ಅಪ್ಪು ಅಭಿಮಾನಿಗಳಿಂದ ಬಹಿರಂಗ ಸಭೆ ಮತ್ತು ಪ್ರತಿಭಟನೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಳಿ ಪ್ರೊಟೆಸ್ಟ್. ಅಪ್ಪು ಫ್ಯಾನ್ಸ್ಗೆ ಹತ್ತಾರು ಕನ್ನಡಪರ ಸಂಘಟನೆಗಳು ಸಾಥ್. ಸಾಮಾಜಿಕ ಜಾಲತಾಣಗಳ ಪ್ರಚೋದನಕಾರಿ ಪೋಸ್ಟ್ ವಿಚಾರ. ಕಿಡಿಗೇಡಿಗಳ ವಿರುದ್ಧ ಪರಮಾತ್ಮನ ಫ್ಯಾನ್ಸ್ ಆಕ್ರೋಶ.
ನಟ ದರ್ಶನ್ ಮೇಲೆ ಚಪ್ಪಲಿ ಎಸೆತ ಘಟನೆ ಖಂಡನೀಯ ಎಂದ ಕರವೇ ಅಧ್ಯಕ್ಷ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ. ನಾವೆಲ್ಲ ನಟ ಅಪ್ಪು ಅವರ ಆದರ್ಶ ಪಾಲಿಸಬೇಕು. ಅಭಿಮಾನಿಗಳು ಈ ರೀತಿ ನಡೆದುಕೊಳ್ಳೋದು ಸರಿಯಲ್ಲ ಎಂದಿದ್ದಾರೆ.
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ರಾಜಕುಮಾರ ಅವರ ನಡುವೆ ಇದ್ದ ಪ್ರೀತಿ ಅದ್ಭುತ. ಅಣ್ಣ ತಮ್ಮಂದಿರು ಅಂದ್ರೆ ಇವರಂತಿರಬೇಕು ಅಂತ ಕರುನಾಡಿನ ಜನ ಹೇಳುವಂತಿತ್ತು. ಇಂದಿಗೂ ಅಪ್ಪು ಇಲ್ಲ ಎನ್ನುವ ಗುಂಗಿನಿಂದ ಶಿವಣ್ಣ ಹೊರ ಬಂದಿಲ್ಲ. ಇದೀಗ ಮತ್ತೆ ಅಪ್ಪು ಅವರನ್ನು ನೆನೆದು ಶಿವಣ್ಣ ಬಾವುಕರಾದ ಪ್ರಸಂಗ ಜೀ ವೇದಿಕೆಯ ಮೇಲೆ ನಡೆಯಿತು.
Ashwini Puneeth Rajkumar: ಅಣ್ಣಾವ್ರ ನಂತರ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರಲ್ಲಿ ಡಾ.. ರಾಜ್ಕುಮಾರ್ ಅವರನ್ನು ಕಂಡ ಅಭಿಮಾನಿಗಳು ಅಣ್ಣಾವ್ರಿಗೆ ಕೊಟ್ಟಿದ್ದ ಪ್ರೀತಿ ಮತ್ತು ಅಭಿಮಾನವನ್ನು ಅಪ್ಪುಗೆ ಧಾರೆ ಎರೆದಿದ್ರು.. ಅಪ್ಪುವನ್ನ ರಾಜಕೀಯಕ್ಕೆ ಕರೆತರಲು ಸಾಕಷ್ಟು ಪ್ರಯತ್ನ ನಡೆದರೂ ಅಪ್ಪು ಇದ್ಯಾವುದಕ್ಕೂ ಒಪ್ಪಲಿಲ್ಲ. ಇನ್ನು ಅಪ್ಪು ಅಗಲಿಕೆ ನಂತ್ರ ದೊಡ್ಮನೆ ದೇವರುಗಳು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಲ್ಲೇ ಅಪ್ಪು ಅವರನ್ನು ಕಾಣುತ್ತಿದ್ದಾರೆ.
ಅಪ್ಪು ಅಗಲಿಕೆ ನಂತ್ರ ಈ ಚಿತ್ರವನ್ನು ಯಾರು ಮಾಡ್ತಾರೆ ಅನ್ನೋ ಕುತೂಹಲ ಮೂಡಿತ್ತು. ಅದ್ರೆ ಚಿತ್ರದ ನಿರ್ದೇಶಕರ ಪವನ್ ಕುಮಾರ್ ಅಗಲಿ ಹೊಂಬಾಳೆ ಪ್ರೊಡಕ್ಷನ್ ಆಗಲಿ ಈ ಸಿನಿಮಾ ಮತ್ತೆ ಮಾಡುವ ಸೂಚನೆ ಕೊಟ್ಟಿರಲಿಲ್ಲ.. ಇದ ನೋಡಿದ ಪವರ್ ಫ್ಯಾನ್ಸ್ ಅಪ್ಪು ಇಷ್ಟ ಪಟ್ಟು ಒಕೆ ಮಾಡಿದ್ದ "ದ್ವಿತ್ವ" ಬರಲ್ಲ ಅಂತ ನೊಂದು ಕೊಂಡಿದ್ರು.. ಅದ್ರೆ ಈಗ ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಅದೇನಪ್ಪ ಅಂದ್ರೆ ಅಪ್ಪು ಮಾಡಬೇಕಿದ್ದ ದ್ವಿತ್ವ ಸಿನಿಮಾ ಬೆಳ್ಳಿ ತೆರೆ ಬೆಳಗಿಸೋದು ಪಕ್ಕಾ ಅಂತೆ.. ಬೇಸರದ ಸಂಗತಿ ಅಂದ್ರೆ ಅಪ್ಪು ಮಾಡಬೇಕಿದ್ದ ಪಾತ್ರ ಬೇರೆ ನಟನ ಪಾಲಾಗಿರೋದು..
ಮಂಡ್ಯದಲ್ಲಿ ಅಪ್ಪು-ಅಂಬಿ ಅಭಿಮಾನಿಗಳು 12 ಲಕ್ಷ ರೂ. ವೆಚ್ಚದಲ್ಲಿ ಅಪ್ಪು ಅಂಬಿ ದೇಗುಲ ನಿರ್ಮಿಸಲಾಗಿದೆ. ಇಬ್ಬರ ಪುತ್ಥಳಿಗಳನ್ನು ಒಂದೇ ಗುಡಿಯಲ್ಲಿ ನಿರ್ಮಿಸಲಾಗಿದೆ. ಇಂದು ಸಂಸದೆ ಸುಮಲತಾ ಹಾಗೂ ಅಶ್ವಿನಿ ಪುನೀತ್ರಾಜಕುಮಾರ್ ಈ ದೇಗುಲ ಅನಾವರಣ ಮಾಡಲಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಪುನೀತ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು. ಕರ್ನಾಟಕದ ಬಾವುಟದಲ್ಲಿ ಪುನೀತ್ ಫೋಟೋ ಹಾಕಿದ್ದು ಸರಿಯಲ್ಲ ಎಂದು ಅವರು ಕೂಗಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಮಹಿಳೆಯು ಕ್ಷಮಾಪಣೆ ಕೇಳಿದ್ದಾರೆ.
ಶ್ರೀನಿವಾಸ ಚಿತ್ರಮಂದಿರದಲ್ಲಿ ಅಪ್ಪು ಪುತ್ಥಳಿ ಅನಾವರಣ. ಬೆಂಗಳೂರಿನ ಗೌಡನಪಾಳ್ಯ ಶ್ರೀನಿವಾಸ ಚಿತ್ರಮಂದಿರ. ಚಿತ್ರಮಂದಿರಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್. ಫ್ಯಾನ್ಸ್ ಮನವಿ ಮೇರೆಗೆ ಶ್ರೀನಿವಾಸ ಥಿಯೇಟರ್ಗೆ ಬಂದ ಅಶ್ವಿನಿ ಪುನೀತ್ ರಾಜ್ ಕುಮಾರ್.
ನಮ್ಮೆಲ್ಲರ ಹೆಮ್ಮೆ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅಭಿನಯದ ಚಿತ್ರ ಗಂಧದ ಗುಡಿಯನ್ನು ಕನ್ನಡಿಗರೆಲ್ಲರೂ ನೋಡಬೇಕೆನ್ನುವ ದೃಷ್ಟಿಕೋನದಿಂದ ಈಗ ಟಿಕೆಟ್ ದರದಲ್ಲಿ ಕಡಿತ ಮಾಡಲಾಗಿದೆ.
ನಾನು "ಗಂಧದ ಗುಡಿ" ಚಿತ್ರವನ್ನು ಬಿಡುಗಡೆಯ ದಿನದಂದೇ ಮೊದಲ ಶೋ ವೀಕ್ಷಿಸಬೇಕೆಂದು ಕೊಂಡಿದ್ದೆ. ಚಿತ್ರೀಕರಣದ ನಿಮಿತ್ತ 27 ನೇ ತಾರೀಖು ಶಿವಮೊಗ್ಗಕ್ಕೆ ಬಂದೆ. ಇತ್ತೀಚಿಗೆ ನಾನು ಈ ಚಿತ್ರವನ್ನು "ಮಾದೇವ" ಚಿತ್ರತಂಡದ 120 ಸದಸ್ಯರೊಡನೆ ನೋಡಿದೆ ಎಂದು ನಟ ವಿನೋದ್ ಕುಮಾರ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.