ಕಿಡ್ನಿ ಸ್ಟೋನ್ ಆದಾಗ ಸಾಮಾನ್ಯವಾಗಿ ಆಪರೇಷನ್ ಮಾಡಬೇಕು ಎಂದು ಹೇಳಲಾಗುತ್ತದೆ. ಆದರೆ ಆಪರೇಷನ್ ಇಲ್ಲದೆ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ಕಿಡ್ನಿ ಸ್ಟೋನ್ ಗಳನ್ನು ಹೋಗಲಾಡಿಸಬಹುದು.
ಕಿಡ್ನಿ ಸ್ಟೋನ್ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಕಿಡ್ನಿ ದೇಹವನ್ನು ನಿರ್ವಿಶ್ಗೊಲಿಸುತ್ತದೆ. ಅಂದರೆ ಅಗತ್ಯವಿಲ್ಲದ ಕಲ್ಮಷಗಳನ್ನು ದೇಹದಿಂದ ಹೊರ ಹಾಕುವ ಕೆಲಸ ಮಾಡುತ್ತದೆ.
Harmful Foods For Kidney: ಕಿಡ್ನಿ ಸ್ಟೋನ್ ಇರುವವರು ಮೂತ್ರ ವಿಸರ್ಜಿಸುವಾಗ ನೋವು, ಪದೇ ಪದೇ ಶೌಚಕ್ಕೆ ಹೋಗುವುದು, ಹೊಟ್ಟೆ ನೋವು, ಹಸಿವಾಗದಿರುವುದು ಮತ್ತು ವಾಕರಿಕೆ ಕಾಣಿಸಿಕೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕೆಲವು ವಿಷಯಗಳಿಂದ ದೂರವಿರುವುದು ಅವಶ್ಯಕ.
ಕಿಡ್ನಿ ಸ್ಟೋನ್ ಗೆ ಪ್ರಮುಖ ಕಾರಣವೆಂದರೆ ನಾವು ಅನುಸರಿಸುವ ಜೀವನಶೈಲಿ ಮತ್ತು ಆಹಾರ ಪದ್ಧತಿ. ಇದರಿಂದಾಗಿ ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳಲು ಕಾರಣವಾಗುವ ಖನಿಜಗಳು ರಕ್ತದಲ್ಲಿ ಹೆಚ್ಚುತ್ತವೆ.
ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ದರೆ ಪ್ರತಿದಿನ ಒಂದು ಚಮಚ ಆಮ್ಲಾ ಪುಡಿಯನ್ನು ಸೇವಿಸಿ. ಆಮ್ಲಾ ಪುಡಿಯನ್ನು ಸೇವಿಸುವುದರಿಂದ ಮೂತ್ರಪಿಂಡದಲ್ಲಿನ ಕಲ್ಲಿನ ಸಮಸ್ಯೆಯನ್ನು ನಿವಾರಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.