ಜಂಟಿ ಅಧಿವೇಶನ ಆರಂಭವಾಗಿ ಎರಡು ದಿನ ಆಗಿದೆ.. ಇಂದು ಮೂರನೇ ದಿನದ ಕಲಾಪ ನಡೆಯಲಿದೆ. ಇದು ಸರ್ಕಾರದ ಕೊನೆಯ ಅಧಿವೇಶನ ಆಗಿದೆ. ಆದ್ರೆ ಯಾವುದೇ ಗಂಭೀರ ವಿಷಯಗಳ ಬಗ್ಗೆ ಚರ್ಚೆಯಾಗದೆ ಸಮಯ ವ್ಯರ್ಥವಾಗುತಿದೆ. ಇದರ ನಡುವೆ ನಿನ್ನೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮತ್ತು ಬಿಜೆಪಿ ನಾಯಕರ ಮಹಾಭಾರತದ ಕಥೆಯ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಇಂದಿನಿಂದ ಹತ್ತು ದಿನಗಳ ಕಾಲ ಬಜೆಟ್ ಅಧಿವೇಶನ ಆರಂಭವಗಿದೆ. ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು ಸರ್ಕಾರದ ಸಾಧನೆಗಳನ್ನು ತೆರದಿಟ್ರು. ಆದ್ರೆ ಗವರ್ನರ್ ಭಾಷಣಕ್ಕೆ ವಿಪಕ್ಷ ನಾಯಕರು ಗೈರಾಗಿದ್ದು ಸದನವನ್ನು ಕಳೆಗುಂದುವಂತೆ ಮಾಡಿತ್ತು.
ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ ನಡೆಸುತ್ತಿದೆ. ಅಧಿವೇಶನದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಹೊಂದಾಣಿಕೆ ಮಾಡಿಕೊಂಡು ಯಾತ್ರೆ ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ. ಹಾಗೂ ಬಿಜೆಪಿ ಕೂಡ ವಿಜಯ ಸಂಕಲ್ಪ ಯಾತ್ರೆ, ಭೂತ್ ಅಭಿಯಾನ ಸೇರಿದಂತೆ ಅನೇಕ ಕಾರ್ಯಕ್ರಮ ನಡೆಸುತ್ತಿದೆ. ಜೊತೆಗೆ ಜೆಡಿಎಸ್ ಪಂಚ ರತ್ನ ಯಾತ್ರೆ ಕೂಡ ಸಾಗುತ್ತಿದ್ದೂ ಎಲ್ಲಾರು ಚುನಾವಣೆಯ ತಯಾರಿಯಲ್ಲಿದ್ದು, ಈ ಬಾರಿಯ ಅಧಿವೇಶನಕ್ಕೆ ಮೂರು ಪಕ್ಷದ ನಾಯಕರು ಗೈರಾಗುವ ಸಾಧ್ಯತೆ ಜಾಸ್ತಿಯಿದೆ.
ನಿಮ್ಮ ಆಶೀರ್ವಾದ ವ್ಯರ್ಥವಾಗಲು ನಾನು ಬಿಡುವುದಿಲ್ಲ
ಮೀಸಲಾತಿ ನನ್ನ ಅವಧಿಯಲ್ಲಿ ಆಗಿದ್ದು ನನ್ನ ಸೌಭಾಗ್ಯ
ರಾಜನಹಳ್ಳಿ ವಾಲ್ಮೀಕಿ ಜಾತ್ರೆಯಲ್ಲಿ ಬೊಮ್ಮಾಯಿ ಹೇಳೀಕೆ
ವಾಲ್ಮೀಕಿ ಸಮಾಜಕ್ಕೆ ನ್ಯಾಯ ಕೊಡುವುದೇ ನನ್ನ ಗುರಿ
ಮೀಸಲಾತಿಗಾಗಿ 257 ದಿನ ಪ್ರಸನ್ನಾನಂದ ಶ್ರೀ ಧರಣಿ ಕುಳಿತರು
ಇದಕ್ಕೆ ವಾಲ್ಮೀಕಿ ಸ್ವಾಮೀಜಿಯ ಕ್ಷಮೆ ಕೋರಿದ ಸಿಎಂ
ಈ ಮೂಲಕ ಅವರಿಗೆ ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆ ಕೇಳ್ತೀನಿ- ಸಿಎಂ
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಸಿಎಂ ವಾಗ್ದಾಳಿ
ಎರಡು ಸದನ ಉದ್ದೇಶಿಸಿ ರಾಜ್ಯಪಾಲರಿಂದ ಭಾಷಣ..!
ಬಿಜೆಪಿ ವಿರುದ್ಧ ಗುಡುಗಲು ಕೈ ಮತ್ತು ದಳ ಸಜ್ಜು..!
ಬಜೆಟ್ ಮೂಲಕ ಬಿಜೆಪಿ ಪ್ರಣಾಳಿಕೆ ತೋರಿಸಲು ಪ್ಲಾನ್
ಫೆ. 17ಕ್ಕೆ ಕಾಮನ್ ಮ್ಯಾನ್ನಿಂದ 2ನೇ ಬಾರಿ ಬಜೆಟ್
ಸಿಎಂ ಬಸವರಾಜ ಬೊಮ್ಮಯಿ ಸರ್ಕಾರದ ಕೊನೆಯ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಮೊದಲು ಜಂಟಿ ಅಧಿವೇಶನಕ ನಡೆಯಲಿದ್ದು, ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲ ಥಾವೋರ್ ಚಂದ್ ಗೇಹ್ಲೋಟ್ ಭಾಷಣ ಮಾಡಲಿದ್ದಾರೆ. ಇದರಲ್ಲಿ ಪ್ರಮುಖವಾಗಿ ಸರ್ಕಾರದ ಸಾಧನೆಯ ಪೂರ್ತಿ ವಿವರವನ್ನ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ.
ರಾಜ್ಯದ ಇತಿಹಾಸದಲ್ಲಿ 5 ವರ್ಷಗಳಲ್ಲಿ ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ಸಾಲ ಮಾಡಿರುವ ಖ್ಯಾತಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರದ್ದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
30ಕ್ಕೆ ಬೆಂಗಳೂರಿನಿಂದ ಹಾವೇರಿಗೆ ಪ್ರಯಾಣ. 12:00ಕ್ಕೆ ಬ್ಯಾಡಗಿ ತಾಲೂಕಿನಲ್ಲಿ ಉದ್ಘಾಟನಾ ಕಾರ್ಯಕ್ರಮ. ಶಿಡೇನೂರ ಶ್ರೀ ಮುಕ್ತೇಶ್ವರ ದೇವಸ್ಥಾನ ಕಾರ್ಯಕ್ರಮದಲ್ಲಿ ಭಾಗಿ. ಬಳಿಕ ಮಧ್ಯಾಹ್ನ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ. ಮಧ್ಯಾಹ್ನ 3 ಗಂಟೆಗೆ ಶಿಡೇನೂರಯಿಂದ ತಂಗಡಗಿಯತ್ತ ಪ್ರಯಾಣ.
ಅಕ್ರಮ, ಭ್ರಷ್ಟಾಚಾರಕ್ಕೆ ಜನ್ಮ ನೀಡಿದ್ದೇ ಕಾಂಗ್ರೆಸ್ ಎಂದು ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರಿಂದ ನಾವು ಪಾಠ ಕಲಿಯಬೇಕಿಲ್ಲ ಅಂತಾ ತಿರುಗೇಟು ನೀಡಿದ್ದಾರೆ.
ಸಿದ್ಧೇಶ್ವರ ಶ್ರೀಗಳಿಗೆ ಆಕ್ಸಿಜನ್ ಕಡಿಮೆ ಆಗಿದೆ ಎಂದಾಗ ನಾನು ಸಿಎಂ ಧಾವಿಸಿ ಬಂದಿದ್ದೇವೆ. ಶ್ರೀಗಳು ಚೆನ್ನಾಗಿಯೇ ಇದ್ರು. ಏನಾಗಿದೆ ಎಂದು ಪ್ರಧಾನಿ ಆತಂಕಕ್ಕೀಡಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಹೇಳಿದ್ದಾರೆ..
ಯಾವುದೂ ಸಮಸ್ಯೆಯಿಲ್ಲ. ಕೆಲವು ವಲಯಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದರೆ ಲಾಭವಿದೆ. ನಂದಿನಿ ಅಥವಾ ಅಮುಲ್ ತಾಂತ್ರಿಕವಾಗಿ ಮುಂದಿದ್ದರೆ ವಿನಿಯಮ ಮಾಡಿಕೊಳ್ಳಬಹುದು. ಆಡಳಿತಾತ್ಮಕ ಕ್ರಮಗಳನ್ನು ವಿನಿಮಯ ಮಾಡಿಕೊಳ್ಳಿ ಎಂದು ಅವರು ಹೇಳಿರುವುದು. ಅದಕ್ಕೆ ತಪ್ಪು ಅರ್ಥ ಕಲ್ಪಿಸುವ ಅಥವಾ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ನಾನು ಮುಖ್ಯಮಂತ್ರಿಯಾಗಿ ಹೇಳುತ್ತಿದ್ದೇನೆ, ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ ಎಂದರು.
ಮಾಜಿ ಸಚಿವ ಈಶ್ವರಪ್ಪ ಮಾತಾನಾಡಿ, ಪಕ್ಷದ ಮೇಲೆ ಸಿಎಂ ಬೊಮ್ಮಾಯಿ ಮೇಲೆ ಸಂಪೂರ್ಣ ವಿಶ್ವಾಸವಿದೆ. ನಿನ್ನೆ ರಾತ್ರಿ ನಾನು ರಮೇಶ್ ಜಾರಕಿಹೊಳಿ ಸಿಎಂ ಬೊಮ್ಮಾಯಿ ಅವರನ್ನ ಭೇಟಿಯಾಗಿ ಮಾತಾಡಿದ್ದೇವೆ. ಅವರು ಹೇಳಿದ್ದಾರೆ ಈ ವಿಚಾರವನ್ನ ವರಿಷ್ಠರಿಗೆ ತಿಳಿಸಿದ್ದೇನೆ ಎಂದು. ಇನ್ನೊಂದು ಬಾರಿ ದೆಹಲಿ ಹೋಗಿ ನಿಮಗೆ ತಿಳಿಸ್ತೀನಿ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಅಂತಾ ಸಿಎಂ ಭೇಟಿ ಬಗ್ಗೆ ವಿವರಿಸಿದರು.
ಕೋವಿಡ್ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಕೋವಿಡ್ ಬಗ್ಗೆ ಸಾರ್ವಜನಿಕರು ಭಯ ಪಡಬೇಕಿಲ್ಲ. ತಜ್ಞರ ಸಲಹೆಯನ್ನು ಪಾಲನೆ ಮಾಡಿದರೆ ಕೋವಿಡ್ ಸಂಪೂರ್ಣ ನಿಯಂತ್ರಣ ಮಾಡಬಹುದು ಎಂದು ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.