ನವದೆಹಲಿ: ನಾಗಪುರ್ ದಲ್ಲಿ ಸೌರಾಷ್ಟ್ರ ವಿರುದ್ದ ನಡೆದ ರಣಜಿ ಫೈನಲ್ ಪಂದ್ಯದಲ್ಲಿ ವಿದರ್ಭಾ ತಂಡವು ರಣಜಿ ಟ್ರೋಪಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ್ದ ವಿಧರ್ಭ ತಂಡವು ಮೊದಲ ಇನ್ನಿಂಗ್ಸ್ ನಲ್ಲಿ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು 312ಕ್ಕೆ ಆಲೌಟ್ ಆಯಿತು. ವಿದರ್ಭ ಪರ ಅಕ್ಷಯ್ ಕಾರ್ನೆಕರ್ 73 ಹಾಗೂ ಅಕ್ಷಯ್ ವಾಡಕರ್ 45 ರನ್ ಗಳನ್ನು ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.
Vidarbha defeat Saurashtra by 78 runs in the Ranji Trophy final
Lift back-to-back Ranji Trophy titles 👏👏 pic.twitter.com/km0LASmN4S
— BCCI Domestic (@BCCIdomestic) February 7, 2019
ಇದಾದ ನಂತರ ಬ್ಯಾಟಿಂಗ್ ಆರಂಭಿಸಿದ ಸೌರಾಷ್ಟ್ರ ತಂಡವು ಸ್ನೇಲ್ ಪಟೇಲ್ (102) ಅವರ ಭರ್ಜರಿ ಶತಕದ ನಡುವೆಯೂ ಹಿನ್ನಡೆ ಸಾಧಿಸಿತು. ವಿದರ್ಭ ಪರ ಆದಿತ್ಯ ಸಾರ್ವಾತೆ 5 ಹಾಗೂ ಅಕ್ಷಯ್ ವಾಖ್ರೆ 4 ವಿಕೆಟ್ ಗಳನ್ನು ಪಡೆಯುವ ಮೂಲಕ ತಂಡವು ಸೌರಾಷ್ಟ್ರ ತಂಡವನ್ನು ಕಟ್ಟಿಹಾಕಿದರು.
ಇದಾದ ನಂತರ ಎರಡನೇ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಆರಂಭಿಸಿದ ವಿದರ್ಭ ತಂಡವು ಕೇವಲ 200 ರನ್ ಗಳಿಗೆ ಆಲೌಟ್ ಆಯಿತು.206 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಸೌರಾಷ್ಟ್ರ ತಂಡವು ಕೇವಲ 127 ರನ್ ಗಳಿಗೆ ಆಲೌಟ್ ಆಯಿತು.ಆ ಮೂಲಕ ವಿದರ್ಭ ತಂಡವು ರಣಜಿ ಟ್ರೋಪಿಯನ್ನು ತನ್ನದಾಗಿಸಿಕೊಂಡಿತು.