James Trademark Song: ಜೇಮ್ಸ್ ಗ್ಲಿಂಪ್ಸ್ ಜೊತೆ ಲಿರಿಕಲ್ ಸಾಂಗ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪ್ರಮೋಷನಲ್ ಸಾಂಗ್ ನಲ್ಲಿ ರಚಿತಾ ರಾಮ್, ಆಶಿಕಾ ರಂಗನಾಥ್, ಶ್ರೀ ಲೀಲಾ ಹೆಜ್ಜೆ ಹಾಕಿದ್ದಾರೆ. ಹಾಗೇ ಚರಣ್ ರಾಜ್, ಚಂದನ್ ಶೆಟ್ಟಿ, ಕೋರಿಯೋಗ್ರಫರ್ ಮೋಹನ್ ಕಾಣಿಸಿಕೊಂಡಿದ್ದಾರೆ.
James Song Release: ಕೆಲ ದಿನಗಳ ಹಿಂದಷ್ಟೇ ರಿಲೀಸ್ ಆಗಿದ್ದ 'ಜೇಮ್ಸ್' (James) ಸಿನಿಮಾದ ಟೀಸರ್ ಎಲ್ಲೆಲ್ಲೂ ಹವಾ ಎಬ್ಬಿಸಿತ್ತು. ಅಲ್ಲದೆ ಹಲವು ದಾಖಲೆಗಳನ್ನೂ 'ಜೇಮ್ಸ್' ಸಿನಿಮಾದ ಟೀಸರ್ ಪುಡಿ ಪುಡಿ ಮಾಡಿದೆ. ಇದೀಗ 'ಜೇಮ್ಸ್' ಸಿನಿಮಾದ 'ಟ್ರೇಡ್ ಮಾರ್ಕ್' ಹಾಡು ರಿಲೀಸ್ ಆಗುತ್ತಿದ್ದು, ಅಪ್ಪು ಅಭಿಮಾನಿಗಳ ಸಂಭ್ರಮ ದುಪ್ಪಟ್ಟಾಗಿದೆ.
ಹಿಂದೆಂದೂ ಈ ರೀತಿ ಸಿನಿಮಾ ರಿಲೀಸ್ ಆಗಿರಬಾರದು.. ಮುಂದೆ ಕೂಡ ಅಂತಹ ರಿಲೀಸ್ ನೋಡಿರಬಾರದು. ಯಾಕಪ್ಪಾ ಈ ಡೈಲಾಗ್ ಅಂದ್ರೆ, ಅಪ್ಪು ಅಭಿನಯದ ಕೊನೇ ಸಿನಿಮಾ ಬಿಡುಗಡೆ ಮಾಡೋದಕ್ಕೆ ಅಭಿಮಾನಿ ಬಳಗ ನಡೆಸಿರುವ ತಯಾರಿ ಹಾಗಿದೆ. ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಲು ಚಿತ್ರತಂಡ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ಪವರ್ ಸ್ಟಾರ್ ಜೊತೆ ಬಾಲಿವುಡ್ ನಟಿ ಐಶ್ವರ್ಯ ರೈ ನಟಿಸಬೇಕಿತ್ತಂತೆ. ಆದರೆ ಕೊನೆ ಘಳಿಗೆಯಲ್ಲಿ ಅದು ಸಾಧ್ಯವಾಗಲಿಲ್ಲ. ಹಾಗಾದ್ರೆ ಯಾವುದು ಆ ಸಿನಿಮಾ ಯಾವುದು? ಅಪ್ಪು ಜೊತೆ ಐಶ್ವರ್ಯ ರೈ ನಟಿಸಲಿಲ್ಲ ಏಕೆ? ಇದರ ಕಂಪ್ಲೀಟ್ ಡೀಟೇಲ್ಸ್ ನಿಮಗಾಗಿ ಇಲ್ಲಿದೆ..
ಜೇಮ್ಸ್ ರಿಲೀಸ್ ಆಗುವ ದಿನ ಅಪ್ಪು ಚಿತ್ರವನ್ನು ಮಾತ್ರ ಪ್ರದರ್ಶನ ಮಾಡಲು ಸಿದ್ಧತೆ ನಡೆದಿದೆ. ಈ ಬಗ್ಗೆ ಜೇಮ್ಸ್ ಚಿತ್ರದ ವಿತರಕ ಧೀರಜ್ ಮಾಹಿತಿ ನೀಡಿದ್ದಾರೆ. ಹಾಗೇ ಅಪ್ಪು ಸಿನಿಮಾ ರಿಲೀಸ್ ಆಗುವ ದಿನ ಪರಭಾಷೆ ಚಿತ್ರಗಳಿಗೆ ಕೊಕ್ ನೀಡುವ ಸಾಧ್ಯತೆ ಇದೆ.
Power Star Puneet Raj Kumar - ಒಂದ್ಕಡೆ ಜೇಮ್ಸ್ ಚಿತ್ರದ ಪೋಸ್ಟರ್ (James Poster Release) ರಿಲೀಸ್ ಸಂಭ್ರಮ ದೇಶಾದ್ಯಂತ ಮನೆಮಾಡಿದ್ರೆ, ಇನ್ನೊಂದ್ಕಡೆ ಅಪ್ಪು (Appu) ಅಗಲಿಕೆ ನೋವಲ್ಲೇ ಅಭಿಮಾನಿ ಬಳಗವಿದೆ. ಕೋಟಿ ಕೋಟಿ ಅಭಿಮಾನಿಗಳ ಪಾಲಿನ ಪ್ರೀತಿಯ ʼಅಪ್ಪುʼ ಅವರನ್ನು ಫ್ಯಾನ್ಸ್ ಪೋಸ್ಟರ್ ಹಾಗೂ ಟೀ ಶರ್ಟ್ ಗಳ (T-Shirts With James Poster) ಮೂಲಕ ನೆನೆಪು ಮಾಡಿಕೊಳ್ಳುತ್ತಿದ್ದಾರೆ.
'ಜೇಮ್ಸ್' ಚಿತ್ರದ ಪೋಸ್ಟರ್ ರಿಲೀಸ್ ಆಗಿರುವುದು ಒಂದೆಡೆ ಸಂಭ್ರಮದ ವಾತಾವರಣ ಸೃಷ್ಟಿಸಿದ್ದರೆ, ಮತ್ತೊಂದೆಡೆ ಅಪ್ಪು ಅವರನ್ನು ನೆನೆದು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. 'ಅಪ್ಪು ನೀವು ನಮ್ಮೊಂದಿಗೆ ಇರಬೇಕಿತ್ತು' ಎಂದು ಅಭಿಮಾನಿಗಳು ಭಾವುಕರಾಗಿ ಪೋಸ್ಟ್ ಹಾಕುತ್ತಿದ್ದಾರೆ.
ನಮ್ಮೆಲರ ಪ್ರೀತಿಯ ಅಪ್ಪು ಅಗಲುವಿಕೆ ನಿಜಗೂ ಅಭಿಮಾನಿಗಳಿಗೆ ಎಂದು ಆರದ ಗಾಯವಾಗಿದೆ.ಪ್ರತಿದಿನವೂ ಕೂಡ ಅವರ ಜೊತೆಗೆ ಕಳೆದ ನೆನಪಿನ ಬುತ್ತಿಗಳನ್ನು ಎಲ್ಲ ನಟರು ಕೂಡ ಸ್ಮರಿಸುತ್ತಲೇ ಇದ್ದಾರೆ.
ಕನ್ನಡದ ಸಿನಿ ಪ್ರಿಯರಲ್ಲಿ ಪ್ರೀತಿಯ ಅಪ್ಪು ಎಂದೇ ಜನಜನಿತರಾಗಿದ್ದ ಪುನೀತ್ ರಾಜ್ ಕುಮಾರ ಇನ್ನಿಲ್ಲ ಎನ್ನುವ ಸುದ್ದಿ ಈಗ ನಿಜಕ್ಕೂ ಬರ ಸಿಡಿಲಿನಂತೆ ಬಂದಿದೆ.ಅಪ್ಪು ಸಿನಿಮಾದ ಮೂಲಕ ನಾಯಕ ನಟರಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟಾಗಿನಿಂದಲೂ ಅವರು ಎಲ್ಲರ ನೆಚ್ಚಿನ ನಟರಾಗಿದ್ದರು.ಕೇವಲ ನಟರಾಗಿ ಅಷ್ಟೇ ಅಲ್ಲದೆ ಹಿನ್ನಲೆ ಗಾಯಕರಾಗಿಯೂ ಅವರು ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.