ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ಪೊಲೀಸರಿಗೆ ಸಿಕ್ಕೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಒಂದು ಲಕ್ಷ ಮೌಲ್ಯದ ಗಾಂಜಾ, 9 ಮೊಬೈಲ್, ಮೂರು ಬೈಕ್, ಎರಡು ಸಾವಿರ ಹಣ ಒಟ್ಟು 4.52 ಸಾವಿರ ಮೌಲ್ಯದ ಸಾಮಾಗ್ರಿ ಜಪ್ತಿ ಮಾಡಲಾಗಿದೆ.
Drug Peddlers Arrested: ಗಿರಿನಗರ ಪೊಲೀಸರು ಆರೋಪಿಗಳ ಬಂಧನಕ್ಕೆ ತೆರಳಿದಾಗ ಪ್ರತಿರೋಧ ಎದುರಿಸಿದ್ದರು. ಬಂಧಿತರ ಕುಟುಂಬ ಸದಸ್ಯರು ತಮ್ಮನ್ನು ಯಾರೋ ದುಷ್ಕರ್ಮಿಗಳು ಅಪಹರಣ ಮಾಡಲು ಯತ್ನಿಸುತ್ತಿದ್ದಾರೆ ಅಂತಾ ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದರಂತೆ.
ತಮಿಳುನಾಡು ಮೂಲದ ಶ್ರೀನಿವಾಸ್ ಹಾಗೂ ಸತೀಶ್ ಬಂಧಿತರು. ಈ ಇಬ್ಬರು ತರಗುಪೇಟೆಯಲ್ಲಿ ಮೂಟೆ ಹೋರುವ ಕೆಲಸ ಮಾಡುತ್ತಿದ್ದರು. ಮೃತ ರಮೇಶ್ ನೇಪಾಳ ಮೂಲದವನಾಗಿದ್ದು ಈತನ ಮಾವ ರತನ್ ತೋಟಗಳಿಗೆ ಗ್ರೀನ್ ಮೆಸ್ ಹಾಕುವ ವ್ಯವಹಾರ ಮಾಡಿಕೊಂಡಿದ್ದರು. ಈತನ ಬಳಿ ರಮೇಶ್ ಕೆಲಸ ಮಾಡಿಕೊಂಡಿದ್ದ.
ಬೆಂಗಳೂರಿನ ಹೊರವಲಯ ಆನೇಕಲ್ ನಲ್ಲಿ ಇಬ್ಬರು ಗಾಂಜಾ ಮಾರಾಟಗಾರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಆನೇಕಲ್ ಪಟ್ಟಣದ ವೀವರ್ಸ್ ಕಾಲೋನಿ ನಿವಾಸಿಗಳಾದ ಸೋಮಶೇಖರ್(27), ರಾಘವೇಂದ್ರ(25) ಎಂದು ಗುರುತಿಸಲಾಗಿದೆ.
ರಾಜ್ಯಕ್ಕೆ ಉದ್ಯೋಗ ಅರಸಿಕೊಂಡು ಬಂದ ನೆರೆ ರಾಜ್ಯದ ಖದೀಮರು ಇದೀಗ ಗಿರಿನಾಡಿನಲ್ಲಿ ಗಲ್ಲಿ ಗಲ್ಲಿಗಳಲ್ಲಿ ಗಾಂಜಾ ನಶೆ ಹಬ್ಬುತ್ತಿದ್ದಾರೆ. ಹೊಟ್ಟೆ ಪಾಡಿಗಾಗಿ ರಾಜ್ಯ ಬಿಟ್ಟು ಬಂದವರಿಂದ ರಾಜ್ಯದ ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ದಂಧೆ ಶುರುಮಾಡಿಕೊಂಡಿದ್ದಾರೆ.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯಲ್ಲಿ ಗಾಂಜಾ ಬೆಳೆಯನ್ನು ಕೃಷಿಯಂತೆ ಬೆಳೆದು, ಅದನ್ನು ಒಣಗಿಸಿದ ನಂತರ ಪ್ಯಾಕ್ ಮಾಡಿ ವ್ಯವಸ್ಥಿತವಾಗಿ ನೆಲಮಂಗಲದ ಸುತ್ತಮುತ್ತ ಮಾರಾಟ ಮಾಡುತ್ತಿದ್ದ ಜಾಲಕ್ಕಾಗಿ ಬಲೆ ಬೀಸಿದ್ದ ತ್ಯಾಮಗೊಂಡ್ಲು ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.