ಒಂಟಿ ಮಹಿಳೆ ಇದ್ದ ಮನೆಗೆ ಓರ್ವ ಯುವಕ ನುಗ್ಗಿ ಗೃಹಿಣಿಗೆ ಚಾಕುವಿನಿಂದ ಚುಚ್ಚಿ ಚಿನ್ನಾಭರಣ ಕಳ್ಳತನ ಮಾಡಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ರಾಜಾಜಿನಗರದಲ್ಲಿ ನಡೆದಿದೆ. ಕಡೂರು ಪ್ರಥಮ ದರ್ಜೆ ಕಾಲೇಜಿನ ಅಶೋಕ್ ಎಂಬುವರ ಮನೆಯಲ್ಲಿ ದರೋಡೆ ಮಾಡಿದ್ದಾನೆ. ಅಶೋಕ್ರವರ ಪತ್ನಿ ನಂದಾರಿಗೆ ಖದೀಮ ಚಾಕುವಿನಿಂದ ಚುಚ್ಚಿ, ಕೈಯನ್ನ ಕಟ್ಟಿ ಹಾಕಿ ಹಾಗೂ ಕೂಗಬಾರದು ಎಂದು ಬಾಯಿಗೆ ಬಟ್ಟೆ ತುಂಬಿ, ಪ್ಲಾಸ್ಟರ್ ಹಾಕಿದ್ದಾನೆ. ಚಿನ್ನದ ತಾಳಿ ಸರ, 3 ಚಿನ್ನದ ಉಂಗುರ, 5000 ನಗದು ದೋಚಿ ಯುವಕ ಪರಾರಿಯಗಿದ್ದಾನೆ.
ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ಮಲೆನಾಡು ಭಾಗದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕಳೆದ ರಾತ್ರಿಯಿಂದ ಈವರೆಗೂ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಜಿಲ್ಲೆಯ ಜನ ಕಂಗಾಲಾಗಿದ್ದಾರೆ. ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.. ನಿರಂತರ ಮಳೆಯಿಂದ ಕಾಫಿ ಹಣ್ಣು ಉದುರಲು ಆರಂಭಿಸಿದ್ದು, ಬೆಳೆಗಾರರು ಚಿಂತೆಗೊಳಗಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಸಿಂದಗೆರೆ ಗ್ರಾಮದಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.. ಈ ನಡುವೆ ಭಾರಿ ಮಳೆಗೆ ಹತ್ತಾರು ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಸಹ ಕಂಡು ಬಂದಿದೆ.
ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ತನೋಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೂಲಭೂತ ಸೌಲಭ್ಯ ಅನ್ನೋದು ಮರಿಚೀಕೆಯಾಗಿದೆ.. ಇಲ್ಲಿ 1 ರಿಂದ 5ನೇ ತರಗತಿವರೆಗಿನ ಈ ಶಾಲೆಯಲ್ಲಿ 28 ಮಕ್ಕಳಿದ್ದಾರೆ. ಎಲ್ಲರೂ ಕೂಲಿ ಕಾರ್ಮಿಕರ ಮಕ್ಕಳು. ಆದ್ರೆ, ಇದು ಹೆಸರಿಗಷ್ಟೆ ಸರ್ಕಾರಿ ಶಾಲೆ ಅನ್ನೋವಮಥಾಗಿದ್ದು, ಮೂಲಭೂತ ಸೌಲಭ್ಯ ಅನ್ನೋದು ಮರಿಚೀಕೆಯಾಗಿದೆ.
ಇಲ್ಲಿ ದೈವದ ನುಡಿ ನಿಜವಾಗಿದೆ. ದೈವದ ನುಡಿಯಂತೆಯೇ ಅದು ಹೇಳಿದ ಜಾಗದಲ್ಲಿ ಕ್ಷೇತ್ರಕ್ಕೆ ಸಂಬಂಧಪಟ್ಟ ಪುರಾತನ ಕಾಲದ ವಿಗ್ರಹಗಳು ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ಬಳಿಯ ಅಲೆಖಾನ್ ರಸ್ತೆಯಲ್ಲಿರೋ ದೈವಸ್ಥಾನವಿದೆ.
ಕಳೆದ ಎರಡು ದಿನಗಳಿಂದ ಜಿಲ್ಲೆಯ ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ನಿನ್ನೆ ಮಳೆ ಆರಂಭಕ್ಕೂ ಮುನ್ನ ಆರಂಭವಾದ ಗುಡುಗು-ಸಿಡಿಲಿನ ಮಧ್ಯೆ ಶೃಂಗೇರಿ ಶಾರದಾಂಭೆ ದೇಗುಲದ ದೃಶ್ಯಕಾವ್ಯ ನೊಡುಗರ ಮನಸೊರೆಗೊಂಡಿದೆ.
Struggle For Water - ಅವರಿಗೆ ಕೂಲಿ ಮಾಡಿದ್ರೆ ಹೊಟ್ಟೆ ತುಂಬೋದು.ಇರೋಕೆ ಸೂರು ಇಲ್ಲ.ಇರೋ ಕೊಂಚ ಜಾಗದಲ್ಲಿ ಗುಡಿಸಲಿನಲ್ಲಿಯೇ ಬದುಕು.ನೀರಿಗಾಗಿ ನಿತ್ಯ ಪರದಾಟ.ಕೇಳಿ ಕೇಳಿ ಬೇಸತ್ತು ದಂಪತಿಗಳೇ ಬಾವಿ ತೊಡೋ ಕೆಲ್ಸಕ್ಕೆ ಮುಂದಾದ್ರು.ಎರಡು ತಿಂಗಳ ಕಠಿಣ ಪರಿಶ್ರಮದಿಂದಲೇ 60 ಅಡಿ ಬಾವಿಯನ್ನು ಅಗೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶಾಲೆಯೊಂದರಲ್ಲಿ ಕನಿಷ್ಠ 10 ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ COVID-19 ಗೆ ಪರೀಕ್ಷೆಗೆ ಒಳಗಾಗಿದ್ದಾರೆ, ನಂತರ ಶಾಲಾ ಕಟ್ಟಡವನ್ನು ಸೀಲ್ ಮಾಡಿ ಕಂಟೈನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.