How to apply for Baal Aadhaar Card: ಪೋಷಕರ ಆಧಾರ್ ಅನ್ನು ಆಧರಿಸಿ ಮಕ್ಕಳ ಆಧಾರ್ ಕಾರ್ಡ್ ಅನ್ನು ಮಾಡಿಸಲಾಗುತ್ತದೆ. ಅಂದರೆ ಇದಕ್ಕಾಗಿ ಬೆರಳಚ್ಚು ಮತ್ತು ಇತರ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ.
Aadhar Card: ಇಂದು ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಸರ್ಕಾರಿ ಯೋಜನೆಗಳ ಪ್ರಯೋಜನ, ಬ್ಯಾಂಕ್ಗೆ ಸಂಬಂಧಿಸಿದ ಯಾವುದೇ ಕೆಲಸಗಳನ್ನು ಮಾಡುವುದರಿಂದ ಹಿಡಿದು ಮಕ್ಕಳ ಶಾಲಾ ಪ್ರವೇಶ ಮತ್ತು ಸರ್ಕಾರಿ ಪಡಿತರ ಅಂಗಡಿಯವರೆಗೆ ಎಲ್ಲಾ ಕಡೆ ಆಧಾರ್ ಕಡ್ಡಾಯವಾಗಿದೆ.
UIDAI Update: ಎಲ್ಲಾ ದೇಶವಾಸಿಗಳಿಗೆ ಆಧಾರ್ ಕಾರ್ಡ್ ಅನ್ನು ಖಾತ್ರಿಪಡಿಸುವ ತನ್ನ ಉದ್ದೇಶವನ್ನು ಪೂರೈಸುವ ಸಲುವಾಗಿ, UIDAI ಈಗ ಆಸ್ಪತ್ರೆಯಲ್ಲಿಯೇ ನವಜಾತ ಶಿಶುಗಳಿಗೆ ಆಧಾರ್ ನೋಂದಣಿಯನ್ನು ಒದಗಿಸಲು ಯೋಜಿಸುತ್ತಿದೆ.
ಯುಐಡಿಎಐ ಮಗುವಿನ ಜನನ ಪ್ರಮಾಣಪತ್ರ ಅಥವಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಸ್ಲಿಪ್ ಮತ್ತು ಪೋಷಕರಲ್ಲಿ ಒಬ್ಬರ ಆಧಾರದ ಮೇಲೆ ಮಗುವಿನ ಬಾಲ್ ಆಧಾರ್ ಕಾರ್ಡ್ ಹೊಸ ನಿಯಮಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.
ಯುಐಡಿಎಐ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸರ್ಕಾರ ನೀಲಿ ಬಣ್ಣದ ಆಧಾರ್ ಕಾರ್ಡ್ ನೀಡುತ್ತದೆ. ವಾಸ್ತವವಾಗಿ, ಪೋಷಕರು ಈಗ ಹೊಸದಾಗಿ ಹುಟ್ಟಿದ ಮಗುವಿನ 12-ಅಂಕಿಯ ಆಧಾರ್ ಸಂಖ್ಯೆಯನ್ನು ಸಹ ಪಡೆಯಬಹುದು. ಹೊಸದಾಗಿ ಜನಿಸಿದ ಮಗುವಿಗೆ ಬಾಲ್ ಆಧಾರ್ ಕಾರ್ಡ್ಗೆ ಅರ್ಜಿ ಸಲ್ಲಿಸಲು, ಪೋಷಕರು ಹುಟ್ಟಿದ ಮಗುವಿನ ಜನನ ಪ್ರಮಾಣಪತ್ರ ಮತ್ತು ಯಾವುದೇ ಪೋಷಕರ ಆಧಾರ್ ಸಲ್ಲಿಸಬೇಕು. ಆದ್ರೆ ಈಗ ಪೋಷಕರು ತಮ್ಮ ಶಿಶುವಿನ ಜನನ ಪ್ರಮಾಣಪತ್ರಕ್ಕಾಗಿ ಕಾಯುವ ಅಗತ್ಯವಿಲ್ಲ. ಜನನ ಪ್ರಮಾಣಪತ್ರದ ಬದಲು ಹುಟ್ಟಿದ ಮಗುವಿನ ಆಸ್ಪತ್ರೆ ಡಿಸ್ಚಾರ್ಜ್ ಬಿಲ್ ಬಳಸಿಕೊಂಡು ತಮ್ಮ ಮಗುವಿನ ಆಧಾರ್ಗೆ ಅರ್ಜಿ ಸಲ್ಲಿಸಬಹುದು.
ದೇಶದ ಪ್ರತಿಯೊಬ್ಬರೂ ಆಧಾರ್ ಕಾರ್ಡ್ ನೀಡಲಾಗುತ್ತಿದೆ. ಸಧ್ಯ ನವಜಾತ ಶಿಶುಗಳಿಗೆ ಕೂಡ ವಿಶೇಷವಾದ ಆಧಾರ್ ಕಾರ್ಡ್ ನೀಡಲು ಸರ್ಕಾರ ಮುಂದಾಗಿದೆ. ಅದಕ್ಕೆ ಕೇಂದ್ರ ಸರ್ಕಾರ 'ನೀಲಿ ಬಣ್ಣದ ಬಾಲ್ ಆಧಾರ್ ಕಾರ್ಡ್' ಎಂದು ಹೆಸರಿಟ್ಟಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.