ಕಾಶ್ಮೀರದಲ್ಲಿ ಜನರ ಸ್ವಾತಂತ್ರ್ಯ ಮತ್ತು ಮಾಧ್ಯಮ ನಿರ್ಬಂಧಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ನಿಭಾಯಿಸುವಲ್ಲಿ ಭಾರತದ ಸುಪ್ರೀಂಕೋರ್ಟ್ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಕಾಶ್ಮೀರದಲ್ಲಿ ಜನರ ಹಕ್ಕುಗಳನ್ನು ಸಂಪೂರ್ಣವಾಗಿ ಪುನಃ ಸ್ಥಾಪಿಸಲು ನರೇಂದ್ರ ಮೋದಿ ಸರ್ಕಾರವನ್ನು ವಿಶ್ವಸಂಸ್ಥೆ ಒತ್ತಾಯಿಸಿದೆ.
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮುಂದಿನ ವಾರ ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಚಾರವನ್ನು ಎತ್ತುವ ಸಾಧ್ಯತೆ ಇದೆ ಎಂದು ವಕ್ತಾರರು ತಿಳಿಸಿದ್ದಾರೆ.
ಜೀನಿವಾದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಪಾಕಿಸ್ತಾನದ ಟೀಕೆಗಳಿಗೆ ಭಾರತ ಇಂದು ತಕ್ಕ ಪ್ರತಿಕ್ರಿಯೆಯನ್ನು ನೀಡಿದ್ದು, ಅದನ್ನು ಭಾರತ 'ಆಕ್ರಮಣಕಾರಿ ವಾಕ್ಚಾತುರ್ಯ, ಸುಳ್ಳು ಆರೋಪ ಮತ್ತು ನಿರ್ಬಂಧಿತ ಆರೋಪಗಳು' ಎಂದು ಕರೆದಿದೆ.
ಕಾಂಗ್ರೆಸ್ ಮುಖಂಡ ಶಶಿ ತರೂರ್ ಇಂದು ಕಾಶ್ಮೀರದ ಮೇಲೆ ಪಾಕಿಸ್ತಾನದ ಮೇಲೆ ವಾಗ್ದಾಳಿ ನಡೆಸಿ ವಿಶ್ವಸಂಸ್ಥೆಗೆ ಕೊಂಡೊಯ್ಯುವ ವಿಷಯದಲ್ಲಿ ಭಾರತದ ವಿರೋಧ ಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಒಗ್ಗಟ್ಟಾಗಿ ನಿಂತಿವೆ ಎಂದು ಹೇಳಿದ್ದಾರೆ.
ಭಾರತವು ಪಾಲೆಸ್ತಿನ್ ನೀತಿ ವಿಚಾರವಾಗಿ ಭಿನ್ನ ನಿಲುವು ತಾಳಿದೆ.ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಪರಿಷತ್ತು ಸಂಸ್ಥೆಯಲ್ಲಿ ಭಾರತ ಈಗ ಪಾಲೆಸ್ತಿನ್ ಮಾನವ ಹಕ್ಕು ಸಂಘಟನೆ ವಿರುದ್ದವಾಗಿ ಮತ ಚಲಾಯಿಸಿದೆ.ಈ ಹಿಂದೆ ಪ್ಯಾಲೇಸ್ಟಿನಿಯನ್ ಹಕ್ಕುಗಳ ಸಂಘಟನೆಗೆ ವಿಕ್ಷಕ ಸ್ಥಾನಮಾನವನ್ನು ನೀಡಿದ್ದಕ್ಕೆ ಇಸ್ರೇಲ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ಭಾರತ, ಜರ್ಮನಿ, ಬ್ರೆಜಿಲ್ ಮತ್ತು ಜಪಾನ್ ನಂತರ ರಾಷ್ಟ್ರಗಳು ಸಮಕಾಲಿನ ವಾಸ್ತವಿಕ ವಿಷಯಗಳನ್ನು ಪ್ರತಿಬಿಂಬಿಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಶಾಶ್ವತ ಸದಸ್ಯ ಸ್ಥಾನಮಾನ ಅಗತ್ಯವೆಂದು ಫ್ರಾನ್ಸ್ ನ ವಿಶ್ವಸಂಸ್ಥೆ ರಾಯಭಾರಿ ಅಭಿಪ್ರಾಯಪಟ್ಟಿದ್ದಾರೆ.
ಭಯೋತ್ಪಾದಕ ಮಸೂದ್ ಅಜರ್ ಅವರನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈಗ ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಿದೆ. ಈ ಹಿಂದೆ ನಾಲ್ಕು ಬಾರಿ ಅವರನ್ನು ಈ ಪಟ್ಟಿಗೆ ಸೇರಿಸುವಲ್ಲಿನ ಭಾರತದ ಯತ್ನಕ್ಕೆ ಚೀನಾ ಅಡ್ಡಿಯುಂಟು ಮಾಡಿತ್ತು. ಈಗ ಅದು ಭದ್ರತಾ ಮಂಡಳಿಯಲ್ಲಿ ತನ್ನ ನಿರ್ಬಂಧಗಳನ್ನು ಕೈ ಬಿಟ್ಟ ಹಿನ್ನಲೆಯಲ್ಲಿ ವಿಶ್ವಸಂಸ್ಥೆ ಮಸೂದ್ ಅಜರ್ ರನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸಿದೆ.
ವಿಶ್ವಸಂಸ್ಥೆ ಭಾರತಕ್ಕೆ ದೀಪಾವಳಿ ಪ್ರಯುಕ್ತ ವಿಶೇಷ ಗಿಫ್ಟ್ ನ್ನು ನೀಡಿದೆ.ವಿಶ್ವಸಂಸ್ಥೆಯ ಪೋಸ್ಟಲ್ ಸಿಸ್ಟಮ್ ಹಬ್ಬದ ಪ್ರಯುಕ್ತ ದೀಪಾವಳಿಯ ಹಬ್ಬವನ್ನು ಬಿಂಬಿಸುವ ಎರಡು ಸ್ಟಾಂಪ್ ಗಳನ್ನು ಬಿಡುಗಡೆ ಮಾಡಿ ದುಷ್ಟ ಶಕ್ತಿಗಳ ಮೇಲೆ ಒಳ್ಳೆಯತನದ ಗೆಲುವು ಹಬ್ಬವನ್ನು ಹೇಳಿಕೊಂಡಿದೆ.
ಭಾರತದ ಖ್ಯಾತ ಸರೋದ್ ಮಾಂತ್ರಿಕ ಅಮ್ಜದ್ ಅಲಿ ಖಾನ್ ಅವರು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ಸಂಸ್ಥೆಯ ದಿನದಂದು ಸಂಗೀತ ಕಚೇರಿ ಮೂಲಕ ನೆರೆದಿದ್ದವರನ್ನು ಮಂತ್ರ ಮುಗ್ದರನ್ನಾಗಿಸಿದರು.
ಪಾಕಿಸ್ತಾನ ಮಾತುಕತೆಗೆ ಪತ್ರ ಬರೆದ ಬೆನ್ನಲ್ಲೇ ನಮ್ಮ ಸೈನಿಕರನ್ನು ಹತ್ಯೆ ಮಾಡಿದೆ. ಈ ಮೂಲಕ ಇಮ್ರಾನ್ ಖಾನ್ ತನ್ನ ಕಪಟ ಬುದ್ಧಿಯನ್ನು ತೋರಿಸಿದ್ದಾರೆ ಎಂದು ಸುಷ್ಮಾ ಸ್ವರಾಜ್ ಆಕ್ರೋಶ ವ್ಯಕ್ತಪಡಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.