ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇತ್ತೀಚಿನ ಪ್ರಸ್ತಾಪವನ್ನು ಸರ್ಕಾರ ಬುಧವಾರ ತಳ್ಳಿ ಹಾಕಿದ್ದು, ಈ ವಿಷಯದಲ್ಲಿ ಯಾವುದೇ ಮೂರನೇ ವ್ಯಕ್ತಿಗೆ ಪಾತ್ರವಿಲ್ಲ' ಎಂದು ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಭಾರತ ಬಯಸದಿದ್ದರೆ ಕಾಶ್ಮೀರ ವಿಚಾರವಾಗಿ ನಾನು ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದು, ಇದರಿಂದಾಗಿ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ಗೆ ಭಾರೀ ಮುಖಭಂಗವಾಗಿದೆ.
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮುಂದಿನ ವಾರ ನಡೆಯಲಿರುವ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಚಾರವನ್ನು ಎತ್ತುವ ಸಾಧ್ಯತೆ ಇದೆ ಎಂದು ವಕ್ತಾರರು ತಿಳಿಸಿದ್ದಾರೆ.
ಕಲಂ 370 ರಿಂದ ಆಗುವ ಪ್ರಯೋಜನವನ್ನು ವಿವರಿಸುತ್ತಾ ಬಿಜೆಪಿ ಶಾಸಕನೊಬ್ಬ ಇನ್ನು ಮುಂದೆ ಪಕ್ಷದ ಕಾರ್ಯಕರ್ತರು ಕಾಶ್ಮೀರಿ ಸುಂದರಿಯರನ್ನು ಮದುವೆಯಾಗಬಹುದು ಎಂದು ಹೇಳಿರುವ ವೀಡಿಯೋ ಈಗ ವೈರಲ್ ಆಗಿದೆ. ಮುಜಾಫರ್ ನಗರ್ ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ವಿಕ್ರಮ ಸೈನಿ ಅವರು "ಸರ್ಕಾರದ ಕಾಶ್ಮೀರ ನಿರ್ಧಾರದಿಂದ, ಬಿಜೆಪಿ ಕಾರ್ಯಕರ್ತರು ಈಗ ಅಲ್ಲಿಗೆ ಹೋಗಬಹುದು, ಜಮೀನುಗಳನ್ನು ಖರೀದಿಸಬಹುದು ಮತ್ತು ಮದುವೆಯಾಗಬಹುದು" ಎಂದು ಹೇಳಿದರು.
ಕಳೆದ ವಾರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಿದ್ದ ಟ್ರಂಪ್, ಕಾಶ್ಮೀರ ಗಡಿ ಸಮಸ್ಯೆ ಬಗೆಹರಿಸಲು ತಾವು ಸಹಾಯ ಮಾಡಲು ಸಿದ್ಧ ಇರುವುದಾಗಿ ಹೇಳಿದ್ದರು. ಆದರೆ, ಡೊನಾಲ್ಡ್ ಟ್ರಂಪ್ ಅವರ ಸಹಾಯಹಸ್ತವನ್ನು ಭಾರತ ತಿರಸ್ಕರಿಸಿದೆಯಾದರೂ, ಪಾಕ್ ಟ್ರಂಪ್ ಹೇಳಿಕೆಯನ್ನು ಸ್ವಾಗತಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.