Tushar Girinath : ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಕೆಳ ಸೇತುವೆಗಳಲ್ಲಿ ಯಾವುದೇ ರೀತಿಯ ಸಮಸ್ಯೆ ಆಗದಂತೆ ಕೂಡಲೆ ಸಿಸಿ ಟಿವಿ, ವಿದ್ಯುತ್ ದೀಪ ಹಾಗೂ ಮಳೆ ನೀರಿನ ಪ್ರಮಾಣ ತಿಳಿಯಲು ಮೀಟರ್ ಗೇಜ್ ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ತಿಳಿಸಿದರು.
ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದಿದೆ.. ಆದ್ರೆ ಇನ್ನೂ ಕೂಡಾ ಈ ಗ್ರಾಮಕ್ಕೆ ರಸ್ತೆಯ ವ್ಯವಸ್ಥೆ ಇಲ್ಲ.. ಎಲ್ಲಿಗೆ ಹೋಗಬೇಕು ಅಂದ್ರೂ ಇವ್ರಿಗೆ ದೊಣಿಯೇ ಆಧಾರ.. ಈಗಲೂ ಇಂಥಾ ಅವಸ್ಥೆಯಲ್ಲಿರೋ ಆ ಊರು ಯಾವ್ದು ಅಂತೀರಾ..? ಇಲ್ಲಿದೆ ನೋಡಿ.
ರಾಜ್ಯ ಆರ್ಥಿಕ ಇಲಾಖೆಯು ತೀರ್ಥಹಳ್ಳಿ ತಾಲೂಕಿನ ತೂದೂರು-ಮುಂಡುವಳ್ಳಿ ಗ್ರಾಮಗಳ ನಡುವೆ ತುಂಗಾ ನದಿಗೆ ಹೊಸ ಸೇತುವೆ ನಿರ್ಮಾಣ ಕಾಮಗಾರಿಗೆ 25.65 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಹಾಗೂ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕಾರಣಗಿರಿ - ಬಪ್ಪನಮನೆ ಸಂಪರ್ಕ ರಸ್ತೆಯ ಶರಾವತಿ ಹಿನ್ನೀರಿನ ಬಿಲ್ಸಾಗರದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ 24.36 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದ್ದು, ಶೀಘ್ರವಾಗಿ ಯೋಜನೆ ಅನುಷ್ಠಾನಕ್ಕೆ ಟೆಂಡರ್ ಕರೆಯಲಾಗುತ್ತದೆ.
ಅಂತೂ ಇಂತೂ ಡೋಣಿ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಲು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಭರವಸೆ ನೀಡಿದ್ದಾರೆ. ಬೆಳಗಾವಿಯ ಅಥಣಿ ತಾಲೂಕಿನ ತೆಲಸಂಗ ಗ್ರಾಮದ ಡೋಣಿ ಹಳ್ಳ ಇದಾಗಿದೆ. ನಿಮ್ಮ ಜೀ ಕನ್ನಡ ನ್ಯೂಸ್ ವರದಿ ಫಲಶೃತಿ ಇದಾಗಿದೆ. ಹರಿಯುತ್ತಿದ್ದ ಹಳ್ಳದಲ್ಲಿ ಅಪಾಯವನ್ನು ಲೆಕ್ಕಿಸದೆ ಶಾಲಾ ಮಕ್ಕಳು ಸಂಚಾರ ಮಾಡುತ್ತಿದ್ದರು. ಈ ಕುರಿತು ಸಮಗ್ರವಾಗಿ ಜೀ ಕನ್ನಡ ನ್ಯೂಸ್ ವರದಿ ಪ್ರಸಾರ ಮಾಡಿತ್ತು.
ಸೇತುವೆಗಳು ಜಲಾವೃತ.. ಗ್ರಾಮ ಗ್ರಾಮಗಳ ಸಂಪರ್ಕ ಕಡಿತ ತೆಂಗು.. ಬಾಳೆ.. ಅಡಿಕೆ.. ಸೇರಿ ಎಲ್ಲಾ ಬೆಳೆಯು ಜಲಾವೃತ ಜಲಾಶಯಗಳು ಭರ್ತಿ.. ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಕರಾವಳಿಯಲ್ಲಿ ಕುಸಿಯುತ್ತಿವೆ ಗುಡ್ಡ.. ಮನೆಗಳು ನಾಶ..!
By accepting cookies, you agree to the storing of cookies on your device to enhance site navigation, analyze site usage, and assist in our marketing efforts.