Karnataka Assembly Election: ಬಿಜೆಪಿಗರಿಗೆ 40 ಎಂಬ ಸಂಖ್ಯೆ ಮೇಲೆ ಬಲು ಪ್ರೀತಿ, 40 ಅಂದರೆ ಇಷ್ಟ. ಆದ್ದರಿಂದ 40 ಸ್ಥಾನಗಳನ್ನು ಮಾತ್ರ ಈ ಚುನಾವಣೆಯಲ್ಲಿ ಅವರಿಗೆ ಕೊಡಿ, ನಮಗೆ 150 ಸ್ಥಾನ ಕೊಡಿ, ಅಲ್ಪ ಬಹುಮತದ ಸರ್ಕಾರ ಬಂದರೆ 40% ಹಣದಿಂದ ಕಳ್ಳತನದಿಂದ ಅಧಿಕಾರ ಹಿಡಿಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಬೆಳಗಾವಿಯಲ್ಲಿ ಇಂದು ನಟ ಕಿಚ್ಚ ಸುದೀಪ್ ಕ್ಯಾಂಪೇನ್. BJP ಅಭ್ಯರ್ಥಿಗಳ ಪರ ಸ್ಯಾಂಡಲ್ವುಡ್ ಬಾದ್ಶಾ ಪ್ರಚಾರ. ಕಿತ್ತೂರು ಅಭ್ಯರ್ಥಿ ಮಾಂತೇಶ್ ದೊಡ್ಡಗೌಡರ್ ಪರ ರೋಡ್ ಶೋ. ಮಧ್ಯಾಹ್ನ 1 ಗಂಟೆಗೆ ಬೆಳಗಾವಿ ಗ್ರಾಮೀಣದಲ್ಲಿ ಮತಯಾಚನೆ. ನಾಗೇಶ್ ಮನ್ನೊಳಕರ್ ಪರ ಸುಳೇಬಾವಿಯಲ್ಲಿ ರೋಡ್ ಶೋ.
ಚಾಮರಾಜನಗದಲ್ಲಿಂದು ರಾಹುಲ್ ಗಾಂಧಿ ಭರ್ಜರಿ ಪ್ರಚಾರ. ಒಂದೇ ದಿನ.. ನಾಲ್ಕು ಕ್ಷೇತ್ರ.. ರಾಹುಲ್ ಗಾಂಧಿ ಮತಶಿಕಾರಿ. ರಾಹುಲ್ ಗಾಂಧಿಗೆ ಮಲ್ಲಿಕಾರ್ಜುನ್ ಖರ್ಗೆ.. ಸ್ಥಳೀಯರ ಸಾಥ್. ಬೆಳಗ್ಗೆ ಹನೂರು.. ಮಧ್ಯಾಹ್ನ ಕೊಳ್ಳೇಗಾಲ.. ಚಾಮರಾಜನಗರ, ಸಂಜೆ 6 ಗಂಟೆಗೆ ಗುಂಡ್ಲುಪೇಟೆಯಲ್ಲಿ ರಾಹುಲ್ ಮತಯಾಚನೆ. ಪ್ರಚಾರದ ಜೊತೆ ಚಾಮರಾಜನಗರದಲ್ಲಿ ರಾಹುಲ್ ಸಮಾವೇಶ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಪಟ್ರೇನಹಳ್ಳಿ ಗ್ರಾಮ ಪಂಚಾಯಿತಿಯ ಅಣಕನೂರು ಗ್ರಾಮದಲ್ಲಿ ಸ್ಯಾಂಡಲ್ವುಡ್ ನಟಿ ಅನು ಪ್ರಭಾಕರ್, ಡಾ. ಕೆ ಸುಧಾಕರ್ ಅವರ ಪರ ಮತಯಾಚನೆ ಮಾಡಿದರು. ಚಿಕ್ಕಬಳ್ಳಾಪುರ ನಗರದಲ್ಲಿ ಸ್ಯಾಂಡಲ್ವುಡ್ ನಟ ದಿಗಂತ್, ಡಾ. ಕೆ ಸುಧಾಕರ್ ಅವರ ಪರ ಮತಯಾಚನೆ ಮಾಡಿದರು.
ಸಕ್ಕರೆನಾಡು ಮಂಡ್ಯದಲ್ಲಿ ರಂಗೇರಿದ ರಾಜಕೀಯ ಅಖಾಡ. ಸಕ್ಕರೆನಾಡಿನ ಅಖಾಡಕ್ಕೆ ಸಿಎಂ ಬೊಮ್ಮಾಯಿ ಎಂಟ್ರಿ. ಬಿಜೆಪಿ ಅಭ್ಯರ್ಥಿಗಳ ಸಿಎಂ ಬೊಮ್ಮಾಯಿ ಭರ್ಜರಿ ಪ್ರಚಾರ. ಮಂಡ್ಯ ಮತ್ತು ಮದ್ದೂರಿನಲ್ಲಿ ರೋಡ್ ಶೋ, ಸಾರ್ವಜನಿಕ ಸಭೆ. ಸಂಜೆ 5 ಗಂಟೆಗೆ ಮಂಡ್ಯ, 6 ಗಂಟೆಗೆ ಮದ್ದೂರಿನಲ್ಲಿ ಪ್ರಚಾರ.
ರಂಗೇರಿದ ಬೆಳಗಾವಿ ಉತ್ತರ ವಿಧಾನಸಭಾ ಚುನಾವಣಾ ಅಖಾಡ. ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಪ್ರಚಾರ. ಭರ್ಜರಿ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಆಸಿಫ್ ಸೇಠ್. ಆಸಿಫ್ ಸೇಠ್ಗೆ ಗ್ರ್ಯಾಂಡ್ ವೆಲ್ಕಮ್ ಮಾಡಿಕೊಂಡ ಜನರು. ಆಸಿಫ್ ಸೇಠ್ಗೆ ಸಾಥ್ ನೀಡಿದ ಮಾಜಿ ಶಾಸಕ ಫಿರೋಜ್ ಸೇಠ್. ಆಸಿಫ್ ಸೇಠ್ ಸಹೋದರ ಫಿರೋಜ್ ಸೇಠ್ನಿಂದ ಪ್ರಚಾರ.
ನನ್ನ ಮತ್ತು ನನ್ನ ಸಂಬಂಧಿಕರ ಮೇಲೆ ರೇಡ್ ಹುನ್ನಾರ ನಡೆದಿದೆ. ಬೆಳಗಾವಿಯ 50 ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ರೇಡ್ಗೆ ಪ್ಲ್ಯಾನ್ ನಡೆಸಲಾಗಿದೆ ಎಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೊಸ ಬಾಂಬ್ ಸಿಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.