ಜೂನ್ 28ರಂದು ಹಾಡುಹಗಲೇ ಆರೋಪಿಗಳು ಹಿಂದೂ ವ್ಯಕ್ತಿ ಕನ್ಹಯ್ಯಾ ಲಾಲ್ ಅವರ ಶಿರಚ್ಛೇದ ಮಾಡಿದ್ದರು. ಉದಯಪುರ ಹತ್ಯೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಬಿಜೆಪಿ ನಾಯಕ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿದ್ದಕ್ಕೆ ಟೈಲರ್ ಕನ್ಹಯ್ಯ ಲಾಲ್ ಅವರನ್ನು ಹತ್ಯೆ ಮಾಡಲಾಗಿತ್ತು.
ಕನ್ಹಯ್ಯನ ಹತ್ಯೆಗೆಂದು ಮೊಹಮ್ಮದ್ ಗೌಸ್ ಹರಿತವಾದ ಆಯುಧವನ್ನು ತಯಾರಿಸಿದ್ದಾನೆ. ಈ ಆಯುಧವನ್ನು ಎಸ್ಕೆ ಇಂಜಿನಿಯರಿಂಗ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗಿದೆ. ಈ ಹತ್ಯೆಯ ಉದ್ದೇಶವೆಂದರೆ, ಜನರಲ್ಲಿ ಭಯವನ್ನು ಸೃಷ್ಟಿಸುವುದಾಗಿತ್ತು.
ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ತನಿಖೆಯನ್ನು ಮುಂದುವರೆಸಿರುವ ಎನ್ಐಎ ತಂಡ, ಇಂದು ಜೈಪುರದ ವಿಶೇಷ ಎನ್ಐಎ ನ್ಯಾಯಾಲಯದಲ್ಲಿ ಆರೋಪಿಗಳ ಪ್ರೊಡಕ್ಷನ್ ವಾರೆಂಟ್ಗಾಗಿ ಅರ್ಜಿ ಸಲ್ಲಿಸಲಿದೆ.
ಈ ಇಡೀ ಘಟನೆಯಲ್ಲಿ ಪಾಕಿಸ್ತಾನ ಭಾಗಿಯಾಗಿರುವುದು ಬಯಲಾಗಿದೆ. ವಾಸ್ತವವಾಗಿ, ಈ ಇಬ್ಬರೂ ಆರೋಪಿಗಳು ಪಾಕಿಸ್ತಾನಲ್ಲಿರುವ ಕೆಲವು ಜನರೊಂದಿಗೆ ಸಂಪರ್ಕದಲ್ಲಿದ್ದರು. ಅಷ್ಟೇ ಅಲ್ಲ, ಮೂಲಗಳ ಪ್ರಕಾರ ಇಬ್ಬರೂ ಆರೋಪಿಗಳು ಕನ್ಹಯ್ಯಾ ಲಾಲ್ ಹತ್ಯೆಗೆ ಐಸಿಸ್ನ ವೀಡಿಯೋಗಳನ್ನು ನೋಡಿದ್ದರು ಎಂದು ಹೇಳಲಾಗುತ್ತಿದೆ.
ವರದಿಯಲ್ಲಿ ಕನ್ಹಯ್ಯಾ ಕತ್ತಿನ ಮೇಲೆ 7-8 ಭಾರಿ ಇರಿತ, ದೇಹದ ಮೇಲೆ 2 ಡಜನ್ಗೂ ಹೆಚ್ಚು ಗಾಯಗಳು ಪತ್ತೆಯಾಗಿವೆ. ಮಂಗಳವಾರ, ಕನ್ಹಯ್ಯಾ ಲಾಲ್ ಎಂಬ ಟೈಲರ್ ಅನ್ನು ಹಾಡು ಹಗಲಿನಲ್ಲಿ ತಾಲಿಬಾನ್ ರೀತಿಯಲ್ಲಿ ಹತ್ಯೆ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.