ಬಾಕಿ ಸಾಲ ಮರುಪಾವತಿಯಾಗದ ಹಿನ್ನಲೆಯಲ್ಲಿ ವಿಜಯ ಮಲ್ಯ ಒಡೆತನದ ಯುನೈಟೆಡ್ ಬ್ರಿವರಿಸ್ ಹೋಲ್ಡಿಂಗ್ಸ್ ಲಿಮಿಟೆಡ್ (UBHL) ಕಂಪನಿಯ ವ್ಯವಹಾರ ಸ್ಥಗಿತಗೊಳಿಸಿ ಬಾಕಿ ವಸೂಲಿ ಮಾಡುವಂತೆ ಕರ್ನಾಟಕ ರಾಜ್ಯ ಹೈಕೋರ್ಟ್ ಅದೇಶಿಸಿತ್ತು. ಈ ಆದೇಶವನ್ನು ಸೋಮವಾರ ಸುಪ್ರೀಂ ಕೋರ್ಟ್ ಸೋಮವಾರ ಎತ್ತಿಹಿಡಿದಿದೆ.
ಮದ್ಯ ಬ್ಯಾರನ್ ವಿಜಯ್ ಮಲ್ಯ ಮಂಗಳವಾರ (ಮಾರ್ಚ್ 31) ತಮ್ಮ ಕಂಪನಿ ಕಿಂಗ್ಫಿಶರ್ ಏರ್ಲೈನ್ಸ್ ಎರವಲು ಪಡೆದ ಮೊತ್ತದ 100% ಅನ್ನು ಬ್ಯಾಂಕುಗಳಿಗೆ ಪಾವತಿಸಲು ಇನ್ನೂ ಸಿದ್ಧರಿದ್ದಾರೆ ಎಂದು ಪುನರುಚ್ಚರಿಸಿದರು.
ಕಿಂಗ್ಫಿಶರ್ ಏರ್ಲೈನ್ಸ್ನ ಮಾಜಿ ಮಾಲೀಕ 64 ವರ್ಷದ ವಿಜಯ್ ಮಲ್ಯ ಅವರು ಭಾರತದಲ್ಲಿ ವಂಚನೆ ಮತ್ತು ಮನಿ ಲಾಂಡರಿಂಗ್ ಆರೋಪ ಎದುರಿಸುತ್ತಿದ್ದಾರೆ. ಇಡಿ ಮತ್ತು ಸಿಬಿಐ ಈ ಬಗ್ಗೆ ತನಿಖೆ ನಡೆಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.