Chamarajanagar: ಚಾಮರಾಜನಗರ ಜಿಲ್ಲೆಯಲ್ಲಿ ಕರಿಕಲ್ಲು ಮತ್ತು ಬಿಳಿಕಲ್ಲು ಕ್ವಾರಿಗಳು ನಡೆಯುತ್ತಿದ್ದು, ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪಗಳಿವೆ.
Akhilesh Uadav CBI Summon: ಸಿಬಿಐ ಅಖಿಲೇಶ್ ಯಾದವ್ ಅವರಿಗೆ ಸಮನ್ಸ್ ಕಳುಹಿಸಿದ ನಂತರ, ಯುಪಿ ರಾಜಕೀಯ ಬಿಸಿ ಹೆಚ್ಚಾಗಿದೆ. ಕೇಂದ್ರೀಯ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಂಡಿದೆ ಎಂದು ಇಂಡಿಯಾ ಮೈತ್ರಿಕೂಟದಲ್ಲಿ ಸೇರ್ಪಡೆಗೊಂಡಿರುವ ಎಲ್ಲಾ ಘಟಕಗಳು ಆರೋಪಿಸುತ್ತಿದೆ.
ಅಕ್ರಮ ಮಣ್ಣು ಗಣಿಗಾರಿಕೆಗೆ ಹೊಂಡದಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಶ್ಯಾಗೋಟಿ ಗ್ರಾಮದಲ್ಲಿ ನಡೆದಿದೆ.ಮೃತಪಟ್ಟಿರುವ ಯುವಕರನ್ನು ಬಸವರಾಜ್ (17) ಹಾಗೂ ಈರಣ್ಣ (17) ಎಂದು ಗುರುತಿಸಲಾಗಿದೆ.
ಒಂದು ತಿಂಗಳ ಕಾಲ ಚಾಮರಾಜನಗರದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಿ ಡಿಸಿ, ಭೂ ವಿಜ್ಞಾನಿಗಳ ತಂಡ ತಪಾಸಣೆ ಮಾಡಿದ ಬಳಿಕವಷ್ಟೇ ಕ್ವಾರಿ ನಡೆಸಲು ಅವಕಾಶ ಎಂದು ಗುಡುಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಎಚ್ಚರಿಕೆ ಸುದ್ದಿಗೋಷ್ಠಿಗಷ್ಟೇ ಸೀಮಿತವಾಯಿತೇ ಎಂಬ ಪ್ರಶ್ನೆ ಉದ್ಭವಿಸಿದೆ.
ಶಿವಮೊಗ್ಗದಲ್ಲಿ ಸ್ಪೋಟ ಸಂಭವಿಸಿದಾಗಲೇ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದರೆ ಹಿರೇನಾಗವಲ್ಲಿಯಲ್ಲಿ ಇನ್ನೊಂದು ಸ್ಪೋಟ ಸಂಭವಿಸಿ, ಅಮಾಯಕ ಕಾರ್ಮಿಕರು ಸಾಯುತ್ತಿರಲಿಲ್ಲ. ಈ ಎರಡೂ ಘಟನೆಗಳಿಗೆ ಸರ್ಕಾರದ ನಿರ್ಲಕ್ಷ ಧೋರಣೆ ನೇರ ಕಾರಣ- ಸಿದ್ದರಾಮಯ್ಯ
'ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರು ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಬಹುದು ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಅಕ್ರಮ ಗಣಿಗಾರಿಕೆಯೇ ಅಪರಾಧ. ಅದಕ್ಕೆ ಏನು ಶಿಕ್ಷೆ ? ಅರ್ಜಿ ಹಾಕಿಕೊಂಡು ಅಕ್ರಮವನ್ನು ಸಕ್ರಮ ಮಾಡಿಕೊಳ್ಳಿ ಎಂದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಹೇಳಬಹುದೇ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.