ಚಾಮರಾಜಪೇಟೆ ಈದ್ಗಾ ಮೈದಾನದ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ಆ ಜಾಗ ಕಂದಾಯ ಇಲಾಖೆಯದ್ದು ಅಂತ ಸರ್ಕಾರ ಡಿಕ್ಲೇರ್ ಮಾಡಿದೆ. ಅದು ಸರ್ಕಾರದ್ದು ಅಂದ ಮೇಲೂ ಸಹ ಅಲ್ಲಿಯ ಶಾಸಕ ಕೋಮುಗಲಭೆ ಸೃಷ್ಟಿಸುತ್ತಿದ್ದಾರೆ. ಹಿಂದೂಗಳ ಮೇಲೆಯೇ ಹೆಚ್ಚು ಕೇಸ್ಗಳಾಗಿವೆ. ಅದಕ್ಕಾಗಿಯೇ ರಾಜ್ಯದಲ್ಲಿ ಬಿಜೆಪಿ ಮೇಲೆ ಜನರು ಸಿಟ್ಟಾಗಿದ್ದಾರೆ ಎಂದಿದ್ದಾರೆ.
ಮುಸ್ಲಿಮರು ಅಯೋಧ್ಯಾ ಮಾದರಿ ಹೋರಾಟಕ್ಕೆ ಅವಕಾಶ ಕೊಡಬಾರದು. ದೇಶದಲ್ಲಿರುವ 30 ಸಾವಿರ ಮಸೀದಿಗಳನ್ನು ಹೊಡೆದು ಮಂದಿರಗಳನ್ನ ಕಟ್ಟುವ ಕೆಲಸ ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡ್ತಿರೋದಕ್ಕೆ ಸರ್ಕಾರವನ್ನು ಅಭಿನಂದನೆ ಸಲ್ಲಿಸ್ತೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಬಾಗಲಕೋಟೆಯ ಇಳಕಲ್ನಲ್ಲಿ ಮಾತನಾಡಿದ ಮುತಾಲಿಕ್, ಇವತ್ತು ಇದರ ಅವಶ್ಯಕತೆ ಬಹಳ ಇದೆ. ಈ ದೇಶದಲ್ಲಿ ಮತಾಂತರ ಅನ್ನೋದು ಒಂದು ಗಂಡಾಂತರ. ಮತಾಂತ ಮಾಡಲು ಯತ್ನಿಸಿದ್ರೆ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಸಿದ್ದಾರೆ.
ಇತ್ತೀಚೆಗೆ ಹಿಂದೂ ಹುಡುಗಿಯರು ಲವ್ ಜಿಹಾದ್ ಮೂಲಕ ಮೋಸದ ಬಲೆಗೆ ಸಿಕ್ಕಿಕೊಂಡು ಮತಾಂತರ ಮಾಡೋದು ನಿರಂತರವಾಗಿ ನಡೀತಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಲವ್ ಜಿಹಾದ್ ಬಗ್ಗೆ 2 ದಿನಗಳ ಅಭ್ಯಾಸ ವರ್ಗದಲ್ಲಿ ಜ್ಞಾನ ಮತ್ತು ಎಚ್ಚರಿಕೆ ಕೊಡುವ ಕೆಲಸ ಮಾಡ್ತೇವೆ ಎಂದಿದ್ದಾರೆ.
ಮದರಸಾಗಳಲ್ಲಿ ಹಿಂದೂ ವಿರೋಧಿ ಕುರಾನ್ ಅರೆದು ಕುಡಿಸಲಾಗುತ್ತೆ. ಮದರಸಾಗಳಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಹಿಂದೂ ವಿರೋಧಿಗಳಾಗಿ, ಭಯೋತ್ಪಾದಕರಾಗಿಯೇ ಹೊರಬರ್ತಾರೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಜಡ್ಜ್ ಕೊಲ್ಳುವುದೆಂದರೆ ಡಾ.ಅಂಬೇಡ್ಕರ್ ಕೊಂದಂತೆ ಸಂವಿಧಾನವನ್ನು ಕೊಂದಂತೆ. ಜಡ್ಜ್ಗೆ ಬೆದರಿಕೆ ಹಾಕಿದವನಿಗೆ ಜಾಮೀನು ಕೊಟ್ಟರೆ ಹಿಂದೂ ಸಮಾಜ ಬಿಡುವುದಿಲ್ಲ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ..
ಪ್ರಮೋದ್ ಮುತಾಲಿಕ್ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ತಪ್ಪಿತಸ್ಥರು ಯಾರೇ ಆದರೂ ಕಠಿಣ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.