ಮಿಂಚಿನ ವೇಗ.. ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಬಾಲ್ ಬೌಲ್ ಮಾಡಿದ ಟೀಂ ಇಂಡಿಯಾ ಸ್ಟಾರ್‌ ಆಟಗಾರ! ಶೋಯೆಬ್ ಅಖ್ತರ್ ದಾಖಲೆ ಬ್ರೇಕ್!?

IND vs AUS: ಅಡಿಲೇಡ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಎಲ್ಲರಿಗೂ ಆಶ್ಚರ್ಯವಾಗುವ ದೃಶ್ಯ ಕಂಡುಬಂದಿದೆ. ಮೊಹಮ್ಮದ್ ಸಿರಾಜ್ ಸ್ಪೀಡ್ ಗನ್‌ನಲ್ಲಿ ದೋಷ ಕಾಣಿಸಿಕೊಂಡ ನಂತರ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲರ್ ಎನಿಸಿಕೊಂಡಿದ್ದಾರೆ..   

Written by - Savita M B | Last Updated : Dec 7, 2024, 10:26 AM IST
  • ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 6 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿದೆ
  • ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡ 295 ರನ್‌ಗಳ ಜಯ ಸಾಧಿಸಿತ್ತು.
ಮಿಂಚಿನ ವೇಗ.. ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವೇಗದ ಬಾಲ್ ಬೌಲ್ ಮಾಡಿದ ಟೀಂ ಇಂಡಿಯಾ ಸ್ಟಾರ್‌ ಆಟಗಾರ! ಶೋಯೆಬ್ ಅಖ್ತರ್ ದಾಖಲೆ ಬ್ರೇಕ್!? title=

IND vs AUS Mohammed Siraj: ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 6 ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿದೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡ 295 ರನ್‌ಗಳ ಜಯ ಸಾಧಿಸಿತ್ತು. ಈಗ ಅಡಿಲೇಡ್ ಓವಲ್‌ನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಎಡವಿತು. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಮೌನವಾಗಿದ್ದರೆ, ಆಸ್ಟ್ರೇಲಿಯಾದ ಬೌಲರ್ ಮಿಚೆಲ್ ಸ್ಟಾರ್ಕ್ ವಿಧ್ವಂಸಕರಾದರು. ಬೌಲಿಂಗ್ ಆರಂಭಿಸಿರುವ ಭಾರತ, ವಿಕೆಟ್ ಗಳ ಆಸೆಗೆ ಸಿಲುಕಿತು.. ಬಳಿಕ ಮೊಹಮ್ಮದ್ ಸಿರಾಜ್ ತಮ್ಮ ಎಸೆತಗಳಿಂದ ಆಸೀಸ್ ಬೌಲರ್ ಗಳಿಗೆ ನೀರಿಳಿಸಿದ್ದಾರೆ.. ಈ ಪೈಕಿ ಒಂದು ಚೆಂಡು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.. 

ಅಡಿಲೇಡ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಬೌಲರ್‌ಗಳು ವಿಕೆಟ್‌ಗಾಗಿ ಪರದಾಡುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ಏಕೈಕ ವಿಕೆಟ್ ಪಡೆದರು. ಹರ್ಷಿತ್ ರಾಣಾ ಮತ್ತು ಮೊಹಮ್ಮದ್ ಸಿರಾಜ್ ಅವರಿಗೆ ವಿಕೆಟ್‌ ಕಬಳಿಸಲಾಗಲಿಲ್ಲ.. ಆದರೆ, ಸಿರಾಜ್ ತಮ್ಮ ಚೆಂಡಿನ ಮೂಲಕ ಎಲ್ಲ ಮೈ ಜುಮ್ಮೆನ್ನುವಂತೆ ಮಾಡಿದ್ದಾರೆ... ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ಸಿರಾಜ್ ಗಂಟೆಗೆ 181.6 ಕಿಲೋಮೀಟರ್ ವೇಗದಲ್ಲಿ ಚೆಂಡನ್ನು ಬೌಲಿಂಗ್ ಮಾಡುವುದನ್ನು ಕಾಣಬಹುದು. ಈ ಘಟನೆಯು ಸಿರಾಜ್ ಅವರ 10 ನೇ ಓವರ್‌ನಲ್ಲಿ ಅಂದರೆ ಆಸ್ಟ್ರೇಲಿಯಾದ ಇನಿಂಗ್ಸ್‌ನ 25 ನೇ ಓವರ್‌ನಲ್ಲಿ ನಡೆಯಿತು.

ಇದನ್ನೂ ಓದಿ-ಬಿಗ್‌ಬಾಸ್‌ ಮನೆಗೆ ಕಾಲಿಟ್ರು ಸೋಷಿಯಲ್‌ ಮಿಡಿಯಾ ಸೆನ್ಸೇಷನಲ್‌ ಬ್ಯೂಟಿ! ಯಾರು ಅಂತ ಗೆಸ್‌ ಮಾಡಿ..

ಇದುವರೆಗೆ ಕ್ರಿಕೆಟ್ ಇತಿಹಾಸದಲ್ಲಿ ಗಂಟೆಗೆ 162 ಕಿಲೋಮೀಟರ್ ವೇಗದಲ್ಲಿ ಚೆಂಡನ್ನು ಹೊಡೆಯಲು ಯಾವುದೇ ಬೌಲರ್‌ಗೆ ಸಾಧ್ಯವಾಗಿಲ್ಲ. ಗಂಟೆಗೆ 181.6 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವುದನ್ನು ಇದರಲ್ಲಿ ಕಾಣಬಹುದು. ಆದರೆ ಚೆಂಡಿನ ವೇಗವನ್ನು ತಪ್ಪಾಗಿ ತೋರಿಸಲಾಗಿದೆ ಎಂದು ಹೇಳಲಾಗುತ್ತಿದೆ.. ಏಕೆಂದರೇ ಕ್ರಿಕೆಟ್ ಪಂದ್ಯಗಳಲ್ಲಿ ಸ್ಪೀಡ್ ಗನ್‌ಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುವುದು ಹೊಸ ವಿಷಯವೇನಲ್ಲ.

ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ವೇಗದ ಎಸೆತದ ದಾಖಲೆಯನ್ನು ಹೊಂದಿದ್ದಾರೆ. ಅಖ್ತರ್ ತಮ್ಮ ತೀಕ್ಷ್ಣವಾದ ಬೌಲಿಂಗ್‌ನಿಂದ ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ನಲ್ಲಿ ಭಯವನ್ನು ಮೂಡಿಸಿದರು. 2003 ರ ODI ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡುವಾಗ, ಅವರು ಗಂಟೆಗೆ 161.3 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದರು. 21 ವರ್ಷಗಳಿಂದ ಅವರ ದಾಖಲೆ ಹಾಗೇ ಉಳಿದಿದೆ. ಅಖ್ತರ್ ಒಂದೇ ಓವರ್‌ನಲ್ಲಿ ಗಂಟೆಗೆ 153.3, 158.4, 158.5, 157.4, 159.5 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ದಾರೆ ಎಂಬುದು ಗಮನಾರ್ಹ. 

ಇದನ್ನೂ ಓದಿ-Arecanut Price Today: ದಾವಣಗೆರೆ, ಮಂಗಳೂರು & ತುಮಕೂರಿನಲ್ಲಿ ಇಂದಿನ ಅಡಿಕೆ ಧಾರಣೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News