New Captain: ಟಿ-20 ತಂಡ ಪ್ರಕಟ: ಈ ಡ್ಯಾಶಿಂಗ್ ಆಲ್ ರೌಂಡರ್’ಗೆ ನಾಯಕತ್ವ ಪಟ್ಟ

Pakistan Squad Announced For T20 Series: ಮಾರ್ಚ್ 24ರಂದು ಶಾರ್ಜಾದಲ್ಲಿ ಆರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ 20 ಅಂತಾರಾಷ್ಟ್ರೀಯ ಸರಣಿಯಿಂದ ನಾಯಕ ಬಾಬರ್ ಅಜಮ್ ಮತ್ತು ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಸೇರಿದಂತೆ ಹಿರಿಯ ಕ್ರಿಕೆಟಿಗರಿಗೆ ಪಾಕಿಸ್ತಾನ ವಿಶ್ರಾಂತಿ ನೀಡಿದೆ.

Written by - Bhavishya Shetty | Last Updated : Mar 13, 2023, 06:12 PM IST
    • ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿದೆ.
    • ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ.
    • ಈ ಸರಣಿಯಲ್ಲಿ ಬಾಬರ್ ಅಜಮ್ ಬದಲಿಗೆ ಆಲ್ ರೌಂಡರ್’ಗೆ ತಂಡದ ನಾಯಕತ್ವ ವಹಿಸಲಾಗಿದೆ
New Captain: ಟಿ-20 ತಂಡ ಪ್ರಕಟ: ಈ ಡ್ಯಾಶಿಂಗ್ ಆಲ್ ರೌಂಡರ್’ಗೆ ನಾಯಕತ್ವ ಪಟ್ಟ title=
Pakistan T20 Captaincy

Pakistan Squad Announced For T20 Series: ಪಾಕಿಸ್ತಾನ ಸೂಪರ್ ಲೀಗ್ (PSL 2023) ಪ್ರಸ್ತುತ ಪಾಕಿಸ್ತಾನದಲ್ಲಿ ನಡೆಯುತ್ತಿದೆ. ಈ ಲೀಗ್ ಮುಗಿದ ತಕ್ಷಣ ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿದೆ. ಮೂರು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಗೆ ಪಾಕಿಸ್ತಾನ ತಂಡವನ್ನು ಪ್ರಕಟಿಸಲಾಗಿದೆ. ಈ ಸರಣಿಯಲ್ಲಿ ಬಾಬರ್ ಅಜಮ್ ಬದಲಿಗೆ ಆಲ್ ರೌಂಡರ್’ಗೆ ತಂಡದ ನಾಯಕತ್ವ ವಹಿಸಲಾಗಿದೆ.

ಇದನ್ನೂ ಓದಿ: IND vs AUS: ಏಕದಿನ ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಆಡುವುದೇ ಡೌಟ್… ಹಾಗಾದ್ರೆ ಈ ಆಟಗಾರನಿಗೆ ಮತ್ತೆ ಸಿಗುತ್ತಾ ಚ್ಯಾನ್ಸ್!

ಮಾರ್ಚ್ 24ರಂದು ಶಾರ್ಜಾದಲ್ಲಿ ಆರಂಭವಾಗಲಿರುವ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ 20 ಅಂತಾರಾಷ್ಟ್ರೀಯ ಸರಣಿಯಿಂದ ನಾಯಕ ಬಾಬರ್ ಅಜಮ್ ಮತ್ತು ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಸೇರಿದಂತೆ ಹಿರಿಯ ಕ್ರಿಕೆಟಿಗರಿಗೆ ಪಾಕಿಸ್ತಾನ ವಿಶ್ರಾಂತಿ ನೀಡಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ರಾಷ್ಟ್ರೀಯ ಆಯ್ಕೆ ಸಮಿತಿಯು ಈ ಸರಣಿಗೆ ಆಲ್‌ರೌಂಡರ್ ಶಾದಾಬ್ ಖಾನ್ ಅವರನ್ನು ತಂಡದ ನಾಯಕರನ್ನಾಗಿ ನೇಮಿಸಿದೆ. ಶದಾಬ್ ಖಾನ್ ನೇತೃತ್ವದ ತಂಡದಲ್ಲಿ ಆರಂಭಿಕರಾದ ಮುಹಮ್ಮದ್ ರಿಜ್ವಾನ್, ಹ್ಯಾರಿಸ್ ರೌಫ್ ಮತ್ತು ಅನುಭವಿ ಬ್ಯಾಟ್ಸ್‌ಮನ್ ಫಖರ್ ಜಮಾನ್ ಕೂಡ ಸ್ಥಾನ ಪಡೆದಿಲ್ಲ.

ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ನಜಮ್ ಸೇಥಿ ಮಾತನಾಡಿ, ಬಾಬರ್ ಅವರು ಪಾಕಿಸ್ತಾನ ತಂಡದ ನಾಯಕರಾಗಿ ಮುಂದುವರಿಯುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ನಾಲ್ವರು ಹೊಸ ಮುಖಗಳ ವೇಗದ ಬೌಲರ್ ಇಹ್ಸಾನುಲ್ಲಾ, ಜಮಾನ್ ಖಾನ್, ಬ್ಯಾಟ್ಸ್‌ಮನ್ ತಯ್ಯಬ್ ತಾಹಿರ್ ಮತ್ತು ಸೈಮ್ ಅಯೂಬ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇದಲ್ಲದೆ ಅಜಮ್ ಖಾನ್, ಫಹೀಮ್ ಅಶ್ರಫ್ ಮತ್ತು ಇಮಾದ್ ವಾಸಿಂ ತಂಡದಲ್ಲಿ ಪುನರಾಗಮನ ಮಾಡಿದ್ದಾರೆ.

ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯ ಮಾರ್ಚ್ 25 ರಂದು ನಡೆಯಲಿದ್ದು, ಎರಡನೇ ಪಂದ್ಯ ಮಾರ್ಚ್ 27 ರಂದು ನಡೆಯಲಿದೆ. ಸರಣಿಯ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯ ಮಾರ್ಚ್ 29 ರಂದು ನಡೆಯಲಿದೆ. ಎಲ್ಲಾ ಮೂರು ಪಂದ್ಯಗಳು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ.

ಟಿ20 ಸರಣಿಗೆ ಪಾಕಿಸ್ತಾನ ತಂಡ:

ಶಾದಾಬ್ ಖಾನ್ (ನಾಯಕ), ಅಬ್ದುಲ್ಲಾ ಶಫೀಕ್, ಅಜಮ್ ಖಾನ್, ಫಹೀಮ್ ಅಶ್ರಫ್, ಇಫ್ತಿಕರ್ ಅಹ್ಮದ್, ಇಹ್ಸಾನುಲ್ಲಾ, ಇಮಾದ್ ವಾಸಿಮ್, ಮುಹಮ್ಮದ್ ಹಾರಿಸ್, ಮುಹಮ್ಮದ್ ನವಾಜ್, ಮುಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಸೈಮ್ ಅಯೂಬ್, ಶಾನ್ ಮಸೂದ್, ತಯ್ಯಬ್ ತಾಹಿರ್, ಜಮಾನ್ ಖಾನ್.

ಇದನ್ನೂ ಓದಿ: Border-Gavaskar Trophy 2023: ಬಾರ್ಡರ್-ಗವಾಸ್ಕರ್ ಟ್ರೋಫಿ ಎತ್ತಿಹಿಡಿದ ಟೀಂ ಇಂಡಿಯಾ: WTC ಫೈನಲ್’ಗೆ ಗ್ರ್ಯಾಂಡ್ ಎಂಟ್ರಿ

ಮೀಸಲು ಆಟಗಾರರು: ಅಬ್ರಾರ್ ಅಹ್ಮದ್, ಹಸಿಬುಲ್ಲಾ ಖಾನ್ ಮತ್ತು ಒಸಾಮಾ ಮಿರ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News