ರಾಜ್ಯದಾದ್ಯಂತ ಮತದಾರರು ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ. ಹಲವು ದಿನಗಳಿಂದ ಮತದಾರರನ್ನು ಸೆಳೆಯಲು ಕಸರತ್ತು ನಡೆಸಿದ್ದ ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿದ್ರೆ. ನಾಳೆ ಹೊರ ಬೀಳುವ ರಿಸಲ್ಟ್ ಲೆಕ್ಕಚಾರ ಚರ್ಚೆಗಳು ಶುರುವಾಗಿದೆ.
ಸರ್ವೇಯಲ್ಲಿ ಅತಂತ್ರ ಫಲಿತಾಂಶ ಹಿನ್ನೆಲೆ ಅಂತಹ ಪರಿಸ್ಥಿತಿ ಬಂದರೆ JDS ಜೊತೆ ಬಿಜೆಪಿ ಒಪ್ಪಂದ ಸಿದ್ಧ. ದಾವಣಗೆರೆಯಲ್ಲಿ ಎಂ.ಪಿ. ರೇಣುಕಾಚಾರ್ಯ ಹೇಳಿಕೆ. ಆದ್ರೆ ಇಲ್ಲಿವರೆಗೂ JDSನೊಂದಿಗೆ ಒಳ ಒಪ್ಪಂದ ಆಗಿಲ್ಲ. ನಾವು ಈಗಲೇ ಸೋಲೊಪ್ಪಿಕೊಳ್ಳಲು ಸಿದ್ಧರಿಲ್ಲ. ನಮಗೆ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆ ಇದೆ. ಅಂತಿಮ ಫಲಿತಾಂಶದ ಮೇಲೆ ಎಲ್ಲವೂ ಡಿಪೆಂಡ್ ಆಗಿದೆ.
ಅಭ್ಯರ್ಥಿಗಳು ವಿಶ್ರಾಂತಿಯಲ್ಲಿದ್ರೆ ಪೊಲೀಸರು ಮಾತ್ರ ನಿದ್ದೆಗೆಟ್ಟು ಪಹರೆಯಲ್ಲಿದ್ದಾರೆ. ಅರೆ ಯಾಕೆ ಅಂದ್ರಾ..? ಕಾರಣ ಇಷ್ಟೇ.. ರಾಜ್ಯಾದ್ಯಂತ ಮತದಾರ ಬರೆದಿರೋ ಅಭ್ಯರ್ಥಿಗಳ ಹಣೆ ಬರಹವಿರೋ ಮತಯಂತ್ರಗಳು ಸ್ಟ್ರಾಂಗ್ರೂಮ್ನಲ್ಲಿವೆ. ಹೀಗಾಗಿ ಏಳು ಸುತ್ತಿನ ಕೋಟೆ ರೀತಿ ಭದ್ರತೆ ಕೈಗೊಳ್ಳಲಾಗಿದೆ.
ರಾಜ್ಯದ ಗದ್ದುಗೆ ಏರಲು ಸಿದ್ಧವಾಗ್ತಿದೆ ಕಾಂಗ್ರೆಸ್ ರಣತಂತ್ರ. ಹೆಚ್ಚಿನ ಸಮೀಕ್ಷೆಗಳಲ್ಲಿ ಅತಂತ್ರ ಫಲಿತಾಂಶ ಹಿನ್ನೆಲೆ ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಮುಂದಾದ ಕಾಂಗ್ರೆಸ್. ತಡರಾತ್ರಿ ಝೂಮ್ ಮೀಟಿಂಗ್ ನಡೆಸಿದ ʻಕೈʼ ನಾಯಕರು. ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಜೊತೆಗೂ ಝೂಮ್ ಮೀಟಿಂಗ್. ಸುರ್ಜೇವಾಲ, ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಮೀಟಿಂಗ್. ಸ್ಪಷ್ಟ ಬಹುಮತ ಬರದಿದ್ದರೆ ಗೆದ್ದವರನ್ನು ಹಿಡಿದಿಟ್ಟುಕೊಳ್ಳಲು ಮೀಟಿಂಗ್.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.