ಹೆಂಡತಿ ತವರು ಮನೆ ಸೇರಿದ ಬಳಿಕ ಕುಡಿತಕ್ಕೆ ದಾಸನಾಗಿದ್ದ ರಂಗನಾಥ, ಮಾವ ಉತ್ತಮಸ್ಥನಾದರೂ ಊರಲ್ಲಿ ಅನ್ನ ಆಹಾರ ಇಲ್ಲದೆ ಅಲೆಯುತ್ತಿದ್ದ. ಆದರೆ, ಇದ್ದಕ್ಕಿದ್ದಂತೆ ಈತನ ಮಾವ ಉಮೇಶ್ ಮತ್ತು ಹೆಂಡತಿ ಅಮೃತ ಮತ್ತು ಕುಟುಂಬಸ್ಥರು ಅವನನ್ನು ಮನೆಗೆ ಕರೆತಂದು ಸರಪಳಿ ಹಾಕಿ ಬಂಧಿಸಿದ್ದಾರೆ.
Chitradurga News : ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಪರಾಜಿತ ಅಭ್ಯರ್ಥಿ ಬಿ.ಸೋಮಶೇಖರ್ ಅವರ ಮೇಲೆ ಗುರುವಾರ ರಾತ್ರಿ ಮಾಜಿ ಸಚಿವ ಡಿ.ಸುಧಾಕರ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಮಠಾದೀಶರ ಸಮಾಗಮ ನಡೀತು. ಈ ವೇಳೆ ಸರ್ಕಾರದ ನಿರ್ಣಯದ ವಿರುದ್ಧ ಮಠಾದೀಶರು ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಹಾಗಿದ್ರೆ ಸಭೆಯಲ್ಲಿ ಯಾವೆಲ್ಲ ವಿಚಾರ ಚರ್ಚೆ ಆಯ್ತು ಅನ್ನೋದರ ಕಂಪ್ಲಿಂಟ್ ಡೀಟೆಲ್ಸ್ ಇಲ್ಲಿದೆ ನೋಡಿ.r
ಭ್ರಷ್ಟಾಚಾರವನ್ನು ಹುಟ್ಟಿಹಾಕಿದ್ದೇ ಕಾಂಗ್ರೆಸ್ ಪಕ್ಷ. ಲೋಕಾಯುಕ್ತವನ್ನು ಮುಚ್ಚಿ ಎಸಿಬಿಯನ್ನು ಪ್ರಾರಂಭಿಸಿದರು. 50 ಕ್ಕಿಂತ ಹೆಚ್ಚು ಪ್ರಕರಣಗಳು ಕಾಂಗ್ರೆಸ್ ನವರ ಮೇಲಿತ್ತು. ಅವುಗಳನ್ನು ಮುಚ್ಚಿಹಾಕಿದರು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಭಾರತ್ ಜೋಡೋ ಐಕ್ಯತಾ ಯಾತ್ರೆ ಕೋಟೆಗಳನಾಡು ಚಿತ್ರದುರ್ಗ ಜಿಲ್ಲೆಗೆ ಎಂಟ್ರಿ ಕೊಟ್ಟಿದೆ. ಸಿದ್ದರಾಮಯ್ಯ ಗೈರು ಎದ್ದು ಕಾಣುತ್ತಿತ್ತು. ಇದರ ನಡುವೆ ಮಳೆರಾಯ ಪಾದಯಾತ್ರೆಗೆ ಅಡ್ಡಿ ಪಡಿಸಿದ್ದಾನೆ. ವಿವಿಧ ಜಿಲ್ಲೆಯಿಂದ ಬಂದ ಕಾರ್ಯಕರ್ತರು ಮಳೆಯಲ್ಲಿ ನೆನೆದೇ ಪಾದಯಾತ್ರೆ ಮಾಡಿದ್ದಾರೆ. ಇನ್ನೂ 3 ದಿನಗಳ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕಿನಲ್ಲಿ ಸಂಚರಿಸಲಿದೆ.
ಇಂದು ಚಿತ್ರದುರ್ಗ ಜಿಲ್ಲೆಗೆ ಭಾರತ್ ಜೋಡೋ ಯಾತ್ರೆ ಎಂಟ್ರಿ ನೀಡಲಿದೆ. ಸಂಜೆ 4 ಗಂಟೆಗೆ ಹಿರಿಯೂರಿಗೆ ಭಾರತ್ ಜೋಡೋ ಯಾತ್ರೆ ಆಗಮಿಸಲಿದ್ದು, ರಾಹುಲ್ ಯಾತ್ರೆಗೆ ಪ್ರಗತಿಪರ ಸಂಘಟನೆಗಳು ಸಾಥ್ ನೀಡಲಿವೆ.
ಚಿತ್ರದುರ್ಗದಲ್ಲಿ ಪ್ರತಿಷ್ಠಾಪನೆ ಮಾಡಿರುವ ಹಿಂದೂ ಮಹಾಗಣಪತಿ ವಿಸರ್ಜನೆ ಹಾಗೂ ಶೋಭಾಯಾತ್ರೆಗೂ ಮುನ್ನ ಈ ಬಾರಿ ಇನ್ನೊಂದು ವಿಶೇಷ ಇದೆ. ಅದು ನವದುರ್ಗೆಯರ ಸಂಗಮ ಮತ್ತು ಸಾಂಸ್ಕೃತಿಕ ವೈಭವ.. ಈ ಬಗ್ಗೆ ನಮ್ಮ ಚಿತ್ರದುರ್ಗ ಪ್ರತಿನಿಧಿ ಮಾಲತೇಶ್ ಅರಸ್ ಸಂಘಟಕರೊಂದಿಗೆ ಮಾಡಿರುವ ಚಿಟ್ ಚಾಟ್ ಇಲ್ಲಿದೆ.
ಪೋಕ್ಸೋ ಕೇಸ್ನಡಿ ಮುರುಘಾ ಶ್ರೀ ಬಂಧನ ವಿಚಾರ. ಮತ್ತೆ ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಿದ ಕೋರ್ಟ್. ಶ್ರೀಗಳನ್ನ 4 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ. ಬೆಂಗಳೂರಿಗೆ ಬೇಡ, ಜೈಲಿನಲ್ಲೇ ಚಿಕಿತ್ಸೆ ನೀಡಲು ತಾಕೀತು. ಸೆ. 6ರಂದು ಮಧ್ಯಾಹ್ನ 12ಕ್ಕೆ ಕೋರ್ಟ್ಗೆ ಹಾಜರಾಗಲು ಸೂಚನೆ
ಮುರುಘಾ ಶ್ರೀಗಳ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಎದೆನೋವಿನಿಂದ ಆಸ್ಪತ್ರೆಗೆ ಶಿಫ್ಟ್ ಆಗ್ತಿರೋ ಕಾರಣ ಅಭಿಮಾನಿಗಳಲ್ಲಿ ತಳಮಳ ಕೂಡ ಹೆಚ್ಚಾಗಿದೆ. ಇನ್ನೊಂದ್ ಕಡೆ ಕೋರ್ಟ್ ಮುಂದೆ ಹಾಜರು ವಿಚಾರವಾಗಿ ಹೈಡ್ರಾಮಾ ನಡೆದು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಶ್ರೀಗಳನ್ನು ಶಿಫ್ಟ್ ಮಾಡೋದು ರದ್ದಾಗಿದೆ.
ಮುರುಘಾ ಶ್ರೀ ಬಂಧನ ಆಗ್ತಿದ್ದಂತೆ ಚಿತ್ರದುರ್ಗದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮಠದ ಸುತ್ತ ಬ್ಯಾರಿಕೇಡ್ ಆಳವಡಿಸಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಚಿತ್ರದುರ್ಗಕ್ಕೆ ಪಕ್ಕದ ಜಿಲ್ಲೆಗಳಿಂದ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.