ಇಸ್ಲಾಮಾಬಾದ್: ಟಿ20 ವಿಶ್ವಕಪ್ನ ಸೆಮಿಫೈನಲ್ ಸೋಲಿನ ನಂತರ ಪಾಕಿಸ್ತಾನ ತಂಡವು ಭಾರೀ ಟ್ರೊಲ್ ಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಟಗಾರರ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ಇಮ್ರಾನ್ ಖಾನ್ ತಂಡದ ರಕ್ಷಣೆಗೆ ಮುಂದಾಗಿದ್ದಾರೆ. ಸೋಲು ಗೆಲುವು ಆಟದ ಭಾಗ ಎಂದು ಬಣ್ಣಿಸಿರುವ ಅವರು ಆಟಗಾರರ ಪ್ರದರ್ಶನ ತೃಪ್ತಿ ತಂದಿದೆ ಎಂದು ಅವರು ಹೇಳಿದ್ದಾರೆ. ಆದರೆ, ಈ ಸೋಲಿಗೆ ಇಮ್ರಾನ್ ಅವರ ‘ಹಠವೇ’ ಕಾರಣ ಎಂದು ಇಮ್ರಾನ್ ಖಾನ್ ಮಾಜಿ ಪತ್ನಿ ಹೇಳಿರುವುದು ಬೇರೆ ವಿಚಾರ.
ತಂಡದ ರಕ್ಷಣೆಗೆ ಮುಂದಾದ ಇಮ್ರಾನ್ ಖಾನ್
ಇಮ್ರಾನ್ ಹಠಕ್ಕೂ ಮುನ್ನ ಆಟಗಾರರರ ರಕ್ಷಣೆಗೆ ಮುಂದಾದ ಇಮ್ರಾನ್ ಖಾನ್ (Imran Khan) ಹೇಳಿದ್ದೆಂದು ತಿಳಿಯೋಣ ಬನ್ನಿ. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡ ಇಮ್ರಾನ್ 'ಬಾಬರ್ ಆಜಂ ಮತ್ತು ಅವರ ತಂಡಕ್ಕೆ (Pakistan Cricket Team) .... ಕ್ರಿಕೆಟ್ ಮೈದಾನದಲ್ಲಿ ನಾನೂ ಕೂಡ ಇಂತಹ ನಿರಾಶೆಯನ್ನು ಎದುರಿಸಿರುವ ಕಾರಣ ನೀವೆಲ್ಲರೂ ಹೇಗಿರುವಿರಿ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಆದರೆ, ನೀವು ಕ್ರಿಕೆಟ್ ಆಡಿದ ರೀತಿ ಹಾಗೂ ನಿಮ್ಮ ವಿಜಯಗಳಲ್ಲಿ ಕಂಡು ಬಂದ ನಮ್ರತೆಗೆ ನಿಜಕ್ಕೂ ಹೆಮ್ಮೆಪಡಬೇಕು. ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆಗಳು' ಎಂದು ಹೇಳಿದ್ದರು.
To Babar Azam & the team: I know exactly how all of you are feeling right now bec I have faced similar disappointments on the cricket field. But you shd all be proud of the quality of cricket you played & the humility you showed in your wins. Congratulations Team Australia.
— Imran Khan (@ImranKhanPTI) November 11, 2021
خان صاحب آپکو کہا بھی تھا کہ فائنل دیکھنے کی ضِد نہ کریں
— Reham Khan (@RehamKhan1) November 11, 2021
ಇದನ್ನೂ ಓದಿ-NZ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ, ವಿರಾಟ್ ಕೊಹ್ಲಿ ಬದಲು ಈ ಆಟಗಾರ ವಹಿಸಲಿದ್ದಾರೆ ತಂಡದ ಸಾರಥ್ಯ
ಈ ಕಾರಣಕ್ಕೆ ಟಾಂಗ್ ನೀಡಿದ Reham
ಪಾಕಿಸ್ತಾನದ ಸೋಲಿನ ನಂತರ, ಪ್ರತಿಕ್ರಿಯೆ ನೀಡಿರುವ ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಮ್ ಖಾನ್ ಇಮ್ರಾನ್ ಕಾಲೆಳೆದಿದ್ದರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರೆಹಮ್ ಖಾನ್ (Reham Khan) 'ಫೈನಲ್ ಪಂದ್ಯವನ್ನು ವಿಕ್ಷೀಸುವ ಹಠ ಹಿಡಿಯಬೇಡಿ ಖಾನ್ ಸಾಹಿಬ್ ಎಂದು ನಿಮಗೆ ಹೇಳಲಾಗಿತ್ತು' ಎಂದಿದ್ದಾರೆ. ವಾಸ್ತವವಾಗಿ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸೆಮಿಫೈನಲ್ ಪಂದ್ಯದ ಮೊದಲು ತಮ್ಮ ತಂಡವು ಒಂದು ವೇಳೆ ಫೈನಲ್ ತಲುಪಿದರೆ, ಅಂತಿಮ ಪಂದ್ಯವನ್ನು ವೀಕ್ಷಿಸಲು ಯುಎಇಗೆ ಹೋಗುವುದಾಗಿ ಹೇಳಿದ್ದರು. ಒಂದು ರೀತಿಯಲ್ಲಿ ಇಮ್ರಾನ್ ಈ ಹಠದಿಂದಲೇ ಪಾಕಿಸ್ತಾನ ಪಂದ್ಯ ಸೋತಿದೆ ಎಂದು ರೆಹಮ್ ಹೇಳಲು ಯತ್ನಿಸಿದ್ದಾರೆ.
ಇದನ್ನೂ ಓದಿ-T20 World Cup: ಪಾಕಿಸ್ತಾನದ ಕನಸು ಭಗ್ನ, ಫೈನಲ್ನಲ್ಲಿ ಸೆಣಸಲಿರುವ ಆಸ್ಟ್ರೇಲಿಯಾ-ನ್ಯೂಜಿಲೆಂಡ್
ಉತ್ತಮ ಆಟ ಪ್ರದರ್ಶನದ ಬಳಿಕವೂ ಪ್ರಮುಖ ಪಂದ್ಯದಲ್ಲಿ ಸೋಲು
ರೆಹಮ್ ಖಾನ್ ಓರ್ವ ಬ್ರಿಟಿಷ್-ಪಾಕಿಸ್ತಾನಿ ಪತ್ರಕರ್ತೆಯಾಗಿದ್ದಾರೆ. . ಇಮ್ರಾನ್ ಖಾನ್ ಮತ್ತು ರೆಹಮ್ ಖಾನ್ 2014 ಮತ್ತು 2015 ರ ನಡುವೆ ಪತಿ-ಪತ್ನಿಯಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಇಬ್ಬರೂ ವಿಚ್ಛೇದನವನ್ನು ಘೋಷಿಸಿದ್ದರು. ಕ್ರಿಕೆಟ್ ಬಗ್ಗೆ ಮಾತನಾಡುವುದಾದರೆ ಪಾಕಿಸ್ತಾನವು ಟಿ 20 ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಆದರೆ ಸೆಮಿಫೈನಲ್ನಲ್ಲಿ ಸೋಲನ್ನು ಅನುಭವಿಸಿದೆ. ಪಾಕಿಸ್ತಾನವು ಆಸ್ಟ್ರೇಲಿಯಾಕ್ಕೆ 177 ರನ್ಗಳ ಗುರಿಯನ್ನು ನೀಡಿತ್ತು, ಅದನ್ನು ಆಸ್ಟ್ರೇಲಿಯಾ ಇನ್ನೂ ಒಂದು ಓವರ್ ಬಾಕಿ ಇರುವಾಗಲೇ ಪೂರ್ಣಗೊಳಿಸಿದೆ.
ಇದನ್ನೂ ಓದಿ-ICC T20 World Cup 2021: ಅಬ್ಬರಿಸಿದ ಮ್ಯಾಥ್ಯೂ ವಾಡೆ, ಫೈನಲ್ ಗೆ ಲಗ್ಗೆ ಇಟ್ಟ ಆಸೀಸ್ ಪಡೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ