ಶಿಡ್ಲಘಟ್ಟ ಸ್ವಾಭಿಮಾನಿ ಪರ್ವ ಶುರುವಾಗಿದೆ.. ಶಿಡ್ಲಘಟ್ಟ ನಗರ ಮತ್ತು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಒಂದು ಸಾವಿರಕ್ಕೂ ಅಧಿಕ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಬಿಜೆಪಿ ಪಕ್ಷ ತ್ಯಜಿಸಿ ಸ್ಥಳೀಯ ಜೆಡಿಎಸ್ ಅಭ್ಯರ್ಥಿ ಬಿ ಎನ್ ರವಿಕುಮಾರ್ ನೇತೃತ್ವದಲ್ಲಿ JDS ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಮಾಜಿ ಸಚಿವರು ಹಾಗೂ ಕಲಘಟಗಿ - ಅಳ್ನಾವರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂತೋಷ್ ಲಾಡ್ ಅವರು ಹುಲಗಿನಕೊಪ್ಪ, ಸಂಗಟಿಕೊಪ್ಪ ಹಾಗೂ ಜುಂಜನಬೈಲ್ನಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ್ ಲಾಡ್, ನನ್ನ ಅಧಿಕಾರಾವಧಿಯಲ್ಲಿ ಪ್ರತಿಯೊಂದು ತಾಂಡಾ ಹಾಗೂ ಗ್ರಾಮಗಳ ಅಭಿವೃದ್ಧಿಯಾಗಿದೆ. ಅಧಿಕಾರ ಇಲ್ಲದೇ ಇದ್ದಾಗಲೂ ಕ್ಷೇತ್ರದ ಜನರಿಗಾಗಿ ಹಲವಾರು ಸಾಮಾಜಿಕ ಸೇವಾ ಕಾರ್ಯ ಕೈಗೊಂಡಿದ್ದೆ ಅಂತಾ ಹೇಳಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್ ಹಣಿಯಲು ಬಿಜೆಪಿ ರಣತಂತ್ರ ಹೆಣೆದಿದೆ. ಬಿಜೆಪಿ ಪ್ರಮುಖರ ಜೊತೆ ಅಮಿತ್ ಶಾ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ನನ್ನ ನಾಮಪತ್ರ ಕ್ರಮಬದ್ಧವಾಗಿದೆ. ಯಾವುದೇ ತೊಂದರೆ ಇಲ್ಲ. ಎಲ್ಲವನ್ನೂ ಚುನಾವಣಾ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಇಲ್ಲಸಲ್ಲದವರ ಆರೋಪಕ್ಕೆ ಉತ್ತರ ಕೊಡಲಾಗಿದೆ ಎಂದು ಹುಬ್ಬಳ್ಳಿಯಲ್ಲಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕ್ರಾಂತಿಕಿರಣ್ ಹೇಳಿದ್ದಾರೆ
Karnataka Election Photos : ಡಿ.ಕೆ ಶಿವಕುಮಾರ್ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಡಿಕೆಶಿ ನಾಮಪತ್ರವನ್ನು ರಾಜ್ಯ ಚುನಾವಣಾ ಪ್ರಾಧಿಕಾರ ಅಂಗೀಕಾರಮಾಡಿದೆ. ಇದರಿಂದ ಐಟಿ, ಇಡಿ ಸೇರಿದಂತೆ ಯಾವುದೇ ದಾಳಿ ಭಯ ಡಿಕೆಶಿಗೆ ಇಲ್ಲ. ನಿರ್ಭಯವಾಗಿ ನಿರ್ಭೀತಿಯಿಂದ ಚುನಾವಣಾ ಕಾರ್ಯಗಳಲ್ಲಿ ಭಾಗಿಯಾಗಬಹುದು.
ಶಾಸಕ ರೇಣುಕಾಚಾರ್ಯ ವಿರುದ್ಧ ಹೆಸರು ಹೇಳದೆ ಕಾಂಗ್ರೆಸ್ ಅಭ್ಯರ್ಥಿ ಡಿ. ಜಿ. ಶಾಂತನಗೌಡ ಸಿಡಿ ಬಾಂಬ್ ಸಿಡಿಸಿದ್ದಾರೆ. ಅಲ್ಲದೆ, ರೇಣುಕಾಚಾರ್ಯ ಅವರ ಸಿಡಿ ಇದ್ದು, ಅದನ್ನು ಸ್ಟೇ ವೆಕೆಟ್ ಆದ ಮೇಲೆ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಡಿಕೆಶಿ ನಾಮಪತ್ರವನ್ನು ರಾಜ್ಯ ಚುನಾವಣಾ ಪ್ರಾಧಿಕಾರ ಅಂಗೀಕಾರಮಾಡಿದೆ. ಇದರಿಂದ ಐಟಿ, ಇಡಿ ಸೇರಿದಂತೆ ಯಾವುದೇ ದಾಳಿ ಭಯ ಡಿಕೆಶಿಗೆ ಇಲ್ಲ. ನಿರ್ಭಯವಾಗಿ ನಿರ್ಭೀತಿಯಿಂದ ಚುನಾವಣಾ ಕಾರ್ಯಗಳಲ್ಲಿ ಭಾಗಿಯಾಗಬಹುದು. ಇನ್ನು ಅಣ್ಣನ ನಾಮ ಪತ್ರ ಅಂಗೀಕಾರವಾದ ಹಿನ್ನೆಲೆ ಡಿ.ಕೆ. ಸುರೇಶ್ ನಾಮಪತ್ರವನ್ನು ಹಿಂಪಡೆಯುವ ಸಾಧ್ಯತೆ ಇದೆ.
ಮನ್ಮುಲ್ ಅಧ್ಯಕ್ಷ ರಾಮಚಂದ್ರುಗೆ ಒಲಿದ ಮಂಡ್ಯ ಟಿಕೆಟ್. ಮಂಡ್ಯದಲ್ಲಿ ಭುಗಿಲೆದ್ದ ಜೆಡಿಎಸ್ ಪಕ್ಷದ ಬಂಡಾಯದ ಕಿಚ್ಚು. ಮಂಡ್ಯದ ಶಾಸಕ ಸ್ಥಾನಕ್ಕೆ ಮತ್ತು ಪಕ್ಷಕ್ಕೆ ಎಂ.ಶ್ರೀನಿವಾಸ್ ರಿಸೈನ್. ಇಂದು ಮೂವರು JDS ಟಿಕೆಟ್ ಆಕಾಂಕ್ಷಿಗಳಿಂದ ಪ್ರತ್ಯೇಕ ನಾಮಪತ್ರ ಸಲ್ಲಿಕೆ.
ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ. ಎಲ್ಲಾ ನಾಯಕರು ಸರ್ವ ಸಮ್ಮತದಿಂದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ 40 ಪರ್ಸೆಂಟ್ ಸರಕಾರದ ಬಿಜೆಪಿ 40 ಸೀಟು ಗೆಲ್ಲಲು ಸಾಧ್ಯವಿಲ್ಲ. ಹೀಗಿರುವಾಗ 25ಕ್ಕೂ ಹೆಚ್ಚು ಜನರು ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲಾ ಲೇವಡಿ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.