಜಗತ್ತಿನ ಈ 6 ವಿಶ್ವ ದಾಖಲೆಗಳನ್ನು ಇದುವರೆಗೆ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವೇ ಆಗಿಲ್ಲ

ವೇಗದ ಬೌಲರ್ ಎಂದು ಕರೆಯಲ್ಪಡುವ ಬ್ರೆಟ್ ಲೀ ಅವರ ಹೆಸರು ಈ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದೆ. ವೇಗದ ಬೌಲರ್ ಆಗಿ ಬ್ರೆಟ್ ಲೀ ಅವರ ವೃತ್ತಿಜೀವನವು ಉತ್ತಮ ಮತ್ತು ಅದ್ಭುತವಾಗಿತ್ತು. 2005 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಬ್ರಿಸ್ಬೇನ್‌’ನಲ್ಲಿ ಲೀ ತಮ್ಮ ವೃತ್ತಿಜೀವನದ ಅತ್ಯಂತ ವೇಗದ ಚೆಂಡನ್ನು ಬೌಲ್ ಮಾಡಿದರು. ಇವರ ವೇಗ ಗಂಟೆಗೆ 161.1 ಕಿ.ಮೀ.

ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಶಾನ್ ಟೈಟ್ ಹೆಸರು 3 ನೇ ಸ್ಥಾನದಲ್ಲಿದೆ. ಸೀಮಿತ ಓವರ್‌ಗಳ ಮಾದರಿಯಲ್ಲಿ ಅದ್ಭುತ ಬೌಲರ್ ಆಗಿದ್ದರು. ಟೈಟ್ ಇಂಗ್ಲೆಂಡ್ ವಿರುದ್ಧ ತಮ್ಮ ವೃತ್ತಿಜೀವನದ ಅತ್ಯಂತ ವೇಗದ ಚೆಂಡನ್ನು ಬೌಲ್ ಮಾಡಿದ್ದು,,ಇದು ಗಂಟೆಗೆ 161.1 ಕಿ.ಮೀ.  ವೇಗವಾಗಿತ್ತು.

ಈ ಪಟ್ಟಿಯಲ್ಲಿ ಆಸ್ಟ್ರೇಲಿಯದ ದಿಗ್ಗಜ ವೇಗದ ಬೌಲರ್ ಜೆಫ್ ಥಾಮ್ಸನ್ ಹೆಸರು 4ನೇ ಸ್ಥಾನದಲ್ಲಿದೆ. ಥಾಮ್ಸನ್ 1975 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪರ್ತ್‌’ನಲ್ಲಿ ಗಂಟೆಗೆ 160.6 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು.

ಇದನ್ನೂ ಓದಿ:  ಅಂಬಾನಿ ಮಗನ ಮದುವೆಯ ಫೋಟೋಗ್ರಾಫರ್ ಯಾರು ಗೊತ್ತಾ? ವಿರಾಟ್ ವಿವಾಹದ ಫೋಟೋ ತೆಗೆದಿದ್ದು ಕೂಡ ಇವರೇ

ಸದ್ಯ ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಹೆಸರು ಸೇರಿದೆ.  ಮಿಚೆಲ್ ಸ್ಟಾರ್ಕ್ 2015 ರಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ವೃತ್ತಿಜೀವನದ ಅತ್ಯಂತ ವೇಗದ ಎಸೆತವನ್ನು ಬೌಲ್ ಮಾಡಿದ್ದರು. ಗಂಟೆಗೆ 160.4 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News