ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮುಗ್ಗರಿಸಿರುವ ಕಾಂಗ್ರೆಸ್ ಮುಖಂಡೆ ಅಲ್ಕಾ ಲಂಬಾ ಟ್ವೀಟ್ ಮಾಡುವ ಮೂಲಕ ಫಲಿತಾಂಶವನ್ನು ಒಪ್ಪಿಕೊಂಡಿದ್ದಾರೆ. ಆದರೆ, ತಮ್ಮ ಸೋಲನ್ನು ಸ್ವೀಕರಿಸಲು ನಿರಾಕರಿಸಿರುವ ಅವರು ಹಿಂದೂ-ಮುಸ್ಲಿಂ ಮತಗಳು ಸಂಪೂರ್ಣ ದ್ರುವೀಕರಣಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ ಇದುವರೆಗೆ ಬಂದ ಫಲಿತಾಂಶದ ಪ್ರಕಾರ, ದೆಹಲಿಯಲ್ಲಿ ಸತತ ಮೂರನೇ ಬಾರಿಗೆ ಆಮ್ ಆದ್ಮಿ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರುವ ಎಲ್ಲ ಲಕ್ಷಣಗಳು ನಿಚ್ಚಳವಾಗಿವೆ.
ದೆಹಲಿ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಮಂಗಳವಾರ ದೆಹಲಿಯಲ್ಲಿ ನಡೆದಿರುವ ಮತ ಎಣಿಕೆ ಪ್ರಕ್ರಿಯೆಯ ವೇಳೆ ಮತ್ತೊಮ್ಮೆ EVM ವಿಚಾರವಾಗಿ ಹೇಳಿದೆ ನೀಡಿದ್ದಾರೆ. ಆರಂಭಿಕ ಟ್ರೆಂಡ್ಸ್ ಗಳಲ್ಲಿ ಆಮ್ ಆದ್ಮಿ ಪಕ್ಷ ಮುಂಚೂಣಿಯಲ್ಲಿ ಇದ್ದರೆ, ಭಾರತೀಯ ಜನತಾ ಪಕ್ಷ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಪಕ್ಷ ಇದುವರೆಗೆ ಒಂದೂ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿಲ್ಲ. ಈ ಸಂದರ್ಭದಲ್ಲಿ ಮಾತನಾಡಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ, 'EVM ಟ್ಯಾಂಪರ್ ಪ್ರೂಫ್ ಆಗಿಲ್ಲ ಮತ್ತು ಹಲವು ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಇವುಗಳನ್ನು ಬಳಸಲಾಗುವುದಿಲ್ಲ' ಎಂದಿದ್ದಾರೆ.
ಬೆಳಿಗ್ಗೆ 10 ಗಂಟೆಯವರೆಗಿನ ಪ್ರವೃತ್ತಿಗಳ ಪ್ರಕಾರ, ದೆಹಲಿಯ ಹೈಪ್ರೊಫೈಲ್ ಕ್ಷೇತ್ರಗಳಲ್ಲಿ ಯಾವ ಕ್ಷೇತ್ರದಲ್ಲಿ, ಯಾವ ಪಕ್ಷ ಮುನ್ನಡೆ ಕಾಯ್ದುಕೊಂಡಿದೆ ಎಂದು ನಾವು ನಿಮಗೆ ಹೇಳುತ್ತಿದ್ದೇವೆ.
Delhi Assembly Election 2020 : ದೆಹಲಿ ವಿಧಾನಸಭಾ ಚುನಾವಣೆಯ ಫಲಿತಾಂಶ ಬರತೊಡಗಿದೆ. ಎಎಪಿ-ಬಿಜೆಪಿ ನಡುವೆ ಜಿದ್ದಾಜಿದ್ದಿ ಇರುವುದನ್ನು ಪ್ರವೃತ್ತಿಗಳು ಸೂಚಿಸುತ್ತವೆ ಎಂದು ಮನೋಜ್ ತಿವಾರಿ ಹೇಳಿದರು. ಇನ್ನೂ ಸಮಯವಿದೆ. ನಾವು ಭರವಸೆ ಹೊಂದಿದ್ದೇವೆ. ಫಲಿತಾಂಶ ಏನೇ ಇರಲಿ, ನಾನು ಬಿಜೆಪಿಯ ರಾಜ್ಯ ಘಟಕದ ಮುಖ್ಯಸ್ಥನಾಗಿ ಜವಾಬ್ದಾರನಾಗಿರುತ್ತೇನೆ ಎಂದವರು ಹೇಳಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ ಕ್ಷಣದಿಂದ ಕ್ಷಣಕ್ಕೆ ಬಹಳ ಕುತೂಹಲಕಾರಿಯಾಗುತ್ತಿದ್ದು, ಓಖ್ಲಾದಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ. ದೇಶದ ಗಮನ ಸೆಳೆಯುವ ಶಹೀನ್ ಬಾಗ್ (ಶಾಹೀನ್ ಬಾಗ್) ಈ ಅಸೆಂಬ್ಲಿ ಸೀಟಿನಲ್ಲಿ ಬರುತ್ತದೆ.
ವ್ಯಕ್ತಿಯೊಬ್ಬರು ತಮ್ಮ ಮುದ್ದಾದ ಮಗುವಿಗೆ ದೆಹಲಿ ಮುಖ್ಯಮಂತ್ರಿ 'ಅರವಿಂದ್ ಕೇಜ್ರಿವಾಲ್' ರೀತಿ ಉಡುಪು ಧರಿಸಿದ್ದಾರೆ. ಕೇಜ್ರಿವಾಲ್ ಶೈಲಿಯಲ್ಲಿ ಮಫ್ಲರ್ ಧರಿಸಿದ ಈ ಮಗು ಎಎಪಿ ಕ್ಯಾಪ್ನಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಜಾರಿಗೆ ತಂದಿರುವ ಹೊಸ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯಿಂದಾಗಿ ತಮ್ಮ ಪಕ್ಷ ಬಿಜೆಪಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಅಪಾಯವನ್ನು ಎದುರಿಸುತ್ತಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಹೇಳಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ ಶನಿವಾರ (ಫೆಬ್ರವರಿ 8) ನಡೆಯಲಿದೆ. ಅದಕ್ಕೆ ಒಂದು ದಿನ ಮುಂಚಿತವಾಗಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ (OSD) ಬಂಧನವಾಗಿದೆ.
ಬಿಜೆಪಿ ಸಲ್ಲಿಸಿದ ದೂರಿಗೆ ಪ್ರತಿಕ್ರಿಯೆಯಾಗಿ ಮತದಾನ ಸಮಿತಿ ನೋಟಿಸ್ ನೀಡಿದೆ. ಜನವರಿ 31 ರೊಳಗೆ ತಮ್ಮ ಉತ್ತರವನ್ನು ಸಲ್ಲಿಸುವಂತೆ ಎಎಪಿ ಮುಖ್ಯಸ್ಥರಿಗೆ ಮತದಾನ ಸಮಿತಿ ನಿರ್ದೇಶನ ನೀಡಿದೆ.
ನಾವು ಮತ ಚಲಾಯಿಸಬೇಕೇ ಅಥವಾ ಬೇಡವೇ ಎಂಬುದನ್ನು ನೀವು ನಿರ್ಧರಿಸಬೇಕು. ಆದರೆ ನಮ್ಮ ಉದ್ದೇಶಗಳನ್ನು ಅನುಮಾನಿಸಬೇಡಿ ಎಂದು ನನ್ನ ಮುಸ್ಲಿಂ ಸಹೋದರರಿಗೆ ಹೇಳಲು ಬಯಸುತ್ತೇನೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ದೇಶದ ಮುಸ್ಲಿಮರಿಗೆ ಮನವಿ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.