Karnataka Election 2023 : ಮಂಡ್ಯದಲ್ಲಿ ಮೂಲ ಹೊಸಬರಿಗೆ ಅವಕಾಶ ನೀಡಲಾಗಿದ್ದು, ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿಸಲಾಗಿದೆ. ಇದರಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದವರಿಗೆ ಆಘಾತ ಉಂಟಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಬಿಜೆಪಿ ಪಕ್ಷದ ಪ್ರಮುಖ ಗೆಲುವಿನ ಕ್ಷೇತ್ರ. ಈವರೆಗೆ ಶಾಸಕರಾಗಿ ಸಚಿವರಾಗಿದ್ದ ಎಸ್.ಅಂಗಾರರಿಗೆ ಈ ಸಲದ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದೆ. ಈ ಸಲ ಅಂಗಾರರ ಬದಲಿಗೆ ಬೇರೆ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡಬೇಕೆಂಬ ಆಗ್ರಹ ಕೂಡಾ ಕೇಳಿಬಂದಿತ್ತು. ಇದೀಗ ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಭಾಗೀರಥಿ ಮುರುಳ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಇದರಿಂದ ಅಂಗಾರ ಬೆಂಬಲಿಗರಿಗೆ ಅಸಮಾಧಾನ ಉಂಟಾಗಿದೆ.
ಇಂದು ಸಂಜೆ ಕಮಲ ಕಲಿಗಳ ಮೊದಲ ಲಿಸ್ಟ್ ರಿಲೀಸ್ ಆಗಲಿದೆ. ಗುಜರಾತ್ ರೀತಿ ಪ್ರಯೋಗಕ್ಕೆ ವರಿಷ್ಠರಿಂದ ಒಲವು ತೋರಿದ್ದು ಹಾಲಿಗಳ ಕೈ ಬಿಡಲು ರಾಜ್ಯ ನಾಯಕರು ಅಸಮ್ಮತಿ ತೋರಿದ್ದಾರೆ ಎನ್ನಲಾಗ್ತಿದೆ..
Karnataka Assembly Election: ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಕಟ್ಟಾ ಸುಬ್ರಮಣ್ಯ ನಾಯ್ಡು ಖಾಸಗಿ ಫೋಟೋ ವೈರಲ್ ಆಗಿದೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಿಗೆ ಟಿಕೆಟ್ ಕೈತಪ್ಪಿಸಲು ಈ ರೀತಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ ವಿರುದ್ಧ ನೇಕಾರರ ಅಸ್ತ್ರ ಪ್ರಯೋಗ ಮಾಡಲಾಗಿದೆ.. ನೇಕಾರರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಆಕಾಂಕ್ಷಿ ರಾಜು ಅಂಬಲಿ ಹಾಗೂ ಬೆಂಬಲಿಗರಿಂದ ಬಿತ್ತಿಪತ್ರ ಅಭಿಯಾನ ನಡೆಸುತ್ತಿದ್ದಾರೆ..
ಎಲೆಕ್ಷನ್ ಡೇಟ್ ಫಿಕ್ಸ್ ಆಗುತ್ತಿದ್ದಂತೆ ಲಕ್ಷ್ಮಣ ಸವದಿ ಅಲರ್ಟ್ ಆಗಿದ್ದಾರೆ.. ಅಥಣಿ ಬಿಜೆಪಿ ಟಿಕೆಟ್ಗಾಗಿ ಸವದಿ ಸಾಲು ಸಾಲು ಮೀಟಿಂಗ್ ಮಾಡಿದ್ದಾರೆ.. ಅಥಣಿಯಲ್ಲಿ ತಮ್ಮ ಬೆಂಬಲಿಗರ ಜೊತೆ ಸವದಿ ರಹಸ್ಯ ಸಭೆ ನಡೆಸಿದ್ದಾರೆ.
ಸೋಮಣ್ಣ ಪುತ್ರ ಅರುಣ್ಗೆ ವಿಧಾನಸಭೆಗೆ ಬಿಜೆಪಿ ಟಿಕೆಟ್ ಇಲ್ಲ. ಮೊದಲು ಪಕ್ಷದ ಕೆಲಸ ಮಾಡಲು ಹೈಕಮಾಂಡ್ ಸೂಚನೆ. ತುಮಕೂರು ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಿ ಆದೇಶ. ಸಚಿವ ಸೋಮಣ್ಣ ಪುತ್ರ ಅರುಣ್ ಸೋಮಣ್ಣಗೆ ಜಿಲ್ಲಾ ಜವಾಬ್ದಾರಿ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ.
ಒಂದು ಎಲೆಕ್ಷನ್ ಗಿಂತ ಇನ್ನೊಂದು ಎಲೆಕ್ಷನ್ ಭಿನ್ನವಾಗಿರುವುದರಿಂದ ಎಲ್ಲರಿಗೂ ನೂರಕ್ಕೆ ನೂರು ಟಿಕೆಟ್ ಕೊಟ್ಟ ಉದಾಹರಣೆಗಳಿಲ್ಲ, ಸಮೀಕ್ಷೆ, ಶಾಸಕರ ಕಾರ್ಯವೈಖರಿ ಸೇರಿ ಎಲ್ಲಾ ಮಾನದಂಡಗಳನ್ನು ನೋಡಿಕೊಂಡು ಟಿಕೆಟ್ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದ್ದಾರೆ.
ಚುನಾವಣೆ ಕಾರ್ಯ ಮತ್ತು ಕೆಲಸಗಳನ್ನು ಕಾಂಗ್ರೆಸ್-ಜೆಡಿಎಸ್ ದಾರಿ ತಪ್ಪಿಸುತ್ತಿದೆ. ಕಾಂಗ್ರೆಸ್ ನಾಯಕರು ಟೀಕೆ ಮಾಡೋಕೆ ಇರೋದು. ಅಭಿವೃದ್ಧಿಯ ವಿಚಾರವಾಗಿ ಅವರು ಚರ್ಚೆಗೆ ಬರಲಿ ಎಂದು ಕಟೀಲ್ ಕಿಡಿಕಾರಿದ್ದಾರೆ.
ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ಗಾಗಿ ಪೈಪೋಟಿ ಜೋರಾಗಿದೆ. ರಾಮು ಮಳಗಿ ಟಿಕೆಟ್ ಆಕಾಂಕ್ಷಿಯಾಗಿದ್ದು ವಿಧಾನಸಭೆ ಕ್ಷೇತ್ರದ ತುಂಬೆಲ್ಲ ಪ್ರವಾಸ ಕೈಗೊಂಡಿದ್ದಾರೆ. ನಾನು ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಹೇಳ್ತಿದ್ದಾರೆ.
ನಟಿ ಕಂಗನಾ ರಣಾವತ್ ರಾಜಕೀಯ ಪ್ರವೇಶಿಸುವ ಸುಳಿವು ನೀಡಿದ್ದಾರೆ. ಶನಿವಾರದಂದು ನಡೆದ ಕಾರ್ಯಕ್ರಮದಲ್ಲಿ ಕಂಗನಾ 2024ರ ಲೋಕಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಿಂದ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಎದುರಿಗೆ ಟಿಕೆಟ್ಗಾಗಿ ಕಾರ್ಯಕರ್ತರ ಜಟಾಪಟಿ ನಡೆಸಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ನಡೆದಿದೆ. ಮಂಡಲ ಕಾರ್ಯಕಾರಣಿ ಸಭೆಯಲ್ಲಿ ಒಂದೇ ಪಕ್ಷದ ಇಬ್ಬರು ನಾಯಕರು ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ.
ಹೆಚ್ಚಿದೆ ಟಿಕೆಟ್ ಅಕಾಂಕ್ಷಿಗಳ ಪ್ರಯತ್ನ. ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಟಿಕೆಟ್ ಆಕಾಂಕ್ಷಿಗಳು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಮತದಾರರನ್ನು ಸೆಳೆಯಲು, ಹೈ ಕಮಾಂಡ್ಗೆ ಹತ್ತಿರವಾಗಲು ಹೊಸ ಮುಖಗಳು ತಮ್ಮದೇ ಆದ ರಣತಂತ್ರ ರೂಪಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.